ಪಾನಿಪೂರಿ ತಯಾರಿಕಾ ಘಟಕಕ್ಕೆ ನಗರಸಭೆಯ ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್
ಪುತ್ತೂರು: ಸ್ವಚ್ಛತೆ ರಹಿತವಾಗಿ, ಅನುಮತಿ ಪಡೆದುಕೊಳ್ಳದೆ ಕಾರ್ಯಾಚರಿಸುತ್ತಿದ್ದ ಪಾನಿಪೂರಿ ತಯಾರಿಕಾ ಘಟಕವೊಂದರ ಮೇಲೆ ನಗರಸಭೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಪಾನಿ ಪೂರಿ ತಯಾರಿಕೆಗೆ ಬಳಸಲಾಗುತ್ತಿದ್ದ ಸ್ವತ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಪಾನಿಪೂರಿ ತಯಾರಿಕಾ ಘಟಕದ ಮಾಲಕನಿಗೆ ನೋಟಿಸ್ ನೀಡಿದ್ದಾರೆ. ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿರುವ ಆದಂ ಎಂಬವರ ಮಾಲಕತ್ವದ ಬಾಡಿಗೆ ಕೋಣೆಯಲ್ಲಿ ಉತ್ತರ ಭಾರತ ಮೂಲದವರಾದ ರೂಪ್ ಸಿಂಗ್, ಅವರ ಸಹೋದರ ಕುಲ್‍ದೀಪ್ ಸಿಂಗ್ ಎಂಬವರು ಸೇಲು,...