Deprecated: Optional parameter $expire declared before required parameter $path is implicitly treated as a required parameter in /home4/kahalye2/public_html/wp-content/plugins/bingo-ruby-core/lib/redux-framework/inc/class.redux_functions.php on line 54
KGF Archives - Kahale News https://www.kahalenews.com/tag/kgf/ ಸಮಾಜದ ಜಾಗೃತಿಗಾಗಿ ವಸ್ತುನಿಷ್ಠ ವರದಿ Tue, 25 Dec 2018 09:12:13 +0000 en-US hourly 1 https://www.kahalenews.com/wp-content/uploads/2018/03/cropped-Kahale_News_Favicon-150x150.png KGF Archives - Kahale News https://www.kahalenews.com/tag/kgf/ 32 32 136438798 ರಾಕಿಂಗ್ ಕೆಜಿಎಫ್: ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ಕಲೆಕ್ಷನ್ – ಕಹಳೆ ನ್ಯೂಸ್ https://www.kahalenews.com/15574/ Tue, 25 Dec 2018 09:11:37 +0000 http://www.kahalenews.com/?p=15574 ಬೆಂಗಳೂರು: ಐದು ಭಾಷೆಯಲ್ಲಿ ತೆರೆಗೆ ಬಂದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ಕನ್ನಡದಲ್ಲೊಂದೇ ಅಲ್ಲ ತಮಿಳು, ತೆಲುಗು ಸೇರಿದಂತೆ ಹಿಂದಿ ಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಭಾನುವಾರಕ್ಕಿಂತ ಸೋಮವಾರ ಹಿಂದಿ ಅವತರಣಿಕೆ ಕಲೆಕ್ಷನ್ ಹೆಚ್ಚಾಗಿದೆ. ಮಂಗಳವಾರ […]

The post ರಾಕಿಂಗ್ ಕೆಜಿಎಫ್: ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ಕಲೆಕ್ಷನ್ – ಕಹಳೆ ನ್ಯೂಸ್ appeared first on Kahale News.

]]>
ಬೆಂಗಳೂರು: ಐದು ಭಾಷೆಯಲ್ಲಿ ತೆರೆಗೆ ಬಂದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಕೆಜಿಎಫ್ ಚಿತ್ರ ಕನ್ನಡದಲ್ಲೊಂದೇ ಅಲ್ಲ ತಮಿಳು, ತೆಲುಗು ಸೇರಿದಂತೆ ಹಿಂದಿ ಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಭಾನುವಾರಕ್ಕಿಂತ ಸೋಮವಾರ ಹಿಂದಿ ಅವತರಣಿಕೆ ಕಲೆಕ್ಷನ್ ಹೆಚ್ಚಾಗಿದೆ. ಮಂಗಳವಾರ ಕ್ರಿಸ್ಮಸ್ ರಜೆಯಿರುವ ಕಾರಣ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ತರಣ್ ಆದರ್ಶ್ ಪ್ರಕಾರ, ಶುಕ್ರವಾರ ಹಿಂದಿ ಕೆಜಿಎಫ್ ಗಳಿಕೆ 2.10 ಕೋಟಿಯಾಗಿತ್ತು. ಶನಿವಾರ 3 ಕೋಟಿ ಗಳಿಕೆ ಮಾಡಿತ್ತು. ಭಾನುವಾರ 4.10 ಕೋಟಿ ಗಳಿಕೆಯಾಗಿತ್ತು. ಸೋಮವಾರ 9.90 ಕೋಟಿ ಗಳಿಕೆಯಾಗಿದೆ. ಭಾರತದಲ್ಲಿ ಹಿಂದಿ ಕೆಜಿಎಫ್ ಗಳಿಕೆ ಒಟ್ಟು 12.10 ಕೋಟಿ ರೂಪಾಯಿ.

ನಾಲ್ಕನೇ ದಿನ ದಕ್ಷಿಣ ಭಾರತದಲ್ಲಿ ಚಿತ್ರ 41.7ಕೋಟಿ ಗಳಿಕೆ ಮಾಡಿದೆ ಎನ್ನಲಾಗ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಅಮೆರಿಕಾದಲ್ಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ನಾಲ್ಕು ದಿನಗಳಲ್ಲಿ ಅಲ್ಲಿ 5 ಕೋಟಿ ಗಳಿಸಿದೆ.

