Recent Posts

Friday, November 22, 2024

archivekasaragod

ಸುದ್ದಿ

ಅಕ್ರಮ ಚಿನ್ನಾಭರಣ ಸಾಗಾಟ ; ಕಾಸರಗೋಡಿನ ನೆಲ್ಲಿಕುಂಜೆಯ ಅಬ್ದುಲ್ ಸಅದ್ ಮತ್ತು ಸಮೀರ್ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಸೆ 3 : ಅಕ್ರಮವಾಗಿ ಚಿನ್ನಾಭರಣ ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಚಿನ್ನಾಭರಣ ಸಹಿತ ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನೆಲ್ಲಿಕುಂಜೆಯ ಅಬ್ದುಲ್ ಸಅದ್(30) ಮತ್ತು ಸಮೀರ್(30) ಎಂದು ಗುರುತಿಸಲಾಗಿದೆ. ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಇವರನ್ನು ಬಂಧಿಸಲಾಗಿದ್ದು, ಸುಮಾರು 1.2ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಆರೋಪಿಗಳು ಕಾಸರಗೋಡಿಗೆ ಚಿನ್ನಾಭರಣ ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು...
ಸುದ್ದಿ

ಕಾಸರಗೋಡು ಕನ್ನಡ ಮಕ್ಕಳ ಹೋರಾಟಕ್ಕೆ ಗೆಲುವು ; ದಿಗ್ಬಂಧನಕ್ಕೆ ಮಣಿದು ರಜೆ ಮೇಲೆ ತೆರಳಿದ ಮಲಯಾಳ ಶಿಕ್ಷಕ – ಕಹಳೆ ನ್ಯೂಸ್

ಕಾಸರಗೋಡು, ಆ 29 : ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕನ ನೇಮಕ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದೆ. ಕಳೆದ ಒಂದು ತಿಂಗಳಿನಿಂದ ಮಂಗಲ್ಪಾಡಿ ಸರಕಾರಿ ಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದು , ಹೋರಾಟಕ್ಕೆ ಪೋಷಕರು , ಕನ್ನಡ ಹೋರಾಟ ಸಮಿತಿ , ಕನ್ನಡ ಭಾಷಾಭಿಮಾನಿಗಳು, ಹಾಗೂ ವಿವಿಧ ಪಕ್ಷ , ಸಂಘಟನೆಗಳ ಬೆಂಬಲ ಲಭಿಸುವ ಮೂಲಕ ಕನ್ನಡಿಗರ ಹಕ್ಕಿಗಾಗಿರುವ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಮಂಗಲ್ಪಾಡಿ ಸರಕಾರಿ...
ಸುದ್ದಿ

ಕಾಸರಗೋಡಿನಲ್ಲಿ ಬಿಜೆಪಿ ಹಣಿಯಲು ಬದ್ದ ವೈರಿಗಳ ರಣತಂತ್ರ – ಕಹಳೆ ನ್ಯೂಸ್

ಕಾಸರಗೋಡು, ಆ 08 : ಕೇರಳದಲ್ಲಿರುವ ಆಡಳಿತ ಮತ್ತು ಪ್ರತಿಪಕ್ಷ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯತೊಡಗಿದ್ದು , ಅತ್ತ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡಿ ಮಹಾಮೈತ್ರಿ ರಚನೆ ಬಿರುಸಾಗಿ ನಡೆಯುತ್ತಿದ್ದರೆ ಇತ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಕೇರಳದಲ್ಲಿ ಆಡಳಿತ ಸಿಪಿಐ ಎಂ ನೇತೃತ್ವದ ಎಲ್ ಡಿ ಎಫ್ ಮತ್ತು...
ಸುದ್ದಿ

