Friday, September 20, 2024

archiveRahul Gandhi

ಸುದ್ದಿ

ರಫೇಲ್ ಡೀಲ್ ಕುರಿತು ರಾಹುಲ್ ಗಾಂಧಿ ಸುಳ್ಳನ್ನು ಸೃಷ್ಟಿಸುತ್ತಿದ್ದಾರೆ: ಪ್ರಕಾಶ್ ಜಾವ್ಡೇಕರ್ – ಕಹಳೆ ನ್ಯೂಸ್

ದೆಹಲಿ: ರಾಹುಲ್ ಗಾಂಧಿ ಒಬ್ಬ ಸುಳ್ಳಿನ ಸೃಷ್ಟಿಕರ್ತ. ರಫೇಲ್ ಡೀಲ್ ಕುರಿತು ದಿನೇ ದಿನೇ ಅವರೇ ಸುಳ್ಳನ್ನು ಸೃಷ್ಟಿಸುತ್ತಿದ್ದಾರೆ" ಎಂದು ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದೆ. ಅದು ಸಿಬಿಐ ನಿರ್ದೇಶಕರ ವಿಷಯದಲ್ಲಿರಬಹುದು ಅಥವಾ ರಫೇಲ್ ಡೀಲ್ ವಿಷಯಕ್ಕೆ ಸಂಬಂಧಿಸಿದ್ದಿರಬಹುದು, ರಾಹುಲ್ ಗಾಂಧಿ ನೀಡುವ ಹೇಳಿಕೆಗಳು ಸುಳ್ಳಿನ ಕಂತೆಗಳಿಂದ ತುಂಬಿವೆ. ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಕಾಂಗ್ರೆಸ್ ತಾಳ್ಮೆಯನ್ನು ಕಳೆದುಕೊಂಡಿದೆ" ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್...
ರಾಜಕೀಯಸುದ್ದಿ

ರಫೇಲ್​ ಹಗರಣ: ಸಂವಾದ ನಡೆಸಲು ರಾಹುಲ್​ ಗಾಂಧಿ ಬೆಂಗಳೂರಿಗೆ – ಕಹಳೆ ನ್ಯೂಸ್

ಬೆಂಗಳೂರು:  ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನ ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್​ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್​ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಸಚಿವ ಡಿ.ಕೆ ಶಿವಕುಮಾರ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತಿತತರು ಹೂಗುಚ್ಛ ನೀಡಿ ಸ್ವಾಗತಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ...
ಸುದ್ದಿ

ರಾಹುಲ್​ ಕಣ್ಸನ್ನೆ ಕಂಡು ಪ್ರಿಯಾ ವಾರಿಯರ್​ ಏನಂದ್ರು ಗೊತ್ತಾ? – ಕಹಳೆ ನ್ಯೂಸ್

ನವದೆಹಲಿ: ಒಂದೇ ಒಂದು ಕಣ್ಸನ್ನೆಯಿಂದ ರಾತ್ರೋರಾತ್ರಿ ಖ್ಯಾತಿಗಳಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕಣ್ಸನ್ನೆಗೆ ಫಿದಾ ಆಗಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಭಾಷಣದ ಕೊನೆಯಲ್ಲಿ ಪ್ರಧಾನಿ ಬಳಿಗೆ ತೆರಳಿ ಅಪ್ಪಿಕೊಂಡರು. ನಂತರ ತಮ್ಮ ಸ್ಥಾನದಲ್ಲಿ ಕುಳಿತು ಕಣ್ಸನ್ನೆ ಮಾಡಿದ್ದರು....
ರಾಜಕೀಯ

ಏ.4: ರಾಹುಲ್‌ ಗಾಂಧಿ ಸಿದ್ಧಗಂಗಾ ಮಠಕ್ಕೆ ಭೇಟಿ

ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ (ಏ.4ರಂದು) ಮಧ್ಯಾಹ್ನ 2ಗಂಟೆಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಮಠಕ್ಕೆ ಭೇಟಿ ನೀಡಿದ ನಂತರ ಅವರು ನಗರದ ಪ್ರಮುಖ ಬೀದಿಗಳಲ್ಲಿ ರೋಡ್‌ ಷೋ ನಡೆಸಲಿದ್ದಾರೆ. ನಂತರ ಟೌನ್‌ಹಾಲ್‌ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು’ ಎಂದರು. ಗೂಳೂರು ಮಾರ್ಗವಾಗಿ ಜನಾಶೀರ್ವಾದ ಯಾತ್ರೆ ಕುಣಿಗಲ್‌ ಪಟ್ಟಣಕ್ಕೆ ತಲುಪಲಿದೆ. ಅಲ್ಲಿಯೂ ಚಿಕ್ಕದಾದ ಸಾರ್ವಜನಿಕ...
ರಾಜಕೀಯ

ಏ. 1 ರ0ದು ” ಪಪ್ಪು ಡೇ ” – ಬಿಜೆಪಿ ಟ್ವೀಟ್ ವಾರ್!