The post ರಾಕಿಂಗ್ ಕೆಜಿಎಫ್: ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ಕಲೆಕ್ಷನ್ – ಕಹಳೆ ನ್ಯೂಸ್ appeared first on Kahale News.

]]>
15574
ಕೆಜಿಎಫ್ ಹವಾ ಮುಂದೆ “ಜೀರೋ” ಆದ ಬಾದ್ ಶಾ – ಕಹಳೆ ನ್ಯೂಸ್ https://www.kahalenews.com/15399/ Sat, 22 Dec 2018 06:05:40 +0000 http://www.kahalenews.com/?p=15399 ಸದ್ಯ ಭಾರತಾದ್ಯಂತ ಕೆ.ಜಿ.ಎಫ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಕಂಡಿದೆ. ಯಶ್ ಆ್ಯಕ್ಟಿಂಗ್‌ಗೆ ಫ್ಯಾನ್ಸ್ ಸಲಾಂ ಅಂತಿದ್ದಾರೆ. ಕೆ.ಜಿ.ಎಫ್ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಎಲ್ಲೆಲ್ಲೂ ರಾಕಿ ಭಾಯ್, ರಾಕಿ ಭಾಯ್ ಅನ್ನೋ ಕೂಗು ಕೇಳಿ ಬರ‍್ತಾ ಇದೆ. ಇನ್ನೂ ಆಶ್ಚರ್ಯ ಅಂದ್ರೆ ಕೆ.ಜಿ.ಎಫ್ ಜೊತೆ ಬಾಲಿವುಡ್‌ನ ಜೀರೋ ಸಿನಿಮಾ ಕೂಡ ರಿಲೀಸ್ ಆಗಿತ್ತು. ಆದ್ರೆ ಕೆಜಿಎಫ್ ಸಿನೆಮಾದ ಅಬ್ಬರದ ಮುಂದೆ ಜೀರೋ ಸಿನಿಮಾದ ಮಾತು ಎಲ್ಲೂ […]

The post ಕೆಜಿಎಫ್ ಹವಾ ಮುಂದೆ “ಜೀರೋ” ಆದ ಬಾದ್ ಶಾ – ಕಹಳೆ ನ್ಯೂಸ್ appeared first on Kahale News.

]]>
ಸದ್ಯ ಭಾರತಾದ್ಯಂತ ಕೆ.ಜಿ.ಎಫ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಕಂಡಿದೆ.

ಯಶ್ ಆ್ಯಕ್ಟಿಂಗ್‌ಗೆ ಫ್ಯಾನ್ಸ್ ಸಲಾಂ ಅಂತಿದ್ದಾರೆ. ಕೆ.ಜಿ.ಎಫ್ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಎಲ್ಲೆಲ್ಲೂ ರಾಕಿ ಭಾಯ್, ರಾಕಿ ಭಾಯ್ ಅನ್ನೋ ಕೂಗು ಕೇಳಿ ಬರ‍್ತಾ ಇದೆ.

ಇನ್ನೂ ಆಶ್ಚರ್ಯ ಅಂದ್ರೆ ಕೆ.ಜಿ.ಎಫ್ ಜೊತೆ ಬಾಲಿವುಡ್‌ನ ಜೀರೋ ಸಿನಿಮಾ ಕೂಡ ರಿಲೀಸ್ ಆಗಿತ್ತು. ಆದ್ರೆ ಕೆಜಿಎಫ್ ಸಿನೆಮಾದ ಅಬ್ಬರದ ಮುಂದೆ ಜೀರೋ ಸಿನಿಮಾದ ಮಾತು ಎಲ್ಲೂ ಕೇಳೂತ್ತಿರಲಿಲ್ಲ.

ಜೀರೋ ಸಿನಿಮಾದಲ್ಲಿ ಬಾದ್‌ಶಾ ಶಾರುಖ್, ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್‌ನಂತಹ ದೊಡ್ಡ ಸ್ಟಾರ್‌ಗಳಿದ್ರೂ ಆ ಸಿನಿಮಾದ ಸುದ್ದಿ ಎಲ್ಲೂ ಕೇಳಿ ಬರುವುದಿಲ್ಲ.

