Recent Posts

Sunday, January 19, 2025

archivePuttur

ಸುದ್ದಿ

ವಿಶ್ವಹಿಂದೂ ಪರಿಷತ್ ಪುತ್ತೂರು ಮೊಸರು ಕುಡಿಕೆ ಉತ್ಸವದ ದಶಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಪೂರ್ಣಜಿತ್ ರೈ, ಕಾರ್ಯದರ್ಶಿಯಾಗಿ ದನ್ಯಕುಮಾರ್ ಬೆಳಂದೂರು ಆಯ್ಕೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ನ ಸ್ಥಾಪನ ದಿನದ ಅಂಗವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ 10 ನೇ ವರುಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ದ ಅಂಗವಾಗಿ ಪುತ್ತೂರು ಮೊಸರು ಕುಡಿಕೆ ದಶಮಾನೋತ್ಸವ ಸಮಿತಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ನಡೆಯಿತು. ಪುತ್ತೂರು ಮೊಸರು ಕುಡಿಕೆ ದಶಮಾನೋತ್ಸವ ಸಮಿತಿ ಯ ಅಧ್ಯಕ್ಷರಾಗಿ ಯುವ ಉದ್ಯಮಿ ಪೂರ್ಣಜೀತ್ ರೈ ಬೆಳ್ಳಿಪ್ಪಾಡಿ,ಉಪಾಧ್ಯಕ್ಷ ರಾಗಿ ವೆಂಕಟರಮಣ...
ಸುದ್ದಿ

Exclusive : ಖಾಸಗಿ ಶಾಲೆಗಳ ಭರಾಟೆಯ ಮಧ್ಯದಲ್ಲೂ ದಕ್ಷಿಣ ಕನ್ನಡದ ಈ ಸರಕಾರಿ ಶಾಲೆ ಪ್ರವೇಶಕ್ಕೆ ಸಾಲು ನಿಲ್ಲುವ ಪೋಷಕರು – ಕಹಳೆ ನ್ಯೂಸ್

ಮಂಗಳೂರು, ಜುಲೈ 13 : ಖಾಸಗಿ ಶಾಲೆಗಳ ಭರಾಟೆ ಮಧ್ಯೆ ಸರಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುವ ಪೋಷಕರೇ ಹೆಚ್ಚು. ಸಾಲ- ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದಲ್ಲಿರುವ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಸಾಲುಗಟ್ಟೆ ನಿಲ್ಲುತ್ತಾರೆ. ಪ್ರತಿ ವರ್ಷವೂ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರುತ್ತಿದ್ದು, ಶಿಸ್ತಿನ ಕಾರಣಕ್ಕಾಗಿ ಇಲ್ಲಿಯ ಶಿಕ್ಷಕರೂ ಸಮವಸ್ತ್ರ ಧರಿಸುತ್ತಾರೆ....
ಸುದ್ದಿ

ನೀವು ಹಲಸು ಪ್ರೀಯರೇ..? ಕಾದಿದೆ ನಿಮಗೊಂದು ಸುವರ್ಣ ಅವಕಾಶ ; ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಜುಲೈ 8ರಂದು ” ಹಲಸಿನ ಹಬ್ಬ ” – ಕಹಳೆ ನ್ಯೂಸ್

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ಹಲಸಿನ ಹಬ್ಬ’ವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ ವೇದಿಕೆ’ಯಲ್ಲಿ ಜುಲೈ 8 ರವಿವಾರದಂದು ಜರುಗಲಿದೆ. ದಿನಪೂರ್ತಿ ನಡೆಯುವ ಹಬ್ಬವನ್ನು ಪುತ್ತೂರಿನ ನವಚೇತನ ಸ್ನೇಹ ಸಂಗಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಪುತ್ತೂರು – ಜಂಟಿಯಾಗಿ ಆಯೋಜಿಸಿದ್ದಾರೆ. ವಿವಿಧ ಹಲಸಿನ ತಳಿ/ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಖಾದ್ಯ ವೈವಿಧ್ಯಗಳ ದರ್ಶನ, ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಿಲನ, ವಿಶೇಷ ತಳಿಗಳ ಶೋಧ, ಹಲಸಿನ ಹಣ್ಣು...
ಸುದ್ದಿ

ದಿವ್ಯಾ ಮೇಲಿನ ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ; ಕಲ್ಬುರ್ಗೀಯ ಉಪ ಆಯುಕ್ತ ಖಾನ್ ನಿಂದ ಲವ್ ಜಿಹಾದ್ ಗೆ ಬೆಂಬಲ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆವತಿಯಿಂದ ಮಧ್ಯಪ್ರದೇಶದ ಮಾಂಡ್ಸೂರ್ ನಲ್ಲಿ ನಡೆದ 7ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಆರೋಪಿ ಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಹಾಗೂ ಕಲ್ಬುರ್ಗೀ ಯ ವಾಣಿಜ್ಯ ತೆರಿಗೆಯ ಉಪ ಆಯುಕ್ತನಾದ ಇರ್ಷಾದ್ ಉಲ್ ಖಾನ್ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡಿರುವ ವಿರುದ್ಧ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.   ಪ್ರತಿಭಟನೆಯಲ್ಲಿ ಮುರಳಿಕೃಷ್ಣ ಹಸಂತ್ತಡ್ಕ , ಶ್ರೀಕೃಷ್ಣ ಉಪಾಧ್ಯಾಯ...
ಸುದ್ದಿ

Exclusive : ಮೂಗು ಮುಚ್ಕೊಳಿ, ಇಂಜೆಕ್ಷನ್‌ ಚುಚ್ಚಿಸ್ಕೊಳ್ಳದಿರಿ ; ಮೂಲಭೂತ ಸೌಕರ್ಯದ ಕೊರತೆಯಿಂದ ಬಳಲುತ್ತಿದೆ ಪುತ್ತೂರಿನ ಸರಕಾರಿ ಆಸ್ಪತ್ರೆ – ಕಹಳೆ ನ್ಯೂಸ್

