Sunday, January 19, 2025

archivePuttur

ಸುದ್ದಿ

ಮೃತ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಬೆಟ್ಟಂಪಾಡಿಯಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕಿಗೆ ಬಿದ್ದು ಮೂವರು ಮಕ್ಕಳು ವಿಧಿವಶರಾದ ಹಿನ್ನೆಲೆಯಲ್ಲಿ ಮೃತ ಮಕ್ಕಳ ಮನೆಗಳಿಗೆ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಭೇಟಿ ನೀಡಿದರು. ಭೇಟಿ ನೀಡಿ ಪೋಷಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಬದ್ರಿನಾಥ್ ಕಾಮತ್ ಹಾಗೂ ಇನ್ನಿತರ ಮುಖಂಡರು ಜೊತೆಗಿದ್ದರು....
ಸುದ್ದಿ

Breaking News : ಪುತ್ತೂರಿನಲ್ಲಿ ನೀರಿನ ಟ್ಯಾಂಕಿಗೆ ಬಿದ್ದು ಒಂದೇ ಕುಟುಂಬದ ಮೂರೂ ಮಕ್ಕಳು ಸಾವು – ಕಹಳೆ ನ್ಯೂಸ್

ಪುತ್ತೂರು, ಎಪ್ರಿಲ್ 3 : ನೀರಿನಲ್ಲಿ ಆಟವಾಡಲೆಂದು ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿಗೆ ಇಳಿದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ನಡೆದಿದೆ. ಸಾವಿಗೀಡಾದ ಮಕ್ಕಳನ್ನು ವಿಶ್ಮಿತಾ (13), ಚೈತ್ರಾ (10) ಹಾಗೂ ಜಿತೇಶ್ (13) ಎಂದು ಗುರುತಿಸಲಾಗಿದೆ. ಮೃತಪಟ್ಟ ಮಕ್ಕಳೆಲ್ಲಾ ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಹಿನ್ನಲೆಯಲ್ಲಿ ಆಟವಾಡಲು ತೆರಳಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೋಲೀಸರು...
ಸುದ್ದಿ

ಗೋ-ಕಾರ್ಟ್ ವಾಹನ ಸ್ಟಾಲಿಯನ್-3ಗೆ ರಾಷ್ಟ್ರಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ರೀವನ್ ರೇಸಿಂಗ್ ತಂಡವು ಅಭಿವೃದ್ಧಿಪಡಿಸಿದ ಗೋ-ಕಾರ್ಟ್ ವಾಹನ ಸ್ಟಾಲಿಯನ್-3 ರಾಷ್ಟ್ರಮಟ್ಟದ ವಾಹನ ವಿನ್ಯಾಸ ಸ್ಪರ್ಧೆಯಲ್ಲಿ ಮೂರು ಪ್ರಥಮ ಸ್ಥಾನಗಳೊಂದಿಗೆ ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಆಂಧ್ರಪ್ರದೇಶದ ಕಾಕಿನಾಡದಲ್ಲಿನ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಸೈಗರ್ ಗೋ-ಕಾರ್ಟಿಂಗ್ ಚಾಂಪಿಯನ್‍ಶಿಪ್-2019 ಸ್ಪರ್ಧೆಯಲ್ಲಿ ಈ ವಾಹನವು ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದೆ. ದೇಶಾದ್ಯಂತ ವಿವಿಧ...
ಸುದ್ದಿ

ಪುತ್ತೂರು ಭಜರಂಗದಳ ಕಾರ್ಯಕರ್ತರಿಂದ ಡ್ರೈನೆಜ್‍ಗೆ ಬಿದ್ದ ಗೋವಿನ ರಕ್ಷಣೆ – ಕಹಳೆ ನ್ಯೂಸ್

ಪುತ್ತೂರು: ಸರಕಾರಿ ಆಸ್ಪತ್ರೆಯ ಹಿಂಭಾಗದ ಡ್ರೈನೆಜ್‍ಗೆ ಗೋವೊಂದು ಬಿದ್ದು 2ದಿನ ಕಳೆದಿತ್ತು, ಇದನ್ನು ಸ್ಥಳೀಯ ಸಾರ್ವಜನಿಕರು ಗಮನಿಸಿ ಪುತ್ತೂರು ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ತಕ್ಷಣ ಭಜರಂಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಧರಿತ್ರಿ ಅರ್ಥ್ ಮೂವರ್ಸ್ ಹಿಟಾಚ್‍ನ ಸಹಾಯದ ಮೂಲಕ ಮೇಲಕ್ಕೆತ್ತಿ ಗೋವನ್ನು ರಕ್ಷಣೆ ಮಾಡಲಾಯಿತು. ಈ ಸಂದರ್ಭ ಭಜರಂಗದಳ ಪ್ರಖಂಡ ಮಾಜಿ ಅಧ್ಯಕ್ಷ ಅನಿಲ್ ತೆಂಕಿಲ, ಭಜರಂಗದಳ ಜಿಲ್ಲಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು, ಪ್ರಖಂಡ ಭಜರಂಗದಳ ಸಹ ಸಂಚಾಲಕ್...
ಸುದ್ದಿ