ಬಾಲಿವುಡ್‌ನಲ್ಲೇ ಬಿಗ್ ರೆಕಾರ್ಡ್ ಸೃಷ್ಟಿ ಮಾಡ್ತಾ ಇದ್ದ ಶಾರುಖ್ ಖಾನ್ ಸಿನಿಮಾ, ಕನ್ನಡದ ಕೆ.ಜಿ.ಎಫ್ ಮುಂದೆ ಕಾಣದಂತಾಗಿದೆ. ಈ ಬಗ್ಗೆ ಕನ್ನಡಿಗರೆಲ್ಲರೂ ಹೆಮ್ಮೆಪಟ್ಟಿದ್ದು, ರಾಖಿಭಾಯ್‌ಗೆ ಇಂಡಿಯಾ ತುಂಬಾ ಜೈ ಜೈ ಎನ್ನುತ್ತಿದ್ದಾರೆ.

ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್

The post ಕೆಜಿಎಫ್ ಹವಾ ಮುಂದೆ “ಜೀರೋ” ಆದ ಬಾದ್ ಶಾ – ಕಹಳೆ ನ್ಯೂಸ್ appeared first on Kahale News.

]]>
15399
ಕೆಜಿಎಫ್ ಹವಾ: ಭರ್ಜರಿ ಓಪನಿಂಗ್ ಪಡೆದುಕೊಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ – ಕಹಳೆ ನ್ಯೂಸ್ https://www.kahalenews.com/15335/ Fri, 21 Dec 2018 06:20:43 +0000 http://www.kahalenews.com/?p=15335 ಬೆಂಗಳೂರು: ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಇಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಕೆಜಿಎಫ್ ಸಿನಿಮಾ ವೀಕ್ಷಿಸಿದರು. ಈಗಾಗಲೇ ನರ್ತಕಿ ಚಿತ್ರಮಂದಿರದ ಎದುರು ಯಶ್ ಅವರ 72 ಅಡಿ ಕಟೌಟ್ ನಿರ್ಮಿಸಲಾಗಿದೆ ಅಷ್ಟೇ ಅಲ್ಲ ಬೆಳಗ್ಗೆ 10 ಕ್ಕೆ ರಾಮಾಚಾರಿ ಯಶ್ ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಷ್ಟಾಭಿಷೇಕ ಮಾಡಲಾಗುವುದು.ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವ ಕೆಜಿಎಫ್ ಸಿನಿಮಾದ […]

The post ಕೆಜಿಎಫ್ ಹವಾ: ಭರ್ಜರಿ ಓಪನಿಂಗ್ ಪಡೆದುಕೊಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ – ಕಹಳೆ ನ್ಯೂಸ್ appeared first on Kahale News.

]]>
ಬೆಂಗಳೂರು: ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಇಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಕೆಜಿಎಫ್ ಸಿನಿಮಾ ವೀಕ್ಷಿಸಿದರು.

ಈಗಾಗಲೇ ನರ್ತಕಿ ಚಿತ್ರಮಂದಿರದ ಎದುರು ಯಶ್ ಅವರ 72 ಅಡಿ ಕಟೌಟ್ ನಿರ್ಮಿಸಲಾಗಿದೆ ಅಷ್ಟೇ ಅಲ್ಲ ಬೆಳಗ್ಗೆ 10 ಕ್ಕೆ ರಾಮಾಚಾರಿ ಯಶ್ ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಷ್ಟಾಭಿಷೇಕ ಮಾಡಲಾಗುವುದು.ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವ ಕೆಜಿಎಫ್ ಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಜೊತೆ ಚಿತ್ರ ನೋಡುತ್ತಿರುವುದು ವಿಶೇಷ.

ಕೆಜಿಎಫ್ ಸಿನೆಮಾದಲ್ಲಿ ಭರ್ಜರಿ ಡೈಲಾಗ್‌ಗಳಿಗೆ ಏನೂ ಕಮ್ಮಿ ಇಲ್ಲ.‘ಪವರ್ ಇದ್ದರೆ ಕಾಸು’, ‘ಪವರ್ ಫುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್’, ‘ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ’.

