Sunday, November 24, 2024

archiveMangaluru

ಸುದ್ದಿ

ಮಂಗಳೂರಿನಿಂದ ಬೆಂಗಳೂರಿಗೆ ‘ವಂದೇ ಭಾರತ್ ಎಕ್ಸ್ ಪ್ರೆಸ್’ – ಕಹಳೆ ನ್ಯೂಸ್

ಭಾರತದ ಅತಿ ವೇಗದ ರೈಲು ಎಂದು ಹೆಸರಾಗಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕರ್ನಾಟಕದಲ್ಲೂ ಶೀಘ್ರವೇ ಸಂಚರಿಸಲಿದೆ. ಬೆಂಗಳೂರು - ಮಂಗಳೂರು, ಮಂಗಳೂರು- ಚೆನ್ನೈ, ಮಂಗಳೂರು- ಹೈದರಾಬಾದ್ ನಡುವೆ ಈ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಈ ಮಾರ್ಗಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಫೆಬ್ರವರಿ 15 ರಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಎಂಜಿನ್ ರಹಿತ...
ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ; ಕಾಮುಕನಿಗೆ 10 ವರ್ಷ ಕಠಿಣ ಸಜೆ – ಕಹಳೆ ನ್ಯೂಸ್

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಚಂದ್ರಕಾಂತ ಎಂಬಾತನಿಗೆ 2 ನೇ ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. 10 ಸಾವಿರ ರೂ. ದಂಡದಲ್ಲಿ 9 ಸಾವಿರ ರೂ. ಬಾಲಕಿಗೆ ಹಾಗೂ 1 ಸಾವಿರ ರೂ. ಸರ್ಕಾರಕ್ಕೆ ಕೊಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬಾಲಕಿಗೆ ಕುಟುಂಬ ಕಾನೂನು ಸೇವಾ...
ಸುದ್ದಿ

ಸ್ವಾಮಿ ಕೊರಗಜ್ಜನ ವೆಕ್ಟರ್ ಆರ್ಟ್ ವೈರಲ್ – ಕಹಳೆ ನ್ಯೂಸ್

ಮಂಗಳೂರು: ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯ ಅವಿಭಾಜ್ಯ ಅಂಗ. ಈ ನಡುವೆ ತುಳುನಾಡಿನ ದೈವಗಳಿಗೂ ತಂತ್ರಜ್ಞಾನದ ಟಚ್ ನೀಡಲಾಗುತ್ತಿದೆ. ಹೌದು, ಇದೀಗ ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್ ಆರ್ಟ್ ಭಾರೀ ಪ್ರಸಿದ್ದಿ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೆಕ್ಟರ್ ಆರ್ಟ್‍ನಲ್ಲಿ ಮೂಡಿ ಬಂದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆ ವೈರಲ್ ಆಗಿದೆ. ಅಂದಹಾಗೆ ಕೊರಗಜ್ಜನ ವೆಕ್ಟರ್ ಆರ್ಟ್ ಚಿತ್ರವನ್ನು...
ಸುದ್ದಿ

ಉಗ್ರರ ದಾಳಿ ಖಂಡಿಸಿದ ನಟ ಅನಂತ್ ನಾಗ್- ಕಹಳೆ ನ್ಯೂಸ್

ಮಂಗಳೂರು: ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ವಿಶ್ವದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶದೆಲ್ಲೆಡೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ನಡುವೆ ಮತ್ತೊಂದು ಸರ್ಜಿಕಲ್ ಸ್ಟ್ರೈಗೆ ಒತ್ತಾಯ ಕೇಳಿ ಬರುತ್ತಿದೆ. ಭದ್ರತಾ ಪಡೆಗಳ ಮೇಲೆ ನಡೆದ ಆತ್ಮಹತ್ಯಾ ದಾಳಿ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ನಟ ಅನಂತ ನಾಗ್ , ಈ ಘಟನೆ ಅತ್ಯಂತ ಭೀಕರವಾಗಿದೆ. ಇದು ದೇಶದ ಜನರ ಮನಸ್ಸನ್ನು...
ಸುದ್ದಿ

