Sunday, November 24, 2024

archiveKahalenews

ಸುದ್ದಿ

ರಾಹುಲ್ ಗಾಂಧಿ ಹೋಳಿ ಆಟ ; ಕಾಂಗ್ರೆಸ್ ಧೂಳಿಪಟ – ಕಹಳೆ ನ್ಯೂಸ್

ಬೆಂಗಳೂರು: ರಾಹುಲ್ ಗಾಂಧಿ ತಮ್ಮ 94 ವರ್ಷದ ಅಜ್ಜಿಗೆ ಸರ್ಪೈಸ್ ನೀಡುವ ಕಾರಣವಾಗಿ ನಿನ್ನೆಯೇ ಹೋಳಿ ಹಬ್ಬದ ಪ್ರಯುಕ್ತ ಇಟಲಿಗೆ ಹಾರಿದ್ದಾರೆ. ಆದರೆ ದೇಶದಲ್ಲಿ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ 2 ರಾಜ್ಯಗಳಲ್ಲಿ ಧೂಳಿ ಪಟವಾದರೆ ಒಂದು ರಾಜ್ಯದಲ್ಲಿ ಅಲ್ಪ ಮಟ್ಟದ ಮಾನ ಉಳಿಸಿ ಸರ್ಕಾರ ರಚನೆಯತ್ತ ಮುಖ ಮಾಡಿದೆ. ಇಟಲಿಯಲ್ಲಿ ಎಂಜಾಯ್ ಮೂಡಿನಲ್ಲಿ ಇರುವ ರಾಹುಲ್ ರವರಿಗೆ ಈ ಚುನಾವಣಾ ಫಲಿತಾಂಶ ಮೊದಲೇ ಗೊತ್ತಿತ್ತು ಎಂದಾದರೂ, ಸೋತ ಕಾರ್ಯಕರ್ತರಿಗೆ, ಮುಖಂಡರಿಗೆ...
ಸುದ್ದಿ

ತ್ರಿಪುರದಲ್ಲಿ ಬಿಜೆಪಿ ಗೆಲುವು : ಕೆಂಪು ಉಗ್ರರಿಗೆ ಭಾರಿ ಮುಖಭಂಗ, ಮೋದಿಗೆ ಜೈ ಎಂದ ಜನ!

ಬೆಂಗಳೂರು: ತ್ರಿಪುರ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ 51 ಸ್ಥಾನಗಳಲ್ಲಿ ಹಾಗೂ ಮೈತ್ರಿ ಮಾಡಿಕೊಂಡಿರುವ ಐಪಿಎಫ್ಟಿ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಸಿಪಿಎಂ 57 ಸ್ಥಾನಗಳಲ್ಲಿ ಹಾಗೂ ಅದರ ಮೈತ್ರಿ ಪಕ್ಷಗಳಿಗೆ 2 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಸಿಪಿಎಂ...
ಸುದ್ದಿ

ಮೋದಿ ಹಿಟ್ಲರ್ – ಅಮಿತ್ ಶಾ ಪೇಪರ್ ಟೈಗರ್ – ಕೆ.ಜೆ. ಜಾರ್ಜ್

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಬ್ಬ ಪೇಪರ್ ಟೈಗರ್, ಪ್ರಧಾನಿ ನರೇಂದ್ರ ಮೋದಿ ಒಬ್ಬ ಹಿಟ್ಲರ್ ಎಂಬ ಮಾತು ನಿಜ ಎಂದು ಸಚಿವ ಕೆ.ಜೆ. ಜಾರ್ಜ್ ಇದೇ ವೇಳೆ ವಾಗ್ದಾಳಿ ನಡೆಸಿದರು. ನಾವು ಬಹಳಷ್ಟು ಹುಲಿಗಳನ್ನು ನೋಡಿದ್ದೇವೆ. ಶಾ ಒಬ್ಬ ಪೇಪರ್ ಟೈಗರ್ ಅಷ್ಟೆ. ಇನ್ನು ಮೋದಿ ಅವರನ್ನು ಗುಜರಾತ್ ಲಯನ್ ಬರುತ್ತೆ ಅಂತಾರಲ್ಲ ಬಿಜೆಪಿಯವರು ನಮ್ಮ ಬನ್ನೇರುಘಟ್ಟದಲ್ಲೂ ಸಾಕಷ್ಟು ಸಿಂಹಗಳಿವೆ. ಸಿಂಹ ಕಾಡಿನಲ್ಲಿದ್ದರೆ ಮಾತ್ರ...
ಸುದ್ದಿ

