ದೀಪಾವಳಿ ಬಳಿಕ ಎಲ್ ಪಿಜಿ ಸಿಲಿಂಡರ್ ಬೆಲೆ ಎರಡು ರೂ ಏರಿಕೆ – ಕಹಳೆ ನ್ಯೂಸ್
ನವದೆಹಲಿ: ಎಲ್ ಪಿಜಿ ಅನಿಲ ವಿತರಕರಿಗೆ ನೀಡುವ ಕಮಿಷನ್ ನಲ್ಲಿ ಕೇಂದ್ರ ಸರ್ಕಾರವು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಬೆಲೆಯು ಎರಡು ರೂಪಾಯಿ ಏರಿಕೆಯಾಗಿದೆ. ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯು ಎರಡು ರೂಪಾಯಿ ಏರಿಕೆಯಾಗಿದ್ದು, ದೀಪಾವಳಿ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. 2017ರ ಸಪ್ಟೆಂಬರ್ ನಲ್ಲಿ 14.2 ಕೆ.ಜಿ.ಸಿಲಿಂಡರ್ ಮೇಲೆ 48.89 ರೂ. ಮತ್ತು 5 ಕೆ.ಜಿ.ಸಿಲಿಂಡರ್ ಮೇಲೆ 24.20 ರೂ. ಕಮಿಷನ್ ನೀಡಲಾಗುತ್ತಿತ್ತು. ವಿತರಕರ ಸಾರಿಗೆ...