ಕುಸಿದು ಬೀಳುವ ಸ್ಥಿತಿಯಲ್ಲಿರುವ ನೀರ್ಚಾಲು ಬಸ್‌ ನಿಲ್ದಾಣ – ಕಹಳೆ ನ್ಯೂಸ್

ಬದಿಯಡ್ಕ: ಕುಂಬಳೆ- ಬದಿಯಡ್ಕ-ಮುಳ್ಳೇರಿಯ ರಸ್ತೆಯ ಮಧ್ಯೆ ಬೆಳೆಯುತ್ತಿರುವ ಪೇಟೆಗಳ ಪೈಕಿ ನೀರ್ಚಾಲು ಬಹುಮುಖ್ಯವಾಗಿದ್ದರೂ ಸೌಲಭ್ಯಗಳ ಕೊರತೆಯನ್ನು ಎದುರಿ ಸುತ್ತಿರುವುದು ಕಂಡುಬರುತ್ತದೆ. ನೀರ್ಚಾಲು ಪೇಟೆ ಜನದಟ್ಟಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ತೀವ್ರ ಹೆ„ರಾಣಗೊಂಡು ನಲುಗುತ್ತಿರುವುದೂ ಸತ್ಯ. ಕಾಸರಗೋಡಿನಿಂದ ವಿದ್ಯಾನಗರ ಮೂಲಕವಾಗಿ ಮಾನ್ಯ ನೀರ್ಚಾಲು, ಕಾಸರಗೋಡು ಮಧೂರು ನೀರ್ಚಾಲಿಗೆ ಅತಿ ನಿಕಟ ರಸ್ತೆ ಸೌಕರ್ಯ-ಬಸ್‌ ಸೌಲಭ್ಯ ಇದ್ದು, ನೀರ್ಚಾಲಿನಲ್ಲಿ ಒಂದನೇ ತರಗತಿಯಿಂದ ಪ್ಲಸ್‌ ಟು ವರೆಗಿನ ವಿದ್ಯಾಭ್ಯಾಸ ಸೌಕರ್ಯದ...
ಸುದ್ದಿ

ತಲಪಾಡಿ – ಕಾಸರಗೋಡು ಹೆದ್ದಾರಿ ಗುಂಡಿ ; ಸಂಚಾರ ಸಮಸ್ಯೆ – ಕಹಳೆ ನ್ಯೂಸ್

ಕುಂಬಳೆ: ಮಳೆಗೆ ಹೆದ್ದಾರಿಯಲ್ಲಿ ಹೊಂಡಗಳಾಗಿ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಆದರೆ ಇದು ತಮಗೆ ಸಂಬಂಧ ಪಟ್ಟದಲ್ಲವೆಂದು  ಇಲಾಖೆ ಅಧಿಕಾರಿಗಳು ಬೆಚ್ಚಗೆ  ಹೊದ್ದು ಮಲಗಿದ್ದಾರೆ. ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪ್ಪಾಡಿಯಿಂದ ಕಾಸರಗೋಡು ತನಕ ರಸ್ತೆಯುದ್ದಕ್ಕೂ ಇಂಗು ಗುಂಡಿಗಳಾಗಿವೆ.ಕೆಲ ಕಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹಳ್ಳ ಸೃಷ್ಟಿಯಾಗಿದೆ.ತಲಪ್ಪಾಡಿ,ಮಂಜೇಶ್ವರ,ಉಪ್ಪಳ,ಕುಂಬಳೆ,ಪೆರ್ವಾಡು, ಮೊಗ್ರಾಲ್‌,ಚೌಕಿ,ಕೊಪ್ಪರಬಜಾರ್‌,ಅಡ್ಕತ್ತಬೈಲು,ತಾಳಿಪ್ಪಡು,ಕರಂದಕ್ಕಾಡು ಮೊದಲಾದೆಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹೊಂಡಗಳು ಸೃಷ್ಟಿಯಾಗಿ ವಾಹನಗಳಿಗೆ ಸಂಚರಿಸಲು ತೊಡಕಾಗಿದೆ.ಇದರಿಂದ  ರಸ್ತೆಯಲ್ಲಿ ವಾಹನಗಳು ಜೋಕಾಲಿಯಾಡುತ್ತಿದೆ.ಬಸ್‌ನಲ್ಲಿ ಪ್ರಯಾಣಿಕರು ಭಯದಿಂದ ಪ್ರಯಾಣಿಸಬೇಕಾಗಿದೆ. ಭಾರೀ ಹೊಂಡ...
ಸುದ್ದಿ

