ಮಾಣಿ ಶಂಭುಗ ನಿವಾಸಿ ಗೋಪಾಲ ಮೂಲ್ಯರ ಗದ್ದೆಯಲ್ಲಿ ಭತ್ತದ ಕೃಷಿಯ ಸೊಬಗು – ನೇಗಿಲ ಹಿಡಿದ ಹೊಲದೊತ್ತ ಸಾಗಿದ ಸೀತಾರಾಮ ಶೆಟ್ಟಿ – ಕಹಳೆ ನ್ಯೂಸ್
ಮಾಣಿ : ಭತ್ತದ ಕೃಷಿ ದ.ಕ.ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಿದೆ. ಹಾಗಾಗಿ ಕೃಷಿ ಉಳಿಯಬೇಕೆಂಬ ಆಲೋಚನೆ ಇಂದಿನ ಯುವ ಜನತೆಯಲ್ಲಿ ಇದೆಯಾದರೂ ಕೃಷಿ ಚಟುವಟಿಕೆಗೆ ಅನುಗುಣವಾಗಿ ಪೂರಕವಾದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಕಷ್ಟವಾಗುತ್ತದೆ ಎಂಬ ಕೂಗುಗಳು ಕೇಳುತ್ತಿದೆ. ಯಾಂತ್ರಿಕ ಕೃಷಿಯಿಂದ ಮಾತ್ರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕೃಷಿ ಉಳಿದಿದೆ. ಪ್ರಸ್ತುತ ದಿನಗಳಲ್ಲಿ ಮಾನವ ಬಳಕೆ ಮಾಡಿ ಕೃಷಿ ಮಾಡುವುದು ಕಷ್ಟದ ಕೆಲಸ. ಆದರೂ ಮಾಣಿ ಗ್ರಾಮದಲ್ಲಿ ಮಾನವ ಬಳಕೆ ಮಾಡಿ ಕೃಷಿ...