Friday, November 22, 2024

archiveLokasabha Election

ಸುದ್ದಿ

ಪಂಚರಾಜ್ಯ ಚುನಾವಣೆ: ಮೋದಿಗೆ ಕಸಿವಿಸಿ – ಕಹಳೆ ನ್ಯೂಸ್

2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರೋ ಪಂಚರಾಜ್ಯ ಚುನಾವಣೆಯು ಬಾರಿ ಸಂಚಲನವನ್ನೇ ಸೃಷ್ಟಿಸಿದೆ. 2014 ರ ಲೋಕಸಭಾ ಚುನಾವಣೆ ವೇಳೆ ಎಲ್ಲರ ಅಚ್ಚು ಮೆಚ್ಚಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ದೊಡ್ಡ ಹೊಡೆತ ನೀಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೋದಲ್ಲೆಲ್ಲ ಅಲೆಯಿತ್ತು. ಮೋದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಪಟಾಕಿ ಸಿಡಿಸಿತ್ತು. ಎಲ್ಲ ಕಡೆ ಬಿಜೆಪಿ ಗೆಲುವಿನ ನಗೆ ಬೀರಿತ್ತು....
ಸುದ್ದಿ

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧಾರ ಮಾಡಿದ್ದೇನೆ: ಸುಷ್ಮಾ ಸ್ವರಾಜ್ – ಕಹಳೆ ನ್ಯೂಸ್

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ದಿಢೀರ್​ ತೀರ್ಮಾನ ಪ್ರಕಟಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷ ನಿರ್ಧರಿಸಲಿದೆ, ಆದರೆ, ನಾನು ಯಾವುದೇ ಕಾರಣಕ್ಕೆ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುಷ್ಮಾ  ಅವರ ಈ ನಿರ್ಧಾರಕ್ಕೆ ಕಾರಣ ಅವರ ಆರೋಗ್ಯ. 66 ವರ್ಷದ ಸುಷ್ಮಾ ಆರೋಗ್ಯ ಕ್ಷೀಣಿಸಿದ...
ರಾಜಕೀಯಸುದ್ದಿ

ಮಲೆನಾಡಿಗೆ ಎಂಟ್ರಿ: ಕುಮಾರ ಪರ್ವಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವಿನ ಕದನ ಎಂದೇ ಬಿಂಬಿಸಲಾಗುತ್ತಿದೆ. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರದ ನಿಮಿತ್ತ ಮಲೆನಾಡಿಗೆ ಎಂಟ್ರಿ ಕೊಟ್ಟಿದ್ದು ಕುಮಾರ ಪರ್ವಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ 2ನೇ ಸುತ್ತಿನ ಪ್ರಚಾರ ಮುಗಿಸಿದರೂ ಕಾಂಗ್ರೆಸ್-ಜೆಡಿಎಸ್ ಇನ್ನೂ ನಾಯಕರ ಮಟ್ಟದ ಪ್ರಚಾರ,ಸಭೆಗೆ ಮಾತ್ರ ಸೀಮಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಹೆಸರು ಇನ್ನು...
ಸುದ್ದಿ

ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶನ – ಕಹಳೆ ನ್ಯೂಸ್

ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವ ಹಾಗೆ ಮುಖ ಮೂತಿ ತಿರುಗಿಸಿ ಹೋಗುತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು, ಒಗ್ಗಟ್ಟು ಪ್ರದರ್ಶನ ಮಾಡಿ, ನಾವೆಲ್ಲರೂ ಒಂದೇ, ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ಅಷ್ಟೇ ನಮ್ಮ ಮುಂದಿನ ಗುರಿ ಎಂದಿದ್ದಾರೆ. ಹೌದು ಸಿದ್ದರಾಮಯ್ಯ ಗೌಪ್ಯವಾಗಿ ಸಭೆ ನಡೆಸಿ ಹೇಳಿರುವ ಮಾತುಗಳು, ಜೆಡಿಎಸ್ ನಾಯಕರ ವಿರುದ್ಧ ಕುದಿಯುತ್ತಿದ್ದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಅವರನ್ನು...
ರಾಜಕೀಯಸುದ್ದಿ

ಇಬ್ಬರು ಕ್ರಿಕೆಟ್ ಆಟಗಾರರನ್ನು ರಾಜಕೀಯ ಅಖಾಡಕ್ಕೆ ಕರೆತರಲು ಬಿಜೆಪಿ ಪ್ಲಾನ್ – ಕಹಳೆ ನ್ಯೂಸ್

ದೆಹಲಿ: ಜನರ ಅಭಿಮಾನ ಗಳಿಸಿದ ಇಬ್ಬರು ಕ್ರಿಕೆಟ್ ಆಟಗಾರರನ್ನು ರಾಜಕೀಯ ಅಖಾಡಕ್ಕೆ ಕರೆತರಲು ಬಿಜೆಪಿ ಸಜ್ಜಾಗಿದೆ. ಟೀಂ ಇಂಡಿಯಾದ ಹಿರಿಯ ಆಟಗಾರರಾದ ಗೌತಮ್ ಗಂಭೀರ್ ಮತ್ತು ಎಂ.ಎಸ್. ಧೋನಿಯನ್ನು 2019 ರ ಲೋಕಸಭಾ ಚುನಾವಣೆಗೆ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇವರಿಬ್ಬರ ಜತೆಗೆ ಮಾಜಿ ಆಪ್ ಮುಖಂಡ ಕವಿ ಕುಮಾರ್ ವಿಶ್ವಾಸ್ ಕೂಡ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡ್ತಾ ಇದೆ. ಈ ಇಬ್ಬರು ಕ್ರಿಕೆಟ್ಟಿಗರು...
ರಾಜಕೀಯಸುದ್ದಿ

ರೆಸ್ಟ್‍ನಲ್ಲೇ ಚುನಾವಣೆಗೆ ಬೆಂಬಲ ನೀಡುತ್ತೇನೆ: ಸಿದ್ದರಾಮಯ್ಯ – ಕಹಳೆ ನ್ಯೂಸ್

ಬೆಂಗಳೂರು: ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ವಿಶ್ರಾಂತಿ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನಾನೊಬ್ಬ ರಾಷ್ಟ್ರಮಟ್ಟದ ರಾಜಕಾರಣಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೇ ನೇತೃತ್ವ ವಹಿಸಿದ್ದೆ. ಕ್ರಿಕೆಟ್‍ನಲ್ಲಿ ದುರ್ಬಲ ತಂಡಗಳ ವಿರುದ್ಧ ನಾಯಕನಿಗೆ ವಿಶ್ರಾಂತಿ ನೀಡುವಂತೆ ನನಗೆ ವಿಶ್ರಾಂತಿಯ ಅಗತ್ಯವಿದೆ. ಈ ಬಾರಿ ನಾನು ಮನೆಯಲ್ಲೇ ಕುಳಿತು ಪ್ರಚಾರಕ್ಕೆ ಬೆಂಬಲ ನೀಡುತ್ತೇನೆ' ಎಂದು ಸಿದ್ದರಾಮಯ್ಯ ತಮ್ಮದೇ ದಾಟಿಯಲ್ಲಿ ಹೇಳಿದ್ದಾರೆ....
ರಾಜಕೀಯಸುದ್ದಿ

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ : ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಅವರು ಇದೆಲ್ಲಾ ಸತ್ಯಕ್ಕೆ ದೂರವಾದದ್ದು, ಇದರಲ್ಲಿ ವಾಸ್ತವ ಇಲ್ಲ. ಮೋದಿಯವರು ಇಲ್ಲಿ ಸ್ಪರ್ಧೆ ಮಾಡುವ ಸುದ್ದಿ ಸುಳ್ಳು. ಇದು ಕೇವಲ ಊಹಾಪೋಹವಷ್ಟೇ ಎಂದು ಯಡಿಯೂರಪ್ಪ ಅವರು ತಿಳಿಸಿದರು. ಸೋಮವಾರ ಬಿಎಸ್​ವೈ ಅವರ...