ಮುಂಬೈಯಲ್ಲಿ ಭಾರೀ ಮಳೆಗೆ ಎರಡು ಕಡೆ ಕಟ್ಟಡ ಕುಸಿತ, ಮೃತರ ಸಂಖ್ಯೆ 8ಕ್ಕೆ ಏರಿಕೆ – ಕಹಳೆ ನ್ಯೂಸ್
ಮುಂಬೈ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಎರಡು ಕಡೆ ಕಟ್ಟಡ ಕುಸಿತದಿಂದಾಗಿ ಮೃತರ ಸಂಖ್ಯೆ 8ಕ್ಕೇರಿದೆ ಎಂದು ವರದಿಯಾಗಿದೆ. ನಿನ್ನೆ ಮದ್ಯಾಹ್ನ ನಗರದ ಮಲಾಡ್ ನ ಅಬ್ದುಲ್ ಹಮೀದ್ ಮಾರ್ಗದ ಮಾಲ್ವಾನಿಯಲ್ಲಿ ಎರಡು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಕಾರಣ ಇಬ್ಬರು ಮೃತಪಟ್ಟಿದ್ದರು. ನಂತರ ದಕ್ಷಿಣ ಮುಂಬೈನ ಕೋಟೆ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡವೊಂದು ಕುಸಿದ ಕಾರಣ 4 ಮಂದಿ ಸಾವನ್ನಪ್ಪಿದ್ದರು. ನಿನ್ನೆಯಿಂದಲೇ ರಕ್ಷಣಾ ಕಾರ್ಯ ಭರದಿಂದ...