‘ಗ್ಯಾಂಗ್ ಕಟ್ಟಿಕೊಂಡು ಬರುವವನು ಗ್ಯಾಂಗ್ ಸ್ಟರ್, ಹೀಗೆ ಚಿತ್ರದ ಉದ್ದಕ್ಕೂ ಪಂಚಿಂಗ್ ಲೈನ್ ಗಳು ನೋಡುಗರನ್ನ ಹುಚ್ಚೆಬ್ಬಿಸುವಂತೆ ಮಾಡುತ್ತೆ.ಮಾಸ್ ಅಭಿಮಾನಿಗಳು ಸಂಭ್ರಮ, ಸಡಗರ ಪಡಲು ಏನೇನು ಬೇಕೋ, ಅದೆಲ್ಲವೂ ‘ಕೆ.ಜಿ.ಎಫ್’ ಚಿತ್ರದಲ್ಲಿ ಪರ್ಫೆಕ್ಟ್ ಆಗಿದೆ.

ಇನ್ನೂ ಕ್ಲಾಸ್ ಪ್ರೇಕ್ಷಕರು ಬಯಸುವಂತೆ ಗಟ್ಟಿಯಾದ ಚಿತ್ರಕಥೆ, ತಾಯಿ ಸೆಂಟಿಮೆಂಟ್, ತಲೆದೂಗುವ ಹಾಡುಗಳು ‘ಕೆ.ಜಿ.ಎಫ್’ ಚಿತ್ರದಲ್ಲಿದೆ.ಕೆ.ಜಿ.ಎಫ್’ ಚಿತ್ರವನ್ನ ನೋಡಿದ್ಮೇಲೆ, ಎರಡು ವರ್ಷಗಳಿಂದ ಕಾದಿದ್ದಕ್ಕೂ ಸಾರ್ಥಕ ಎಂಬ ಭಾವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಮನದಲ್ಲಿ ಸದ್ಯ ಮೂಡಿದೆ. ಶೀರ್ಷಿಕೆಗೆ ತಕ್ಕ ಹಾಗೆ, ‘ಕೆ.ಜಿ.ಎಫ್’ ಚಿತ್ರದ ಕಥೆ ‘ಹುಟ್ಟು’ವುದು ಕೆಜಿಎಫ್‌ನಲ್ಲಿ ”ಪ್ರಬಲವಾಗಿ ಬೆಳೆದು, ದೊಡ್ಡ ಶ್ರೀಮಂತನಾಗಿ ಸಾಯುವೆ” ಎಂದು ತಾಯಿಗೆ ಮಾತು ಕೊಡುವ ಮಗ, ಮುಂದೆ ಹೇಗೆ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದರ ಸುತ್ತ ‘ಕೆ.ಜಿ.ಎಫ್’ ಚಿತ್ರದ ಫಸ್ಟ್ ಹಾಫ್ ಸಾಗುತ್ತದೆ.

ಚಿತ್ರದ ನರೇಶನ್ ಸ್ಟೈಲ್ ಬೊಂಬಾಟ್..!
ಕೆ.ಜಿ.ಎಫ್ ನಲ್ಲಿ ಹುಟ್ಟಿದ ರಾಕಿ, ‘ರಾಕಿ ಭಾಯ್’ ಆಗಿ ಬೆಳೆದ ರೀತಿಯನ್ನ ಹಂತ ಹಂತವಾಗಿ ಅನಂತ್ ನಾಗ್ ಅನಾವರಣಗೊಳಿಸಿರುವ ರೀತಿ ಚೆನ್ನಾಗಿದೆ. ‘ಕೆ.ಜಿ.ಎಫ್’ ಚಿತ್ರದ ನರೇಶನ್ ಸ್ಟೈಲ್ ಸೂಪರ್ ಆಗಿದೆ. ಹೀಗಾಗಿ, ಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಎಲ್ಲೂ ಬೋರ್ ಆಗುವುದಿಲ್ಲ.

ಎಂಬತ್ತರ ದಶಕದಲ್ಲಿ ನಡೆದ ಘಟನೆಯ ಸುತ್ತ ಸಾಗುವ ‘ಕೆ.ಜಿ.ಎಫ್’ ಕಥೆ ಫುಲ್ ಸ್ಪೀಡ್ ಆಗಿದೆ. ಮಾಸ್ ಅಭಿಮಾನಿಗಳು ಶಿಳ್ಳೆ ಹೊಡೆಯುವ ಪಂಚಿಂಗ್ ಡೈಲಾಗ್ಸ್ ಇರುವುದರಿಂದ ಪ್ರೇಕ್ಷಕರ ಗಮನ ಅತ್ತಿತ್ತ ಕದಲುವುದಿಲ್ಲ.