ಪುತ್ತೂರು : ಸರಕಾರಿ ಆಸ್ಪತ್ರೆ ಇದೀಗ ಸಮಸ್ಯೆಗಳ ಆಗರವಾಗಿ ಬೆಳೆದು ನಿಂತಿದೆ. ಸಿಬ್ಬಂದಿಗಳ ಕೊರತೆ ಇಲ್ಲಿನ ಸಾಮಾನ್ಯ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆಯೂ ಇಲ್ಲಿ ಎದ್ದು ಕಾಣುತ್ತಿದೆ. ತುರ್ತು ಚಿಕಿತ್ಸೆ ಹಾಗೂ ಡಯಾಲಿಸೀಸ್ ಮೊದಲಾದ ವಿಭಾಗಗಳಿರುವ ಈ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಅತೀ ಅವಶ್ಯಕವಾಗಿ ಬೇಕಾದ ಜನರೇಟರ್ ಇಲ್ಲಿ ಕೆಟ್ಟು ಹೋಗಿ ಆರು ತಿಂಗಳುಗಳೇ ಕಳೆದಿದೆ. ಹೀಗೆ ಕೈಗೆಲ್ಲಾ ಪೈಪ್ ಚುಚ್ಚಿಕೊಂಡು ಇರುವವರು ಪುತ್ತೂರಿನ...
ರಾಜಕೀಯ

ಮಠಂದೂರು ಗೆಲುವಿಗೆ ಬಿಜೆಪಿ ರಣಕಹಳೆ ; ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಇಂದು ಪುತ್ತೂರಿಗೆ – ಕಹಳೆ ನ್ಯೂಸ್

ಪುತ್ತೂರು : ತೀವ್ರ ವಿರೋಧದ ನಡುವೆ ಸವಾಲಾಗಿ ಸ್ವೀಕರಿಸಿದ ಬಿ.ಜೆ.ಪಿ. ಸಂಜೀವ ಮಠಂದೂರು ಅವರನ್ನು ಗೆಲ್ಲಿಸಿಯೇ ಸಿದ್ಧ ಎಂದು ಪಣ ತೊಟ್ಟಿದೆ. ಇಂದು ಸಂಜೀವ ಮಠಂದೂರು ನಾಮಪತ್ರ ಸಲ್ಲಿಸಲಿದ್ದು ಮುಖ್ಯ ಭಾಷಣಕಾರರಾಗಿ ಯುವಮೋರ್ಛಾದ ಪ್ರಧಾನ ಕಾರ್ಯದರ್ಶಿ ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಇಂದು ಬೆಳಗ್ಗೆ 11:20 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ . ಇದರ ನಿಮಿತ್ತ...
ಸುದ್ದಿ

ಗುರುಕುಲ ಶಿಕ್ಷಣ ಪದ್ಧತಿ ಇಂದಿನ ಅಗತ್ಯ – ಜಿತಕಾಮಾನಂದ ಸ್ವಾಮೀಜಿ

ಪುತ್ತೂರು : ಗುರುಕುಲ ಪದ್ಧತಿಯ ಶಿಕ್ಷಣವನ್ನು ಮರೆತು ಬಿಟ್ಟಿರುವುದರಿಂದ ಅನೇಕ ರೀತಿಯ ಸಮಸ್ಯೆಗಳು ಮುಂದೆ ಬಂದಿವೆ. ಆದ್ದರಿಂದ ನಾವು ಮತ್ತೆ ಗುರುಕುಲ ಶಿಕ್ಷಣ ಪದ್ಧತಿಗೆ ಮರಳಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು. ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್‌, ಶ್ರೀ ರಾಮಕೃಷ್ಣ ಪ್ರೌಢಶಾಲೆ ವತಿಯಿಂದ ಬಂಟರ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಮ್ಮೇಳನದಲ್ಲಿ 'ದಿವ್ಯತೆಯ ಅರಿವೇ ಶಿಕ್ಷಣ' ಬಗ್ಗೆ ಉಪನ್ಯಾಸ...
ಸುದ್ದಿ

ಕೊನೆಗೂ ಪುತ್ತೂರಿಗೆ ಲಭಿಸಲಿಲ್ಲ ಇಂದಿರಾ ಕ್ಯಾಂಟಿನ್ ಭಾಗ್ಯ..! ನನಸಾಗದ ಶಕ್ಕು ಅಕ್ಕನ ಕನಸು – ಕಹಳೆ ನ್ಯೂಸ್

ನಗರ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ರಾಜ್ಯ ಸರಕಾರದ ಯೋಜನೆಯ ಭಾಗವಾಗಿ ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಗೊತ್ತುಪಡಿಸಿ, ನೆಲ ಸಮತಟ್ಟು ಮಾಡಲಾಗಿತ್ತು. ಮಂಗಳವಾರದಿಂದ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದ್ವಾರದ ಬಳಿಯಲ್ಲೇ ಇಂದಿರಾ ಕ್ಯಾಂಟೀನ್‌ ಗೆ ಜಾಗ ಗೊತ್ತುಪಡಿಸಲಾಗಿ, ಸಮತಟ್ಟು ಮಾಡುವ ಸಂದರ್ಭ, ಅತೀ ಶೀಘ್ರ ಇಂದಿರಾ ಕ್ಯಾಂಟೀನ್‌ ಕೆಲಸ ಆರಂಭಗೊಳ್ಳಲಿದೆ ಎಂದು ಶಾಸಕಿ ಭರವಸೆ...
1 2 3 4 5 6
Page 4 of 6