ಮೆಟ್ರೋ ರೈಲು ಸಂಪರ್ಕ ಯೋಜನೆಯಲ್ಲಿ ಹೊಸ ಹೆಜ್ಜೆ – ಕಹಳೆ ನ್ಯೂಸ್
ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಮೆಟ್ರೋ ರೈಲು ಸಾಗುವ ಮಾರ್ಗದ ಗೊಂದಲ ನಿವಾರಣೆಯಾಗಿ ಹೆಬ್ಬಾಳ ಮೂಲಕ ರೈಲು ಹೋಗುವುದಾಗಿ ತೀರ್ಮಾನ ಮಾಡಲಾಗಿದೆ. ಹಿಂದಿನ ವಿನ್ಯಾಸದಲ್ಲಿದ್ದ ಆರ್. ಕೆ. ಹೆಗಡೆ ನಗರ ಬದಲು ಹೆಬ್ಬಾಳ ಮೂಲಕವೇ ಮಾರ್ಗ ನಿರ್ಮಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಪ್ರತಿದಿನ ಲಕ್ಷಾಂತರ ವಿಮಾನ ಪ್ರಯಾಣಿಕರಿಗೆ ಮತ್ತು ಮಾರ್ಗ ಮಧ್ಯದ ನಡುವಿನ ಊರಿನ...