ಚಿತ್ರದಲ್ಲಿದೆ ಮೂರು ಭರ್ಜರಿ ಹಾಡುಗಳು..!
ರಾಕಿ ಭಾಯ್ ಎಂಟ್ರಿಗೆ ಒಂದು ಸಾಂಗು, ತಮನ್ನಾ ಜೊತೆಗೆ ಒಂದು ಸಾಂಗು ಸೇರಿದಂತೆ ಒಟ್ಟು ಮೂರು ಹಾಡುಗಳು ಫಸ್ಟ್ ಹಾಫ್ ನಲ್ಲಿದೆ. ಸಾಂಗು ಮತ್ತು ಫೈಟ್ಸ್ ಬಗ್ಗೆ ಕೆಮ್ಮಂಗಿಲ್ಲ. ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಯಶ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಫಸ್ಟ್ ಹಾಫ್ ನಲ್ಲಿ ಹೀರೋಯಿನ್ ಗೆ ಹೆಚ್ಚು ಕೆಲಸ ಇಲ್ಲ.

ಇಂಟರ್ವೆಲ್ ನಲ್ಲಿ ಟ್ವಿಸ್ಟ್.!
ಮೊದಲಾರ್ಧದಲ್ಲಿ ರಾಕ್ ಭಾಯ್‌ನ ಮುಂಬೈ ಮತ್ತು ಬೆಂಗಳೂರು ಅಧ್ಯಾಯ ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ದ್ವಿತೀಯಾರ್ಧದಲ್ಲಿ ‘ಕೆ.ಜಿ.ಎಫ್’ ಪರಿಚಯವಾಗುತ್ತದೆ. ‘ಕೆ.ಜಿ.ಎಫ್’ಗೆ ರಾಕಿ ಭಾಯ್ ಎಂಟ್ರಿ ಕೊಟ್ಟ ಮೇಲೆ, ಏನಾಗಬಹುದು ಅನ್ನೋದೆ ಚಿತ್ರದ ಟ್ವಿಸ್ಟ್.

ಅದನ್ನ ನೀವು ಥಿಯೇಟರಲ್ಲೇ ನೋಡಿ ಎಂಜಾಯ್ ಮಾಡಿ ಕೆಜಿಎಫ್ ಚಿತ್ರದ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಜಗತ್ತಿನಾದ್ಯಂತ 2000 ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಿಯೇ ಸಿದ್ಧ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. ಒಟ್ಟಿನಲ್ಲಿ ಯಶ್ ಕೆಜಿಎಫ್ ಸ್ಯಾಂಡಲ್ವುಡ್‌ನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡುವುದರಲ್ಲಿ ಡೌಟೇ ಇಲ್ಲ.

ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್

The post ಕೆಜಿಎಫ್ ಹವಾ: ಭರ್ಜರಿ ಓಪನಿಂಗ್ ಪಡೆದುಕೊಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ – ಕಹಳೆ ನ್ಯೂಸ್ appeared first on Kahale News.

]]>
15335
ಕೆಜಿಎಫ್’ ಸಿನಿಮಾ ರಿಲೀಸ್ ದಿನವೇ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ರಿಲೀಸ್ – ಕಹಳೆ ನ್ಯೂಸ್ https://www.kahalenews.com/15077/ Tue, 18 Dec 2018 05:59:39 +0000 http://www.kahalenews.com/?p=15077 ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಯಶ್ ಜೊತೆಗೆ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಆ ದಿನ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬರುತ್ತಿದ್ದಾರೆ. ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ಅದೇ ದಿನ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗುತ್ತಿದೆ. ಪವನ್ ಒಡೆಯರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ […]

The post ಕೆಜಿಎಫ್’ ಸಿನಿಮಾ ರಿಲೀಸ್ ದಿನವೇ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ರಿಲೀಸ್ – ಕಹಳೆ ನ್ಯೂಸ್ appeared first on Kahale News.

]]>
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಯಶ್ ಜೊತೆಗೆ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಆ ದಿನ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬರುತ್ತಿದ್ದಾರೆ.

ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ಅದೇ ದಿನ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗುತ್ತಿದೆ.

