Sunday, January 19, 2025

archivePuttur

ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ; 15 ಇಂಚು ಉದ್ದದ ಕತ್ತಿ, ಹರಿತವಾದ ಚಾಕು ವಶಕ್ಕೆ, ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಪುತ್ತೂರು: ದ.ಕ.ಜಿಲ್ಲೆಯಲ್ಲೇ ಭಾರಿ ಪ್ರಮಾಣದ ಗಾಂಜಾ ಪ್ರಕರಣವನ್ನು ಬೇಧಿಸಿದ ಪುತ್ತೂರು ನಗರ ಪೊಲೀಸರು ಇದೀಗ ಮತ್ತೊಮ್ಮೆ ಗಾಂಜಾ ಮಾರಾಟ ಜಾಲವನ್ನು ಎಸ್.ಐ ಜಂಬೂರಾಜ್ ನೇತೃತ್ವದ ದಾಳಿಯಿಂದ ಪತ್ತೆ ಮಾಡಿ ಸುಮಾರು ೬ ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ನ.೩೦ರಂದು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್‌ಸಿಂಗ್ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.   ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನಿರ್ದೇಶನದಂತೆ ಎ.ಎಸ್ಪಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ತೆಂಕಿಲದಲ್ಲಿ ಅಕ್ರಮ ಹುಲಿ ಚರ್ಮ ಮಾರಾಟ ಪ್ರಕರಣ ; ಆರೋಪಿಗಳ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಸುಮಾರು 11 ವರ್ಷಗಳ ಹಿಂದೆ ಪುತ್ತೂರು ನಗರದ ಬೈಪಾಸ್ ತೆಂಕಿಲ ಎಂಬಲ್ಲಿ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡುತ್ತಿದರೆಂದು ಆರೋಪಿಸಲಾದ ಪ್ರಕರಣವೊಂದರಲ್ಲಿ ಆರೋಪಿಗಳಾದ ಅಬೂಬಕ್ಕರ್, ವಿನೋದ್, ಉಮೇಶ್ ಮತ್ತು ಕರಿಂಮ್‍ರವರನ್ನು ಪುತ್ತೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಮಂಜುನಾಥ ಎಸ್.ರವರು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದಾರೆ. ಮಂಗಳೂರು ವಿಶೇಷ ಪೆÇಲೀಸ್ ಸಂಚಾರಿದಳದ ಪೋಲೀಸ್ ಉಪನಿರೀಕ್ಷಕರಿಗೆ ಪುತ್ತೂರು ತಾಲೂಕು ಈಶ್ವರಮಂಗಲ ಎಂಬಲ್ಲಿಂದ ಆಟೋರಿಕ್ಷಾ ಕೆ.ಎ.21-9102 ನೇದರಲ್ಲಿ ಹುಲಿಚರ್ಮವನ್ನು...
ದಕ್ಷಿಣ ಕನ್ನಡಪುತ್ತೂರುಸುದ್ದಿ

” ಜೈ ಭಜರಂಗಿ ” – ಪುತ್ತೂರಿನ ಆಸ್ಪತ್ರೆಯಿಂದ ಪರಾರಿಯಾದ ಕೊರೊನಾ ಶಂಕಿತ ವ್ಯಕ್ತಿಯನ್ನು ಹಿಡಿದು ಆಸ್ಪತ್ರೆಗೆ ಮರು ದಾಖಲಿಸಿದ ಬಜರಂಗದಳ ಕಾರ್ಯಕರ್ತರು – ಕಹಳೆ ನ್ಯೂಸ್

ಪುತ್ತೂರು : ಸರಕಾರಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೋರೋನಾ ಶಂಕಿತ ವ್ಯಕ್ತಿಯನ್ನು ಹಿಡಿದು ಬಜರಂಗದಳ ಕಾರ್ಯಕರ್ತರು ಅಸ್ಪತ್ರೆಗೆ ದಾಖಲಿಸಿದ್ದಾರೆ. ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋರೋನಾ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪುತ್ತೂರು ನಗರದ ತಾಲೂಕು ಆಫೀಸ್ ರಸ್ತೆ ಬದಿ ತಿರುಗಾಡಿಕೊಂಡು ಬಿದ್ದಿದ್ದ ಇದರ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಕಾರ್ಯಪ್ರವೃತರಾದ ಪುತ್ತೂರು ಬಜರಂಗದಳ ಕಾರ್ಯಕರ್ತರು ಪಿಪಿಟಿ ಕಿಟ್ ಧರಿಸಿ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಪುತ್ತೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ವ್ಯಕ್ತಿಯನ್ನು...
ದಕ್ಷಿಣ ಕನ್ನಡಪುತ್ತೂರು

ಪುತ್ತೂರಿನಲ್ಲಿ ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಆಕ್ರೋಶ ; ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ ವಿದ್ಯಾರ್ಥಿ ಶಕ್ತಿ – ಕಹಳೆ ನ್ಯೂಸ್

ಪುತ್ತೂರು: ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಜತೆಗಿನ ಗಡಿ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಪುತ್ತೂರಿನಲ್ಲೂ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಜೊತೆಗೆ ಜೂ. 18ರಂದು ಮುಸ್ಸಂಜೆ ಇಲ್ಲಿನ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಎದುರು ಎಬಿವಿಪಿ ಕಾರ್ಯಕರ್ತರು ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಂಘಪರಿವಾರದ ಹಿರಿಯ ಕಾರ್ಯಕರ್ತ ಚಂದ್ರಶೇಖರ್ ಅವರು ಹುತಾತ್ಮ...
ದಕ್ಷಿಣ ಕನ್ನಡಪುತ್ತೂರು

” ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ” – ವಿಶ್ವಹಿಂದೂ ಪರಿಷತ್ತು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಆಗ್ರಹ – ಕಹಳೆ ನ್ಯೂಸ್

ಪುತ್ತೂರು: ಭಾರತದ ಗಡಿಯಲ್ಲಿ ವಿನಃ ಕಾರಣ ತಗಾದೆ ತೆಗೆಯುತ್ತಿರುವ ಚೀನಾಕ್ಕೆ ನಮ್ಮ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಈ ಘರ್ಷಣೆಯಲ್ಲಿ ನಮ್ಮ 20 ಯೋಧರ ಬಲಿದಾನವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಚೀನಾದ ಸರಕು, ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಹೇಳಿದರು. ಅವರು ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧ ನಡೆದ ಸಂಘರ್ಷದ ವೇಳೆ...
ಸುದ್ದಿ

Breaking News : ಪುತ್ತೂರಿನ ಬೆಟ್ಟಂಪಾಡಿಯಲ್ಲಿ ಸ್ಪೋಟ ; ಒಬ್ಬನ ಸ್ಥಿತಿ ಗಂಭೀರ, ಹಲವರಿಗೆ ಗಾಯ – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಬೆಟ್ಟಂಪಾಡಿಯ ನಿವಾಸಿ ಕೇಪುಗೌಡ (85 ವರ್ಷ) ಎಂಬವರ ಪುತ್ರ ಬಾಲಕೃಷ್ಣ (54 ವರ್ಷ) ಎಂಬುವರ ಮನೆಯಲ್ಲಿ ಪಟಾಕಿಯಂತಹ ಸ್ಫೋಟಕ ವಸ್ತುವೊಂದು ಸಿಡಿದು ಒಬ್ಬ ಗಂಭೀರ ಗಾಯಗೊಂಡು 2 ಜನ ಸಣ್ಣಪುಟ್ಟ ಗಾಯಗೊಂಡ ಬಗ್ಗೆ ಡಿ.5 ರಂದು ವರದಿಯಾಗಿದೆ. ತಮ್ಮ ಕೃಷಿಬೆಳೆಗಳಿಗೆ ಹಾನಿ ಮಾಡುವ ಕಾಡುಪ್ರಾಣಿಗಳನ್ನು ಕೊಲ್ಲಲು ಎಲ್ಲಿಂದಲೋ ಸ್ಪೋಟಕ ಸಾಮಾಗ್ರಿಗಳನ್ನು ತಂದು ತನ್ನ ಮನೆಯಲ್ಲೇ ಕಚ್ಚಾ ಸ್ಪೋಟಕವನ್ನು ತಯಾರಿಸಿಸುತ್ತಿದ್ದ ವೇಳೆ ಸ್ಪೋಟಕ ಸಿಡಿದಿದ್ದು ಪರಿಣಾಮವಾಗಿ ಬಾಲಕೃಷ್ಣರವರು ಗಂಭೀರವಾಗಿ...
ಸುದ್ದಿ

ಫಿಲೋಮಿನಾದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆ ; ಸೇವೆಯು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಬೇಕು ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ – ಕಹಳೆ ನ್ಯೂಸ್

ಪುತ್ತೂರು: ಪ್ರತಿಫಲ ಬಯಸದೆ ಮಾಡುವ ಕಾಯಕವೇ ರಾಷ್ಟ್ರೀಯ ಸೇವಾ ಯೋಜನೆ. ರಾಷ್ಟ್ರೀಯ ಸೇವಾ ಯೋಜನೆಯ ಸೇವೆ ಪ್ರಶಂಸನೀಯ. ಸೇವೆಯು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಘಟಕವು ಸೆಪ್ಟಂಬರ್ 27ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಮತ್ತು ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು...
ಸುದ್ದಿ

ಎ. 16 ರಂದು ಮಹಾಲಿಂಗೇಶ್ವರನಿಗೆ ‘ ಸ್ವರಾಭಿಷೇಕ ‘ ; ಕಹಳೆ ನ್ಯೂಸ್ ಸಾಂಸ್ಕೃತಿಕ ಸಂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನಿಂದ ಜಿಲ್ಲೆಗೆ ಪ್ರಸಾರವಾಗುತ್ತಿರುವ ಏಕೈಕ ಕೇಬಲ್ ಸುದ್ದಿವಾಹಿನಿ ಕಹಳೆ ನ್ಯೂಸ್ ಎರಡನೇ ವರ್ಷದ " ಸ್ವರಾಭಿಷೇಕ - 2019 " ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಬಿಡುಗಡೆ ಮಾಡಲಾಯಿತು. ಎ. 16 ರಂದು ಮಹಾಲಿಂಗೇಶ್ವರನಿಗೆ ' ಸ್ವರಾಭಿಷೇಕ ' - ಭಕ್ತಿಗಾಯನ , ನೃತ್ಯ ಸಂಭ್ರಮ ಜಿಲ್ಲೆಯ...
1 2 3 6
Page 1 of 6