ವಿಶ್ವ ಸಮುದಾಯದ ವಿಶ್ವಾಸವನ್ನು ಕಳೆದುಕೊಂಡ ಪಾಕ್: ಹದಗೆಟ್ಟಿರುವ ಆರ್ಥಿಕ ಸ್ಥಿತಿ – ಕಹಳೆ ನ್ಯೂಸ್
ದೆಹಲಿ: ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಾ ಭಯೋತ್ಪಾದಕರನ್ನು ಗಡಿ ಮೂಲಕ ಒಳ ನುಗ್ಗಿಸಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಪಾಕಿಸ್ತಾನ, ಈಗ ವಿಶ್ವ ಸಮುದಾಯದ ಮುಂದೆಯೂ ತನ್ನ ಕುಟಿಲ ನೀತಿಗಳಿಂದಾಗಿ ಬೆತ್ತಲಾಗಿದ್ದು, ಆರ್ಥಿಕ ನೆರವಿಗಾಗಿ ಅಂಗಲಾಚುವ ಸ್ಥಿತಿಗೆ ಬಂದು ನಿಂತಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದ್ದು, ಆರ್ಥಿಕ ಬೆಳವಣಿಗೆಯಲ್ಲಿ ಬಾಂಗ್ಲಾದೇಶಕ್ಕಿಂತಲೂ ಹಿಂದಿದೆ. ಈ ಹಿಂದೆ ಅಮೆರಿಕದಿಂದ ಭಾರಿ ಆರ್ಥಿಕ ನೆರವು ಪಡೆದಿದ್ದ ಪಾಕಿಸ್ತಾನ, ಈಗ ನೆರವು ಸ್ಥಗಿತಗೊಂಡಿರುವ...