Recent Posts

Monday, January 20, 2025

archiveLiterature Communication

ಸುದ್ದಿ

ಸಮೂಹ ಮಾಧ್ಯಮಗಳಿಂದಾಗಿ ಸಾಹಿತ್ಯದಲ್ಲಿ ಯುವ ಜನತೆಗೆ ಆಸಕ್ತಿ ಹೆಚ್ಚಾಗಿದೆ: ಹರೀಶ್ ಸುಲಾಯ – ಕಹಳೆ ನ್ಯೂಸ್

ಮಂಜೇಶ್ವರ: ವಾಟ್ಸಾಪ್ ಫೇಸ್‌ಬುಕ್‌ಗಳು ಸಾಹಿತ್ಯ ಸಂವಹನಕ್ಕೆ ವೇದಿಕೆಯಾಗಿ ಬರಹಗಳ ಸಾಗರವಾಗಿದೆ. ಸಮೂಹ ಮಾಧ್ಯಮಗಳಿಂದಾಗಿ ಸಾಹಿತ್ಯದಲ್ಲಿ ಯುವ ಜನತೆಗೆ ಆಸಕ್ತಿ ಹೆಚ್ಚಾಗಿದೆ. ಇದು ಉತ್ತಮ ಬೆಳವಣೆಗೆಯಾಗಿದೆ, ಎಂದು ಗಡಿನಾಡ ಚುಟುಕು ಸಾಹಿತಿ, ಮಂಜೇಶ್ವರ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ನುಡಿದರು. ಅವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ವತಿಯಿಂದ ನಡೆದ ವೈವಿದ್ಯ ಕಾವ್ಯ ವೈಭವ ಹೆಸರಾಂತ ಕವಿಗಳ ಕವಿಗೋಷ್ಠಿ...