ಕಠಿಣ ಪರಿಶ್ರಮದ ಕಲಿಕೆಯಿಂದ ಮಾತ್ರ ಅತ್ಯುತ್ತಮ ಯಶಸ್ಸು ಪಡೆಯಲು ಸಾಧ್ಯ ; ಪ್ರಗತಿ ಸ್ಟಡಿ ಸೆಂಟರ್‍ನ ಸಿ.ಇ.ಟಿ ಮತ್ತು ನೀಟ್ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಪ್ರೊ||ರಾಜಾರಾಮ್ – ಕಹಳೆ ನ್ಯೂಸ್
ಪುತ್ತೂರು: “ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟಗಳಿಗೂ ಅಂಜದೆ, ಅಳುಕದೆ ಎದುರಿಸುತ್ತಾ ಮುನ್ನಡೆಯಬೇಕು. ಸಿಡಿಲು-ಮಳೆ ಎದುರಾದರೂ ಕುಗ್ಗದೆ ಗುರಿ ತಲುಪುವಂತಾಗಬೇಕು. ಇದಕ್ಕೆ ವಿಷಯದಲ್ಲಿ ಆಸಕ್ತಿ; ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ; ಕೇಂದ್ರೀಕೃತ ಗಮನ ವಿಷಯದಲ್ಲಿ ಅಳವಾದ ತಿಳುವಳಿಕೆ ನಿರಂತರವಾದ ಅಭ್ಯಾಸ ಅತೀ ಅಗತ್ಯವಾಗಿ ಇರಬೇಕು”. “ವಿದ್ಯಾರ್ಥಿಗಳು ಎಷ್ಟು ವೇಗವಾಗಿ ಪ್ರಶ್ನೆಗಳಿಗೆ ಉತ್ತರಕೊಡಲು ಅಭ್ಯಾಸ ಮಾಡುತ್ತಾರೋ ಅಷ್ಟೇ ವೇಗವಾಗಿ ಸ್ಪರ್ದಾತ್ಮಕ ಸ್ಪರ್ಧೆಗಳಲ್ಲಿ ಉತ್ತರಿಸಲು ಸಾದ್ಯವಾಗುತ್ತದೆ. ಇದರಿಂದ ಮಾತ್ರ ನಿರೀಕ್ಷಿತ ಯಶಸ್ಸು ದೊರೆಯಲು...