45 ವರ್ಷ ಕಟೀಲು ಮೇಳದಲ್ಲಿ ತಿರುಗಾಟನಡೆಸಿದ ಕಲಾವಿದನಿಗೆ ಸೂರುಕಟ್ಟಿಕೊಟ್ಟ ಪಟ್ಲ | ಪಟ್ಲ ಯಕ್ಷಾಶ್ರಯದ ದ್ವಿತೀಯ ಮನೆ ‘ ಶ್ರೀದೇವಿ ನಿಲಯ’ದ ಗೃಹಪ್ರವೇಶ ಸಮಾರಂಭ

ಮಂಗಳೂರು : ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇದರ ವತಿಯಿಂದ ಕಟೀಲು ಮೇಳದಲ್ಲಿ 45 ವರ್ಷಗಳ ಕಾಲ ಕಲಾಸೇವೆಗೈದು ಇದೀಗ ಅಶಕ್ತರಾಗಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯ ದ್ವಿತೀಯ ಮನೆಯನ್ನು ನಿರ್ಮಿಸಿಕೊಡುವುದ ಮೂಲಕ ಶ್ಲಾಗನೆಗೆ ಪಾತ್ರರಾಗಿದ್ದಾರೆ. ಸದ್ರಿ ಗೃಹದ ಗೃಹಪ್ರವೇಶ ಸಮಾರಂಭವು ​ದಿನಾಂಕ 19.03.2018 ಸೋಮವಾರ, ಸಮಯ : ಪೂರ್ವಹ್ನ...
ಸುದ್ದಿ

ಮೊಹಮ್ಮದ್ ನಲಪಾಡ್‌ ಜಾಮೀನು ಅರ್ಜಿ ತಳ್ಳಿ ಹಾಕಿದ ನ್ಯಾಯಾಲಯ

ಬೆಂಗಳೂರು: ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಮ್ಮದ್ ನಲಪಾಡ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬೆಂಗಳೂರಿನ 63 ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಿದ್ದು, ಮೊಹಮ್ಮದ್ ನಲಪಾಡ್‌ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಆರೋಪಿ ಪ್ರಭಾವಿಯಾಗಿರುವುದರಿಂದ ಜಾಮೀನು ಬೇಡ. ಆರೋಪಿಗಳು ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ ಎಂದು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಾಲಯ ಮೊಹಮ್ಮದ್ ನಲಪಾಡ್‌...
ಸುದ್ದಿ

ಕಶೆಕೋಡಿ ಬ್ರಹ್ಮಕಲಶೋತ್ಸವದಲ್ಲಿ ಜನಮನರಂಜಿಸಿದ ಕಲಾಸಿಂಧು ಪುತ್ತೂರು ಜಗದೀಶ್ ಆಚಾರ್ಯ ತಂಡದ ಭಕ್ತಿಗಾನ ಸಂಭ್ರಮ – ಕಹಳೆ ನ್ಯೂಸ್