ಪವನ್ ಒಡೆಯರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಪಕರಾಗಿದ್ದಾರೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದಾರೆ.

The post ಕೆಜಿಎಫ್’ ಸಿನಿಮಾ ರಿಲೀಸ್ ದಿನವೇ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ರಿಲೀಸ್ – ಕಹಳೆ ನ್ಯೂಸ್ appeared first on Kahale News.

]]>
15077
“ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್ https://www.kahalenews.com/15010/ Mon, 17 Dec 2018 06:54:08 +0000 http://www.kahalenews.com/?p=15010 ಬಂಟ್ವಾಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಜೀಪ ಮೂಡ ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ” ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ ಸಜೀಪ ಮೂಡ ಬ್ರಹ್ಮ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಸೋಮವಾರ […]

The post “ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್ appeared first on Kahale News.

]]>
ಬಂಟ್ವಾಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಜೀಪ ಮೂಡ ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ” ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ ಸಜೀಪ ಮೂಡ ಬ್ರಹ್ಮ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಾಡ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಮಾತನಾಡಿ ಆಯುಷ್ಯ ವನ್ನು ಹೆಚ್ಚು ಮಾಡಲು ಸರಕಾರದ ಬಹು ಉಪಯುಕ್ತ ಮಾಹಿತಿ ಯನ್ನು ನೀಡುವ ಕಾರ್ಯಕ್ರಮ.

ಹಾಗೂ ಹೆಣ್ಣು ಮಕ್ಕಳನ್ನು ರಕ್ಷಣೆ ಗಾಗಿ ವಿಶೇಷ ಮುತುವರ್ಜಿಯಿಂದ ಕೇಂದ್ರ ಸರಕಾರ ಯೋಜನೆ ಗಳನ್ನು ಕಾರ್ಯರೂಪಕ್ಕ ತಂದಿದೆ. ಇಂತಹ ಕಾರ್ಯ ಕ್ರಮದ ಅರಿವನ್ನು ಪ್ರತಿಯೊಬ್ಬರಿಗೆ ತಲುಪಿಸಲು ಕಾರ್ಯಕ್ರಮ ಸರಕಾರ ಆಯೋಜಿಸಿದೆ, ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಸಂಪರ್ಕ ಕಾರ್ಯಾಲಯದ ಜಿಲ್ಲಾ ಸಂಪರ್ಕಾಧಿಕಾರಿ ಜಗನ್ನಾಥ, ಗ್ರಾ.ಪಂ.ಸದಸ್ಯ ರು ಗಳಾದ ಯಮುನಾ, ಸರಸ್ವತಿ, ಹರಿಣಾಕ್ಷೀ, ಹೇಮಾವತಿ, ಸಮೀಮಾ, ಸೀತಾರಾಮ, ಬಂಟ್ವಾಳ ಸಿ.ಡಿ.ಪಿ.ಒ. ಮಲ್ಲಿಕಾ, ಕ್ಷೇತ್ರ ಪ್ರಚಾರ ಅಧಿಕಾರಿ ತುಕರಾಮ ಗೌಡ, ಹಿರಿಯ ಮೇಲ್ಬಿಚಾರಕಿ ಭಾರತಿ, ಮೇಲ್ವಿಚಾರಕಿಯರಾದ ಸವಿತಾ, ಸಿಂಧು ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ನವೀನ್ ಉಪಸ್ಥಿತರಿದ್ದರು. ‌

ಕಾರ್ಯಕ್ರಮದ ಆರಂಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸುಭಾಷ್ ನಗರ ದಿಂದ ಕಲ್ಯಾಣ ಮಂಟಪ ದವರೆಗೆ ಮಹಿಳೆಯರು ಮೆರವಣಿಗೆಯ ಮೂಲಕ ಸಾಗಿಬಂದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ದ ಪ್ರಚಾರ ಅಧಿಕಾರಿ ತುಕರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿ ದರು.‌
ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ರೋಹಿತ್ ಸ್ವಾಗತಿಸಿದರು. ಮೇಲ್ಬಿಚಾರಕಿ ಸವಿತಾ ವಂದಿಸಿದರು. ಹಿರಿಯ ಮೇಲ್ಬಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.

The post “ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್ appeared first on Kahale News.

]]>
15010