Sunday, January 19, 2025

archiveMangaluru

ಸುದ್ದಿ

ಶ್ರೀ ರಾಮಸೇನೆಯಿಂದ ಪ್ರಧಾನಮಂತ್ರಿಗೆ ಮನವಿ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರದ ನಿಲುವನ್ನು ಖಂಡಿಸಿ ಶ್ರೀ ರಾಮಸೇನೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನಾರ್ಥವಾಗಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮಂಗಳೂರಿನ ಜಿಲ್ಲಾಧಿಕಾರಿಗಳ ಮೂಲಕ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಅರುಣ್ ಕದ್ರಿ, ಮತ್ತಿತ್ತರರು ಉಪಸ್ಥಿತರಿದ್ದರು....
ಸುದ್ದಿ

ಗಾಂಜಾ ಸೇವನೆ ಪತ್ತೆ; ಓರ್ವನ ಬಂಧನ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಯ ದುಶ್ಚಟ ಯುವಕರಲ್ಲಿ ಹೆಚ್ಚಾಗುತ್ತಿದೆ. ಬಜಪೆ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕೆಲಿಂಜಾರು ಗ್ರಾಮದ ಕುಪ್ಪೆಪದವಿನಲ್ಲಿ 25 ವರ್ಷದ ತಂಜಿಲ್ ಎಂಬಾತ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿದು ಬಂದಿದ್ದು ಪೋಲಿಸರ ಅತಿಥಿಯಾಗಿದ್ದಾನೆ. ಈತ ಕುಪ್ಪೆಪದವು ನಿವಾಸಿಯಾಗಿದ್ದು, ಗಾಂಜಾ ಸೇವನೆ ಮಾಹಿತಿ ಮೇರೆಗೆ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶ್ರೀ ಎಸ್ ಪರಶಿವಮೂರ್ತಿ ಮತ್ತು ತಂಡ ದಾಳಿ ಮಾಡಿ ಪ್ರಕರಣ ಪತ್ತೆ ಹಚ್ಚಿ ಸದ್ರಿ...
ಸುದ್ದಿ

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ – ಕಹಳೆ ನ್ಯೂಸ್

ಮಂಗಳೂರು: ತೋಟ ಬೆಂಗ್ರೆಯಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಬಗ್ಗೆ ಶೀಘ್ರ ಹಾಗೂ ನಿಷ್ಪಕ್ಷ ತನಿಖೆ ನಡೆಸುವಂತೆ ಮತ್ತು ತಪ್ಪಿಸ್ಥರ ವಿರುದ್ಧ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ಪೊಲೀಸ್ ಕಮಿಷನರ್‍ಗೆ ಒತ್ತಾಯಿಸಿದ್ದಾರೆ. ಇಷ್ಟು ಮಾತ್ರವಲ್ಲ ಇಂತಹ ಅಮಾನವೀಯ ಕೃತ್ಯ ಎಸಗಿದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ. ಅಂತೆಯೇ ಮಂಗಳೂರಿನಲ್ಲಿ ಇತ್ತೀಚಿಗೆ ಡ್ರಗ್‍ಮಾಫಿಯಾ, ಸೆಕ್ಸ್ ಮಾಫಿಯಾ, ಪಬ್‍ಡ್ಯಾನ್ಸ್ ಬಾರ್‍ಗಳು ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ...
ರಾಜಕೀಯ

ಕಬ್ಬು ಬೆಳೆಗಾರರ ಕುರಿತು ಸಿಎಂ ಹೇಳಿಕೆ ವಿರುದ್ಧ ಕಿಡಿ ಕಾರಿದ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಕಬ್ಬು ಬೆಳೆಗಾರರ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದರು. ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ನೊಂದ ರೈತರಿಗೆ ಬರೆ ಎಳೆಯುತ್ತಿರುವುದು ನಿಜಕ್ಕೂ ಖಂಡನೀಯ ಘಟನೆಯಾಗಿದೆ. ಚುನಾವಣೆಯಲ್ಲಿ ತನಗೆ ಮತ ನೀಡಿಲ್ಲ ಎನ್ನುವ ಕೋಪವನ್ನು ಅಧಿಕಾರ ಹಿಡಿದ ಮೇಲೆ ಕುಮಾರಸ್ವಾಮಿಯವರು ಜನ ಸಾಮಾನ್ಯರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕುಮಾರಸ್ವಾಮಿಯವರು ಕೇವಲ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ...
ಸುದ್ದಿ

ಮಂಗಳೂರಿಗೆ ಆಗಮಿಸಿದ ಬಿಜೆಪಿ ಚಾಣಕ್ಯ ಅಮಿತ್ ಶಾ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದಾರೆ. ದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್ ಪೋರ್ಟ್‍ಗೆ ಬಂದಿಳಿದರು. ಸ್ವಲ್ಪ ತಡವಾಗಿ ಆಗಮಿಸಿದ ಅಮಿತ್ ಶಾರನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹೂಗುಚ್ಛ, ಶಾಲು ಹೊದಿಸಿ ಸ್ವಾಗತಿಸಿದರು. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಮಣ್ಣಗುಡ್ಡೆಯ ಸಂಘನಿಕೇತನಕ್ಕೆ ವಿಶೇಷ ಕಾರಿನಲ್ಲಿ ಬಿಗಿ ಭದ್ರತೆಯೊಂದಿಗೆ ತೆರಳಿದರು. ಮಂಗಳೂರಿನ ಆರ್‍ಎಸ್‍ಎಸ್ ಕಚೇರಿ ಸಂಘನಿಕೇತನದಲ್ಲಿ ನಡೆಯುತ್ತಿರೋ ಬೈಠಕ್‍ನಲ್ಲಿ ಅಮಿತ್ ಶಾ ಭಾಗವಹಿಸಿದ್ದಾರೆ.ಈ...
ಸುದ್ದಿ