ಏ. 02: ಈ ಬಾರಿಯ ಮೂರ್ಖರ ದಿನ ರಾಜಕೀಯ ರಂಗು ಪಡೆದಿದ್ದು, ಎರಡು ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ಏಪ್ರಿಲ್ ಫೂಲ್ ದಿನವನ್ನು ಬಳಸಿಕೊಂಡಿತ್ತು. ಪ್ರಧಾನಿ ಮೋದಿ ಅವರು ಈಡೇರಿಸದ ಆಶ್ವಾಸನೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಏಪ್ರಿಲ್ ಫೂಲ್ ದಿನವನು ’ಜುಮ್ಲಾ ದಿನ’ ಎಂದು ಕರೆದರೆ, ಬಿಜೆಪಿಯು ರಾಹುಲ್ ಗಾಂಧಿ ಅವರು ಮಾಡಿರುವ ಎಡವಟ್ಟುಗಳ ವಿಡಿಯೋ ಅಪ್ ಲೋಡ್ ಮಾಡಿ , ಮೂರ್ಖರ ದಿನವನ್ನು ’ಪಪ್ಪು ಡೇ’ ಎಂದು ಕರೆದಿದೆ. ಜತೆಗೆ...
ಸುದ್ದಿ

ಮಂಗಳೂರಿನಲ್ಲಿ ಹದ್ದುಮೀರಿ ವರ್ತಿಸಿದ ಕಾಂಗ್ರೇಸ್ ಕಾರ್ಯಕರ್ತರು ; ಪೊಲೀಸ್ ಜೀಪ್ ಹತ್ತಿ ಕೈ ಕಾರ್ಯಕರ್ತರ ದರ್ಬಾರ್ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆಯಲ್ಲಿ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಮಂಗಳವಾರ ಮಂಗಳೂರಿನ ಜ್ಯೋತಿ ವೃತ್ತದಿಂದ ಯಾತ್ರೆ ತೆರಳುತ್ತಿದ್ದಾಗ ರಾಹುಲ್ ಬೆಂಗಾವಲಿಗಿದ್ದ ಪೊಲೀಸ್ ಜೀಪ್ ಮೇಲೇರಿ ಯಾತ್ರೆ ನಡೆಸಿದ್ದಾರೆ. ಪೊಲೀಸರು ಜೀಪಿನಿಂದ ಇಳಿಯಲು ಸೂಚಿಸಿದರೂ, ಕಾರ್ಯಕರ್ತರು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ತಮ್ಮದೇ ಆಡಳಿತ, ತಮ್ಮದೇ ದಾರಿ ಎನ್ನುವಂತೆ ಪೊಲೀಸ್ ಜೀಪು ಎಂಬ ಭಾವನೆ ಬಿಟ್ಟು ಯಾರದೋ ವಾಹನ ಎಂಬಂತೆ ವರ್ತಿಸಿದ್ದಾರೆ. https://youtu.be/vGuQe-BYSxg ಮಂಗಳೂರಿನ ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ವರೆಗೂ...
ಸುದ್ದಿ

ಸುರತ್ಕಲ್ ನಲ್ಲಿ ರಸ್ತೆ ಮಧ್ಯದಲ್ಲೇ ಕಾಂಗ್ರೇಸ್ ವೇದಿಕೆ ಪರದಾಡಿದ ಸಾರ್ವಜನಿಕರು ; ಕಾರ್ಯಕರ್ತರನ್ನುದ್ದೇಶಿಸಿ ಪಪ್ಪು ಭಾಷಣ – ಕಹಳೆ ನ್ಯೂಸ್

ಮಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳ ಜನಾಶೀರ್ವಾದ ಯಾತ್ರೆಯ ರೋಡ್ ಶೋ ನಲ್ಲಿ ಭಾಗವಹಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಮುಲ್ಕಿ ಹಾಗೂ ಸುರತ್ಕಲ್ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ ದೃಷ್ಠಿಯಿಂದ ರಸ್ತೆಯ ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು....
ಸುದ್ದಿ

ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ಮೊತ್ತದ ರೈತರ ಸಾಲ ಮನ್ನಾ ಮಾಡಿದೆ: ರಾಹುಲ್ ಗಾಂಧಿ

ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ರಾಜ್ಯದ ರೈತರ ಸಾಲ ಮನ್ನಾ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮೂರನೇ ಹಂತದ ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಗಳೂರಿನ ಕಾಪುವಿನಲ್ಲಿಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ವರ್ಷಗಳಿಂದ ಬಿಜೆಪಿ ಸರ್ಕಾರ 15 ಶ್ರೀಮಂತರ 2.5 ಲಕ್ಷ ಕೋಟಿ ರೂ. ಮನ್ನಾ ಮಾಡಿದೆ ಎಂದು ಆರೋಪಿಸಿದರು.ರೈತರ ಸಾಲ ಮನ್ನಾ ಮಾಡಿ ಎಂದು...
1 2
Page 1 of 2