ಉಕ್ಕಿನ ಮನುಷ್ಯನ ಉಕ್ಕಿನ ಪ್ರತಿಮೆ ಉದ್ಘಾಟನೆಗೆ ಸಿದ್ಧ | 2989 ಕೋಟಿ ರೂ ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆ | ಇದರ ವಿಶೇಷತೆಗಳೇನು? – ಕಹಳೆ ನ್ಯೂಸ್
ಬೆಂಗಳೂರು (ಅ.30): ದೇಶದ ಮೊದಲ ಗೃಹ ಸಚಿವ, ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮರಣಾರ್ಥ ಗುಜರಾತಿನ ನರ್ಮದಾ ನದಿಯ ಮಧ್ಯೆ ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ. ಇನ್ನು 15 ದಿನದಲ್ಲಿ ಇದು ಲೋಕಾರ್ಪಣೆಗೊಳ್ಳಲಿದ್ದು, ಪ್ರತಿಮೆಯ ವಿಶೇಷತೆ ಏನು ಎಂಬ ಸಮಗ್ರ ವಿವರ ಇಲ್ಲಿದೆ. ಪಟೇಲರಿಗೆ ಉಕ್ಕಿನ ಪ್ರತಿಮೆ ಏಕೆ? ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ್ದು 31 ಅಕ್ಟೋಬರ್ 1875 ರಂದು ಗುಜರಾತ್‌ನ ಪಟೇಲ್ ಪಾಟೀದಾರ್ ಸಮುದಾಯದಲ್ಲಿ. ಪಟೇಲರು ಕಾಂಗ್ರೆಸ್‌ನ...