ಬದುಕನ್ನು ನಿರ್ವಹಿಸುವ ಕಲೆಯ ಅರಿವು ಮೂಡುತ್ತಿಲ್ಲ: ಡಾ.ಶ್ರೀಧರ ನಾಯ್ಕ್ – ಕಹಳೆ ನ್ಯೂಸ್
ಪುತ್ತೂರು: ಶಾಲಾ ಕಾಲೇಜು ಪರೀಕ್ಷೆಗಳಿಗಳಿಗಿಂತ ಜೀವನದ ಪರೀಕ್ಷೆಗಳು ಬಹು ಅಮೂಲ್ಯವಾದವುಗಳು. ಅಂಕದ ಪರೀಕ್ಷೆಯ ಬಗೆಗಿನ ಆಸಕ್ತಿ ಬದುಕನ್ನು ಅಂಕೆಯಲ್ಲಿಟ್ಟುಕೊಳ್ಳುವುದರ ಬಗೆಗೆ ಇಲ್ಲದಿರುವುದು ಖೇದಕರ. ಬದುಕನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವೈಫಲ್ಯ ಕಾಣುತ್ತಿರುವುದೇ ಇಂದಿನ ಅನೇಕ ಸಾಮಾಜಿಕ, ಸಾಂಸ್ಕೃತಿಕ ವಿಘಡಣೆಗೆ ಕಾರಣವಾಗುತ್ತಿದೆ ಎಂದು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ನಾಯ್ಕ್ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯ...