ಮಾಲ್ಡೀವ್ಸ್ ಸ್ಥಿರ, ಪ್ರಜಾಪ್ರಭುತ್ವ, ಶಾಂತಿ ಹಾಗೂ ಶ್ರೀಮಂತ ಗಣರಾಜ್ಯವೆನಿಸಿಕೊಳ್ಳಲಿ: ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ: ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಗೆ ಮಾಲ್ಡೀವ್ಸ್ಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಟ್ವೀಟ್ ಮೂಲಕ ನೂತನ ಅಧ್ಯಕ್ಷ ಸೋಲಿಹ್ ಅವರಿಗೆ ಶುಭ ಕೋರಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಇಬ್ರಾಹಿಂ ಮಹಮ್ಮದ್ ಸೋಲಿಹ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಮಾಲ್ಡೀವ್ಸ್ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಬ್ರಾಹಿಂ ಮಹಮ್ಮದ್ ಸೋಲಿಹ್ ಅವರಿಗೆ ನಾನು ಶುಭ ಹಾರೈಸುತ್ತೇನೆ. ಅಭಿವೃದ್ಧಿ ಕೆಲಸಗಳ ಸಾಕ್ಷಾತ್ಕಾರಕ್ಕೆ ಅದರಲ್ಲೂ...