ಕಾಸರಗೋಡು ನಗರದ ಹೊರವಲಯದಲ್ಲಿ ಸರಣಿ ಅಪಘಾತ ; ಐದು ವರ್ಷದ ಬಾಲಕ ಸಾವು – ಕಹಳೆ ನ್ಯೂಸ್

ಕಾಸರಗೋಡು, ಜು 23 : ಕಾಸರಗೋಡು ನಗರದ ಹೊರವಲಯದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಜು. 22 ರ ಭಾನುವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಗು ಮೃತಪಟ್ಟು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಕಾರು , ಬಸ್ಸು ಮತ್ತು ಬೈಕ್ ನ ನಡುವೆ ಈ ಅಪಘಾತ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ಸು , ಬೈಕ್ ಹಾಗೂ ಕುಂಬಳೆ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ...
ಸುದ್ದಿ

ಕಾಸರಗೋಡಿನ ತೀರವಾಸಿಗಳ ಬದುಕಿನ ಮೇಲೆ ಕಡಲ್ಕೊರೆತದ ಕರಿಛಾಯೆ ; ಕಡಲತೀರದ ನಿವಾಸಿಗಳ ಹೀನಾಯ ಸ್ಥಿತಿಯ ಕುರಿತು Exclusive ವರದಿ – ಕಹಳೆ ನ್ಯೂಸ್

ಕಾಸರಗೋಡು, ಜು 17 : ಮಳೆಯ ಅಬ್ಬರದ ನಡುವೆ ಕಡಲ್ಕೊರೆತ ವು ತೀರವಾಸಿಗಳ ಬದುಕನ್ನು ಕಸಿದುಕೊಂಡಿದೆ. ಉಪ್ಪಳ ಮುಸೋಡಿ , ಅದಿಕೆ ಮತ್ತು ಶಾರದಾ ನಗರ ತೀರವಾಸಿಗಳು ಭೀತಿಯ ನಡುವೆ ಬದುಕು ಸಾಗಿಸುತ್ತಿದ್ದಾರೆ .ಮುಸೋಡಿ , ಅದಿಕ ದಲ್ಲಿ ೨೫೦ ಮೀಟರ್ ನಷ್ಟು ಸ್ಥಳವನ್ನು ಸಮುದ್ರ ನುಂಗಿ ಹಾಕಿದೆ. ಹಲವಾರು ಮನೆಗಳು ಸಮುದ್ರಪಾಲಾಗಿವೆ. ತೀರವಾಸಿಗಳು ಮನೆ ಸೊತ್ತು ಬಿಟ್ಟು ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಒಂದೆಡೆ ಅಲೆಗಳ ಅಬ್ಬರ , ಇನ್ನೊಂದೆಡೆ...
ಸುದ್ದಿ

Breaking News : ಕಾಸರಗೋಡುನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಬೀಬ್ ರಹಮಾನ್ ಸೆರೆ – ಕಹಳೆ ನ್ಯೂಸ್

ಕಾಸರಗೋಡು,ಜು 08 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ . ಬೆಲೆ ಬಾಳುವ ಮಾದಕ ವಸ್ತು ಸಹಿತ ಆರೋಪಿಯೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.   ಬಂಧಿತನನ್ನು ಅಣಂಗೂರು ಟಿ . ವಿ ರಸ್ತೆಯ ಮುಹಮ್ಮದ್ ಹಬೀಬ್ ರಹಮಾನ್ ( 22) ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ ಆರು ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಣ್ಣ ಬಾಟಲಿಗಳಲ್ಲಿ ತುಂಬಿಸಿ ಇದನ್ನು ಮಾರಾಟ ಮಾಡುತ್ತಿದ್ದ . ಗೋವಾದಿಂದ ಮಾದಕ ವಸ್ತು...
1 2
Page 1 of 2