ಸರಕಾರವು ತಕ್ಷಣ ಕಾನೂನನ್ನು ಮಾಡಿ ಶ್ರೀರಾಮಮಂದಿರವನ್ನು ನಿರ್ಮಿಸಬೇಕು; ಉಪೇಂದ್ರ ಆಚಾರ್ಯ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯಾನಗರವು ಕೋಟಿಗಟ್ಟಲೆ ಹಿಂದುಗಳ ಶ್ರದ್ಧಾಸ್ಥಾನವಾಗಿದೆ ಮತ್ತು ಪ್ರಭು ಶ್ರೀರಾಮನ ಜನ್ಮಭೂಮಿಯಾಗಿದೆಯೆನ್ನುವುದು ಐತಿಹಾಸಿಕ ಸತ್ಯವಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ, ಇವೆರಡೂ ಸ್ಥಳಗಳಲ್ಲಿ ಭಾಜಪದ್ದೇ ಬಹುಮತ ಸರಕಾರವಿದೆ. ಆದುದರಿಂದ ಸಂಸತ್ತಿನಲ್ಲಿ ತಕ್ಷಣ ಕಾನೂನನ್ನು ಮಾಡಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಮಾಡಬೇಕು, ಎಂಬ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ ಇವರು ಮಾಡಿದ್ದಾರೆ.ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರುನಡೆದ ಆಂದೋಲನದಲ್ಲಿ ಮಾತನಾಡಿದರು.ಈ ಸಮಯದಲ್ಲಿ...
ಸುದ್ದಿ

ತೊಕ್ಕೊಟ್ಟು ಯುನಿಟಿ ಹಾಲ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲು – ಕಹಳೆ ನ್ಯೂಸ್

ಮಂಗಳೂರು: ಮದುವೆ ಹಾಗೂ ಇನ್ನಿತರ ಖಾಸಗಿ ಸಮಾರಂಭ ನಡೆಯುವ ಹಾಲ್‍ಗಳ ಪಕ್ಕದ ರಸ್ತೆ ಬದಿ ವಾಹನ ನಿಲುಗಡೆ ಮಾಡಿದರೆ ಸಂಬಂಧ ಪಟ್ಟ ಹಾಲ್ ಗಳ ಮಾಲಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ತಿಳಿಸಿದ್ದಾರೆ. ಕಳೆದ ಬುಧವಾರ ತೊಕ್ಕೊಟ್ಟು ಸಮೀಪ ಕಲ್ಲಾಪುವಿನಲ್ಲಿ ಯೂನಿಟಿ ಹಾಲ್ ಮತ್ತು ಅದರ ಪಕ್ಕದ ಆವರಣದಲ್ಲಿ ಏರ್ಪಡಿಸಿದ್ದ ಮದುವೆ ಸಂದರ್ಭ ಅಧಿಕ ಸಂಖ್ಯೆಯಲ್ಲಿ ವಾಹನಗಳನ್ನು ರಸ್ತೆ ಬದಿ, ಸಿಕ್ಕ ಸಿಕ್ಕ...
ಸುದ್ದಿ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ! – ಕಹಳೆ ನ್ಯೂಸ್

ಮಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಿವೃತ್ತ ಎಸ್ ಪಿ ಮಿತ್ರ ಹೆರಾಜೆ ಕಾರು ಚಲಾಯಿಸುತ್ತಾ ಕದ್ರಿಯಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಆಕ್ರೋಶಗೊಂಡ ಸಾರ್ವಜನಿಕರುಉ ಕಾರಿಗೆ ಮುತ್ತಿಗೆ ಹಾಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದ ಕದ್ರಿ...
ಸುದ್ದಿ

ಹೊಸ ವರ್ಷದ ಸಂಭ್ರಮಕ್ಕೆ ಮಂಗಳೂರಲ್ಲಿ ದನಕರುಗಳು ಬಲಿ – ಕಹಳೆ ನ್ಯೂಸ್

ಮಂಗಳೂರು: ಕೂಳೂರು 4ನೇ ಮೈಲಿ 'ಗೋಲ್ಡ್ ಫಿಂಚ್ ಸಿಟಿ' ಮೈದಾನದಲ್ಲಿ ಮೊನ್ನೆ ಹೊಸ ವರ್ಷದ ಸಂಭ್ರಮಾಚರಣೆ ಆಯೋಜನೆ ಮಾಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಮೋಜು ಮಸ್ತಿ ಮಾಡಿದ ನಂತರ ಆಯೋಜಕರು ಉಳಿದ ಬಿರಿಯಾನಿ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡದೆ ಅಲ್ಲೇ ಬಿಟ್ಟು ಹೋಗಿರುವುದರಿಂದ ದನಕರುಗಳು, ತಿಂದು ಪ್ರಾಣ ಬಿಟ್ಟಿರುತ್ತದೆ. ಅಲ್ಲದೆ ಕೊಳೆತು ಗಬ್ಬುನಾತ ಬೀರುತ್ತಿದೆ. ಈ ಅವ್ಯವಸ್ಥೆಗೆ ಹೊಣೆ ಯಾರು? ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ...
1 2 3 4 5
Page 2 of 5