Recent Posts

Sunday, January 19, 2025

archiveKambala

ಸುದ್ದಿ

ಕಂಬಳಕ್ಕೆ ಮತ್ತೆ ನಿಷೇಧ ಆಗುತ್ತಾ? – ಕಹಳೆ ನ್ಯೂಸ್

ಹೊಸದೆಲ್ಲಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆಗೆ ಅವಕಾಶ ಒದಗಿಸುವ ಕಾಯ್ದೆಯನ್ನು ಪ್ರಶ್ನಿಸಿ ಪ್ರಾಣಿ ದಯಾ ಆ ಸಂಸ್ಥೆ ಪೆಟಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪಂಚ ಸದಸ್ಯರ ಸಂವಿದಾನ ಪೀಠಕ್ಕೆ ವರ್ಗಾಯಿಸಿದೆ. ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ಧೆಶದಿಂದ ರಾಜ್ಯ ವಿಧಾನಸಭೆ ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ ವಿಧೇಯಕ - 2017 ರ ಸಿಂಧುತ್ವನ್ನು ಪ್ರಶ್ನಿಸಿ ಪೇಟಾ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ...
ಸುದ್ದಿ

ಮಿಂಚಿನ ಓಟಗಾರ ರಾಕೆಟ್ ಮೋಡ ಇನ್ನು ನೆನೆಪು ಮಾತ್ರ – ಕಹಳೆ ನ್ಯೂಸ್

ಮಂಗಳೂರು: ಮನೆ ಮಗನನ್ನು ಕಳೆದುಕೊಂಡಂತೆ ದುಖತಪ್ತರಾದ ಯಜಮಾನ, ತನ್ನ ಆಪ್ತ ಗೆಳೆಯನ್ನು ಕಾಣದೆ ಚಡಪಡಿಸುತ್ತಿರುವ ಜೊತೆಗಾರ, ಪ್ರತಿ ನಿತ್ಯ ಬೆಂಗಾವಲಾಗಿ ನಿಂತು ಆರೈಕೆ ಮಾಡಿ, ಇಂದು ಸರ್ವಸ್ವವನ್ನೆ ಕಳೆದುಕೊಂಡಂತೆ ಕಣ್ಣಿರಿಡುತ್ತಿರುವ ಸೇವಕ, ಮಾನವನ ಅಂತ್ಯ ಸಂಸ್ಕಾರದಂತೆ ಸಕಲ ಗೌರವವನ್ನು ಪಡೆದ ಕೋಣ, ಎಲ್ಲರ ಮನ ಕಲಕುವಂತ ಈ ದೃಶ್ಯ ಕಂಡು ಬಂದಿದ್ದು ನಂದಳಿಕೆ ಶ್ರೀಕಾಂತ ಅವರ ಮನೆಯಲ್ಲಿ. ತುಳುನಾಡಿನ ಹೆಮ್ಮೆಯ ಜನಪದ ಕ್ರೀಡೆ ಕಂಬಳ. ಕಂಬಳ ಕ್ರೀಡೆಯಲ್ಲಿ ಮುಖ್ಯ ಪಾತ್ರ...
ಸುದ್ದಿ

ಕಂಬಳ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ: ಡಿ.ವಿ.ಸದಾನಂದ ಗೌಡ – ಕಹಳೆ ನ್ಯೂಸ್

ಮಂಗಳೂರು: ಕಂಬಳ ತಡೆಯಲು ಪೆಟಾ ಮಾಡುತ್ತಿರುವುದು ಕರಾವಳಿಯ ಜನರ ಮೇಲಿನ ಮಾನಸಿಕ ಹಿಂಸೆ ಎಂದಿರುವ ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ಕಂಬಳ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಕಂಬಳ ಪ್ರಮುಖರ ಜತೆ ಚರ್ಚಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೆಟಾ ಪ್ರಕರಣ ಅ.8ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಕುರಿತು ಅಟಾರ್ನಿ ಜನರಲ್ ಅವರಲ್ಲಿ ಮಾತನಾಡುತ್ತೇನೆ. ಸಮರ್ಥವಾಗಿ ಕಂಬಳ ಪರವಾಗಿ ವಾದಿಸುವುದಕ್ಕೆ...
ಸುದ್ದಿ

ಬಿಜೆಪಿ ಮುಖಂಡ ಅಶೋಕ್ ರೈ ಸಾರಥ್ಯದಲ್ಲಿ 33 ನೇ ವರ್ಷದ ಉಪ್ಪಿನಂಗಡಿ ಕಂಬಳ – ಇದು ವಿಜಯೋತ್ಸವ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಭಾಗಿ – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿ ಕಿನಾರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ 33 ನೇ ವರ್ಷದ ವಿಜಯ -ವಿಕ್ರಮ ಜೋಡುಕರೆ ಬಯಲು ಕಂಬಳವು ಫೆ. 24 ರಂದು ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ. ಕರಾವಳಿಯ ಭಾರಿ ಜನ ಸೇರುವ ಕಂಬಳಗಳಲ್ಲಿ ಇದು ಒಂದು ಎಂಬ ಸಾರ್ವರ್ತಿಕ ಮನ್ನಣೆ ಉಪ್ಪಿನಂಗಡಿಯ ಕಂಬಳಕ್ಕೆ ಪ್ರಾಪ್ತವಾಗಿದೆ. ಕಂಬಳಕ್ಕೆ ಇದ್ದ...
ಸುದ್ದಿ

ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್! ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ – ಕಹಳೆ ನ್ಯೂಸ್

ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಮಸೂದೆಗೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ಈ ಕುರಿತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರೋ ಸೆಹ್ವಾಗ್, `ಕಂಬಳದ ಕುರಿತಂತೆ ರಾಷ್ಟ್ರಪತಿ ಅವರು ಅಂಕಿತ ಹಾಕುವ ಮೂಲಕ ಎಲ್ಲಾ ಅಡೆತಡೆಗಳಿಗೆ ಬ್ರೇಕ್ ಬಿದ್ದಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಕ್ರೀಡೆಗೆ ಉತ್ತೇಜನ ನೀಡಿರುವುದು ಸಂತಸ ತಂದಿದೆ. ಪ್ರಾಣಿ...