ಮೈತ್ರಿ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ; ಸಿ ಟಿ ರವಿ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು: ಅವಹೇಳನ ಮಾಡಿ ಬೈಯುವವರಿಗೆ ಒಂದು ನೀತಿ. ಟಿಪ್ಪುವಿನ ವಾಸ್ತವಾಂಶ ತೋರಿಸಿದವರಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಲ್ಲಿರೋ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಪತ್ರಕರ್ತನ ಬಂಧನವನ್ನು ತೀವ್ರವಾಗಿ ಖಂಡಿಸಿದರು. ಟಿಪ್ಪು ಕುರಿತ ಹೇಳಿಕೆ ನೀಡಿದ ಪತ್ರಕರ್ತನನ್ನು ಬಂಧಿಸಿದ ಸರ್ಕಾರ ಈ ಹಿಂದೆ ಹಿಂದೂ ಧರ್ಮವನ್ನು, ಹಿಂದೂ ದೇವರನ್ನು ಅವಹೇಳನ ಮಾಡಿದ ಭಗವಾನ್, ಮಹೇಶ್ಚಂದ್ರ,...
ರಾಜಕೀಯಸುದ್ದಿ

ಇತಿಹಾಸ ತಿರುಚುವವರು ಅಧಿಕಾರಕ್ಕೇರಿರುವುದು ದೇಶಕ್ಕೆ ದುರಂತ; ವೀರಪ್ಪ ಮೊಯ್ಲಿ – ಕಹಳೆ ನ್ಯೂಸ್

ಮಂಗಳೂರು: ಇತಿಹಾಸ ತಿರುಚುವವರು, ಸ್ವತಂತ್ರ ಸಂಸ್ಥೆಗಳನ್ನು ವಿರೋಧಿಸುವವರು ಅಧಿಕಾರಕ್ಕೇರಿರುವುದು ದೇಶಕ್ಕೆ ದುರಂತ ಎಂದು ಮಾಜಿ ಸಿಎಂ, ಸಂಸದ ಡಾ.ಎಂ.ವೀರಪ್ಪಮೊಯ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ನೆಹರುರವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡದರು. ನೆಹರೂರವರ ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿ, ಸ್ವತಂತ್ರ ಸಂಸ್ಥೆಗಳ ಸ್ಥಾಪನೆ, ಜಾತ್ಯತೀತ ಸಂಸ್ಕೃತಿಯ ಪ್ರತಿಪಾದನೆ, ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಂತಹ ಕೊಡುಗೆಗಳು ಭಾರತದ ಸಂಪತ್ತುಗಳಾಗಿವೆ. ನೆಹರೂರವರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶದ ಸಂಸ್ಕೃತಿ, ಸಮೃದ್ಧಿಯನ್ನು...
ಸುದ್ದಿ

ಇಂದು ಮಂಗಳೂರಿಗೆ ಅಮಿತ್ ಶಾ ಭೇಟಿ: ಶಬರಿಮಲೆ ವಿವಾದ, ಅಯೋಧ್ಯೆ ಮಂದಿರ ಬಗ್ಗೆ ಚರ್ಚೆ – ಕಹಳೆ ನ್ಯೂಸ್

ಮಂಗಳೂರು:  ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಶೇಷ ವರ್ಗದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮಂಗಳೂರಿನ ಸಂಘನಿಕೇತನಕ್ಕೆ ಆಗಮಿಸುತ್ತಿದ್ದಾರೆ. ವರ್ಷಂಪ್ರತಿ ನಡೆಯುವ ಆರ್‍ಎಸ್‍ಎಸ್ ವಿಶೇಷ ವರ್ಗ ಈ ಬಾರಿ ದೇಶದ ಎರಡು ಕಡೆಗಳಲ್ಲಿ ನಡೆಯುತ್ತಿದೆ. ವಾರಾಣಸಿ ಮತ್ತು ಮಂಗಳೂರಿನಲ್ಲಿ ವಿಶೇಷ ವರ್ಗ ನಡೆಯುತ್ತಿದೆ. ಭಾನುವಾರದಿಂದ ವಿಶೇಷ ವರ್ಗ ಆರಂಭವಾಗಿದ್ದು, ಸಂಘ ಹಾಗೂ ಸಂಘ ಪರಿವಾರ ಸಂಘಟನೆಗಳ ಸಂಘಟನಾತ್ಮಕ ದೃಷ್ಟಿಯಿಂದ...
1 2 3 4 5
Page 3 of 5