ಬಂಟ್ವಾಳ : ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಅಚಾರ್ಯ ಕಲಾ ಸಿಂಧು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಜನಮನರಂಜಿಸಿತು. ಪುತ್ತೂರು ಜಗದೀಶ್ ಅಚಾರ್ಯ ಸಂಜೆ 8 ರಿಂದ ನಡೆದ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ, ದಾಸರ ಪದಗಳು, ಜಗದೀಶ್ ಕಂಠಸಿರಿಯಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಜನಸ್ತೋಮದ ಹರ್ಷೋದ್ಘಾರ ಮುಗಿಲು ಮುಟ್ಟಿಟ್ಟು. ವರದಿ : ಕಹಳೆ...
ಸುದ್ದಿ

ಬನ್ನಂಜೆ, ಡಾ.ಎನ್ನೆಸ್ಸೆಲ್‌ ಸೇರಿ ಐವರಿಗೆ ಗೌರವ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ.ಎಚ್‌.ಜೆ. ಲಕ್ಕಪ್ಪಗೌಡ ಹಾಗೂ ಕಸ್ತೂರಿ ಬಾಯರಿ ಅವರಿಗೆ ಪ್ರಶಸ್ತಿ ಲಭಿಸಿದೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. "ಉದಯವಾಣಿ'ಯ ಹಿರಿಯ ಮುಖ್ಯ ಉಪಸಂಪಾದಕ ಎ.ಆರ್‌.ಮಣಿಕಾಂತ್‌ ಹಾಗೂ ಪತ್ರಕರ್ತ ಹ.ಚ.ನಟೇಶಬಾಬು ಅವರ "ಗಿಫೆrಡ್‌' (ಕಥೆಗಳು) ಅನುವಾದ- 1 (ಸೃಜನಶೀಲ ವಿಭಾಗ) ಕೃತಿಯು ಅತ್ಯುತ್ತಮ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಅಕಾಡೆಮಿಯು ಇದೇ ಮೊದಲ ಬಾರಿಗೆ ನೀಡುತ್ತಿರುವ "ಸಾಹಿತ್ಯಶ್ರೀ'...
ಸುದ್ದಿ

Big Breaking : ತೆಲಂಗಾಣ-ಛತ್ತೀಸ್‌ಘಡ ಗಡಿಯಲ್ಲಿ ಕನಿಷ್ಠ 12ನಕ್ಸಲರ ಎನ್‌ಕೌಂಟರ್‌

ಕೊಥಗುಂಡಮ್‌: ತೆಲಂಗಾಣ-ಛತ್ತೀಸ್‌ಘಡದ ಗಡಿಭಾಗದಲ್ಲಿರುವ ವೆಂಕಟಾಪುರಂ ಮಂಡಲ್‌ ಎಂಬಲ್ಲಿ ನಕ್ಸಲ್‌ ನಿಗ್ರಹ ಪಡೆ ನಡೆಸಿರುವ ಭಾರೀ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಮಂದಿ ನಕ್ಸಲರನ್ನು ಹತ್ಯೆಗೈಯಲಾಗಿರುವ ಬಗ್ಗೆ ವರದಿಯಾಗಿದೆ. ಕೂಂಬಿಂಗ್‌ ವೇಳೆ ನಕ್ಸಲರೊಂದಿಗೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಹಿರಿಯ ಮಾವೋವಾದಿ ನಾಯಕ ಹರಿ ಭೂಷಣ್‌ ಹತ್ಯೆಗೀಡಾಗಿದ್ದಾನೆ ಎಂದು ಶಂಕಿಸಲಾಗಿದೆ. ನಿಖರವಾಗಿ ಸಾವಿನ ಸಂಖ್ಯೆ ಇನ್ನಷ್ಟೆ ತಿಳಿದು ಬರಬೇಕಿದೆ ಎಂದು ಸುಕ್ಮಾದ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಮೀನಾ ತಿಳಿಸಿದ್ದಾರೆ. ನಕ್ಸಲರ ಮೃತ ದೇಹಗಳನ್ನು ತೆಲಂಗಾಣದ...
1 21 22 23 24 25 28
Page 23 of 28