ಅಡಿಕೆ, ಕೊಕ್ಕೋ ಬೆಳೆಗಾರರ ಜೊತೆಗಾರ ; ಸ್ವದೇಶಿ ಚಿಂತನೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಸಂಸ್ಥೆಯ ತೇಜೋವಧೆಗೆ ವ್ಯವಸ್ಥಿತ ಸಂಚು ಹೂಡಿದ್ದಾರೆಯೇ..!? – ದಾಳಿ ನಡೆದಿಯೇ..? ಇಲ್ಲಿದೆ Exclusive ಸ್ಟೋರಿಯ ಅಸಲಿ ಸ್ಟೋರಿ – ಕಹಳೆ ನ್ಯೂಸ್
ಪುತ್ತೂರು : ಇಂದು ೪೭ರ ಹರೆಯದ ಜಟ್ಟಿಗ ಜವಣ. ೧೯೭೩ ಜುಲೈ ೧೧ರಂದು ಬೆಳೆಗಾರರು ಬೆಳೆಗಾರರಿಗಾಗಿಯೇ ಹುಟ್ಟುಹಾಕಿದ ಸಂಸ್ಥೆ ಇದೀಗ ೪೮ರ ಹರೆಯಕ್ಕೆ ಕಾಲಿಟ್ಟಿದೆ. ನಾಲ್ಕು ದಶಕಗಳ ಹಿಂದಿನ ಮಾತು. ಅಡಿಕೆ ಬೆಳೆ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿತ್ತಷ್ಟೇ. ಮಾರುಕಟ್ಟೆ ಇನ್ನು ಬೆಳೆದಿರಲಿಲ್ಲ. ಕರ್ನಾಟಕ ಹಾಗೂ ಕೇರಳದ ಅಡಿಕೆ, ಕೊಕ್ಕೋ ಬೆಳೆಗಾರರ ಮಾರುಕಟ್ಟೆ ಸಂಕಷ್ಟವನ್ನು ಮನಗಂಡು ಬೆಳೆಗಾರರು ಬೆಳೆಗಾರರಿಗಾಗಿಯೇ ಹುಟ್ಟುಹಾಕಿದ ಸಂಸ್ಥೆ ಕ್ಯಾಂಪ್ಕೋ. ವಾರಣಾಸಿ ಸುಬ್ರಾಯ ಭಟ್ ಅವರು ಹುಟ್ಟುಹಾಕಿದ ಸಂಸ್ಥೆಯನ್ನು...