Friday, September 20, 2024

archiveKahalenews

ಸುದ್ದಿ

ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗಳೂರು ರಕ್ಷಿಸಿ’ ಯಾತ್ರೆ – ಕಹಳೆ ನ್ಯೂಸ್

ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ. ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ. ಸಂಜೆ 4 ಗಂಟೆಗೆ...
ಸುದ್ದಿ

ನಾನು ನಿಜವಾದ ರಾಮ ಭಕ್ತ | ನನಗೆ ಕೊಲ್ಲೂರು ಮೂಕಾಂಬಿಕೆಯ ಆಶೀರ್ವಾದ ವಿದೆ – ರಮಾನಾಥ ರೈವರ ಭಾಷಣ ನೀವೇ ಕೇಳಿ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಕಲ್ಲಡ್ಕ ಶಾಲೆ ಬಗ್ಗೆ ತೆಗಳಿ, ಶ್ರೀರಾಮ ದೇವರ ನಿಜವಾದ ಭಕ್ತ ನಾನು ಎಂದ ಭಾಷಣ ಈಗ ವೈರಲ್ ಆಗಿದೆ. ರಮಾನಾಥ ರೈ ಅವರ ಭಾಷಣ : ಕಹಳೆ ನ್ಯೂಸ್ ನಲ್ಲಿ - Subscribe - YouTube #KahaleNews https://youtu.be/SNAPAxNcRXA...
ಸುದ್ದಿ

“ಶಕ್ಕು ಅಕ್ಕ ನೂದು ವರ್ಷ ಬದುಕಡ್” ಆಶೀರ್ವದಿಸಿದ್ರು 85 ವರ್ಷದ ವಯೋವೃದ್ಧೆ – ಯಾಕೆ ಅಂತೀರಾ? ಈ ವರದಿ ನೋಡಿ

ಪುತ್ತೂರು : ನರಿಮೊಗರು ಗ್ರಾಮ 85 ವರ್ಷದ ವಯೋವೃದ್ಧೆ ಕಳೆದ ಹತ್ತಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಳು, ಇದನ್ನರಿತ ಪುತ್ತೂರಿನ ಜನಪ್ರೀಯ ಶಾಸಕಿ ಶುಕುಂತಲಾ ಶೆಟ್ಟಿ ಹಕ್ಕು ಪತ್ರ ಮಾಡಿಸಿ, ವಯೋವೃದ್ಧೆಯ ಕಷ್ಟ ಪರಿಹರಿಸಿದ್ದಾರೆ. ಆ ವಯೋವೃದ್ಧೆ ಧನ್ಯವಾದಗಳು ಶಕುಂತಳಾ ಶೆಟ್ಟಿಯವರಿಗೆ ಅವರು ನೂರು ವರ್ಷ ಬದುಕಲಿ ಎಂದು ಆಶೀರ್ವದಿಸಿದ್ದಾರೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಶಕುಂತಲಾ ಶೆಟ್ಟಿಯವರ ಈ ಕಾರ್ಯಕ್ಕೆ ವ್ಯಪಕ ಮನ್ನಣೆ...
ಸುದ್ದಿ

ರಾಜ್ಯದ್ಯಂತ ಪಿಯುಸಿ ಪರೀಕ್ಷೆ ಆರಂಭ- ಸಿಸಿಟಿವಿ ಕ್ಯಾಮೆರಾದ ವಿಶೇಷ ನಿಗಾ – ಕಹಳೆ ನ್ಯೂಸ್

ಮಂಗಳೂರು,ಮಾ 01:  ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ರಾಜ್ಯಾದ್ಯಂತ 1004 ಕೆಂದ್ರದಲ್ಲಿ ನಡೆಯುವ ಪರೀಕ್ಷೆಯಲ್ಲಿ 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಿಗ್ಗೆ 10.15 ರಿಂದ ಆರಂಭಗೊಂಡು ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಮತ್ತು ಪ್ರಶ್ನೆ ಪತ್ರಿಕೆ ಸರಬರಾಜು ಮಾಡುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಯಾವುದೇ ಗೊಂದಲವಿಲ್ಲದೇ ಪರೀಕ್ಷೆ ನಡೆಸಲು ಎಲ್ಲಾ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 54...
ಸುದ್ದಿ