ಯಶಸ್ ಸಂಸ್ಥೆಯಿಂದ ಭಗವದ್ಗೀತಾ ಅಧ್ಯಯನ ತರಗತಿ ಆರಂಭ – ಕಹಳೆ ನ್ಯೂಸ್

ಪುತ್ತೂರು: ಭಗವದ್ಗೀತೆ ಹಾಗು ಅದರ ಸಂದೇಶ ನಮಗೆ ದೊರಕಿರುವ ಅತ್ಯಮೂಲ್ಯ ಸಂಪತ್ತು. ಭಯದಿಂದ, ಆತಂಕಗಳಿಂದ ಕುಡಿದ ಕಲ್ಪನಾ ಲೊಕದಲ್ಲಿರುವ ಸಕಲ ಜೀವಿಗಳ ವಿಕಾಸಕ್ಕಾಗಿ ಭಗವದ್ಗೀತೆ ಸಹಕಾರಿ. ಅ ಕಾರಣದಿಂದ ಭಗವದ್ಗೀತೆ ಒಂದು ಜೀವನ ಗ್ರಂಥ ಎಂದು ಧಾರ್ಮಿಕ ಪ್ರವಚನಾಕಾರ ಕೇಶವ ಭಟ್ ಕೇಕಣಾಜೆ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತಿತ ವಿವೇಕಾನಂದ ಅಧ್ಯಯನ ಕೇಂದ್ರ - ಯಸಸ್ ಇದರ ವತಿಯಿಂದ ಆಯೋಜಿಸಲಾದ ಗೀತೋಪದೇಶ- ಭಗವದ್ಗೀತಾ ಅಧ್ಯಯನ ತರಗತಿ ಉದ್ಘಾಟನಾ...
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಸ್ಪರ್ಧೆ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಸೂಕ್ತ ವೇದಿಕೆ ದೊರೆತಾಗಲಷ್ಟೆ ಅದನ್ನು ಪ್ರದರ್ಶಿಸಬಹುದು. ಕಲಿಕೆಯೊಂದಿಗೆ ಪಠ್ಯೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮುಂದಿನ ವೃತ್ತಿ ಜೀವನಕ್ಕೆ ಕ್ಷಮತೆ ದೊರಕುತ್ತದೆ ಎಂದು ವಿವೇಕಾನಂದ ಮಹವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ವಿಭಾಗದಿಂದ ಅಯೋಜನೆಗೊಂಡ ಆಂತರಿಕ ವಾಣಿಜ್ಯ ಸ್ಪರ್ಧೆ-2019 ನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಕಾಲೇಜಿನ ಆಡಳಿತ...
ಸುದ್ದಿ

ಪುತ್ತೂರು ಕಂಬಳದ ಫಲಿತಾಂಶ ಪ್ರಕಟ – ಕಹಳೆ ನ್ಯೂಸ್

ಪುತ್ತೂರು: ತುಳುನಾಡಿನ ಜಾನದಪ ಕ್ರೀಡೆ ಕಂಬಳದ ಕಂಪು ಪುತ್ತೂರು ಮಣ್ಣಿನಲ್ಲಿ ಪರಿಮಳ ಬೀರಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 26ನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳ ಯಶಸ್ವಿಯಾಗಿ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸಹಿತ ಸಮಗ್ರ ತುಳುನಾಡಿನ ಮೂಲೆ ಮೂಲೆಗಳಿಂದ 133 ಜೋಡಿ ಕೋಣಗಳು ಪಾಲ್ಗೊಂಡಿದ್ದು, ದೇವಸ್ಥಾನದ ಎದುರಿನ 14 ಎಕರೆ ವಿಶಾಲ ದೇವರಮಾರು ಗದ್ದೆಯಲ್ಲಿ ಜನ ಸಾಗರದ ನಡುವೆ ಕಂಬಳ ಭಾರಿ ಯಶಸ್ಸು ಕಂಡಿತು....
ಸುದ್ದಿ

ಕಲ್ಲೇಗದ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ – ಕಹಳೆ ನ್ಯೂಸ್

ಪುತ್ತೂರು: ಕಲ್ಲೇಗದ ಕಾರ್ಣಿಕ ಪ್ರಸಿದ್ಧ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವದ ಕಳೆ ಆರಂಭವಾಗಿದೆ. ಜ. 20 ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವದಲ್ಲಿ ಗೋಂದಲು ಪೂಜೆ, ನೇಮೋತ್ಸವ ನಡೆಯಲಿದೆ. ಈ ನೇಮೋತ್ಸವಕ್ಕೆ ಊರ ಮತ್ತು ಪರವೂರ ಸಾವಿರಾರು ಭಕ್ತರು ಆಗಮಿಸಲಿದ್ದಾರೆ....
1 2 3 4 6
Page 2 of 6