ಆಶೋಕ್ ಕುಮಾರ್ ರೈ ಗೌರವಾಧ್ಯಕ್ಷತೆಯಲ್ಲಿ ಇಂದು ಉಪ್ಪಿನಂಗಡಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಢೇಷನ್ನಿನ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭ | ಯಕ್ಷ – ಗಾನ – ಹಾಸ್ಯ – ನಾಟ್ಯ ವೈಭವ

ಉಪ್ಪಿನಂಗಡಿ : ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕಲಾವಿದರ ಕಾಮಧೇನುಯವಾದ ಯಕ್ಷಧ್ರುವ ಪಟ್ಲ ಫೌಂಡೇಷನ್ ರಿ. ಮಂಗಳೂರು ಇದರ ಅಶೋಕ್ ಕುಮಾರ್ ರೈ ಗೌರವಾಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭ ಉಪ್ಪಿನಂಗಡಿ ನಡು ಮಖೆಯ ಸಂದರ್ಭದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರಲ್ಲಿ ನಡೆಯಲಿದೆ.    ಯಕ್ಷಧ್ರುವ ಉಪ್ಪಿನಂಗಡಿ ಘಟಕವನ್ನು ಹಿರಿಯ ಯಕ್ಷಗಾನ ಕಲಾವಿದ ವೆಂಕಟರಮಣ ಭಟ್ ಪತಾಳ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪುತ್ತೂರಿನ ಶಾಸಕಿ ಟಿ....
ಸುದ್ದಿ

ಕಾರ್ತಿ ಚಿದಂಬರಂ ಅರೆಸ್ಟ್!

ದೆಹಲಿ : ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ರನ್ನ ಇಂದು ಬೆಳ್ಳಂಬೆಳಿಗ್ಗೆ ಸಿಬಿಐ ಪೋಲೀಸರು ಚೆನ್ನೈ ನಲ್ಲಿ ಬಂಧಿಸಿದ್ದಾರೆ. ಹಲವು ದಿನಗಳಿಂದ ತನಿಖೆ ನಡೆಯುತ್ತಿದ್ದು ಕೊನೆಗೂ ಕಾರ್ತಿ ಚಿದಂಬರಂ ಬಂಧನವಾಗಿದೆ. ಐ.ಎನ್.ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ...
ಸುದ್ದಿ

ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆ – ಕಹಳೆ ನ್ಯೂಸ್

ಸಾಗರ : ಜೋಗ ಜಲಪಾತದಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್​​ ಪತ್ತೆಯಾಗಿದ್ದಾರೆ. ರಾಜಾ ಫಾಲ್ಸ್​ನ ಬಂಡೆಯಲ್ಲಿ ಜ್ಯೋತಿರಾಜ್ ಕುಳಿತಿದ್ದರು ಎನ್ನಲಾಗಿದೆ. ಬಂಡೆಯ ಬಳಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇದ್ದ ಕಾರಣ ಅವರು ನಿಶ್ಶಕ್ತರಾಗಿ ಅಲ್ಲಿಯೇ ಕುಳಿತಿದ್ದರು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಜ್ಯೋತಿರಾಜ್’ರನ್ನು ಪತ್ತೆ ಮಾಡಿದ್ದಾರೆ. ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೋರ್ವರ ಮೃತದೇಹದ ಪತ್ತೆಗೆಂದು ಜೋಗ ಗುಂಡಿಯೊಳಗೆ ಇಳಿದಿದ್ದರು. ನಿನ್ನೆ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕೆಳಗೆ...
ಸುದ್ದಿ

ಕಂಚಿ ಶ್ರೀಗಳು ಇನ್ನಿಲ್ಲ! ಪಂಚಭೂತಗಳಲ್ಲಿ ಲೀನವಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ

ಚೆನ್ನೈ (ಫೆ. 28): ಕಂಚಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ. ಕಂಚಿ ಕಾಮಕೋಟಿ ಮಠದ ೬೯ ನೇ ಶಂಕರಾಚಾರ್ಯ ಗುರುಗಳು ಇವರಾಗಿದ್ದರು. ೧೯೫೪ ರಿಂದ ಕಂಚಿ ಕಾಮಕೋಟಿ ಮಠದ ಪೀಠಾಧಿಪತಿಯಾಗಿದ್ದರು. ಕೆಲ ದಿನಗಳಿಂದ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ವರದಿ : ಕಹಳೆ ನ್ಯೂಸ್...
1 22 23 24 25 26 28
Page 24 of 28