ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸರ ದಾಳಿ: 6 ಪಿಕಪ್ ಸಹಿತ ಮರಳು ವಶ – ಕಹಳೆ ನ್ಯೂಸ್
ಉಪ್ಪಿನಂಗಡಿ: ಉದನೆಯಿಂದ ಗುಂಡ್ಯದವರೆಗೆ ಹರಿಯುತ್ತಿರುವ ಕೆಂಪುಹೊಳೆ ನದಿಕಿನಾರೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಗಣಿ ಇಲಾಖೆ ಹಾಗೂ ಪೊಲೀಸ್ ಉನ್ನತಾಧಿಕಾರಿಗಳಿಗೆ ಸ್ಥಳೀಯರಿಂದ ದೂರು ನೀಡಿದ್ದರು. ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸರು ದಾಳಿ ನಡೆಸಿದ್ದು, 6 ಪಿಕಪ್ ಸಹಿತ ಮರಳವನ್ನು ವಶಪಡಿಸಿಕೊಂಡಿದ್ದಾರೆ. ಒಂದೆರಡು ವಾರಗಳ ಹಿಂದೆ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ದಾಳಿಯನ್ನು ನಡೆಸಿದ್ದರಾದರೂ ಮರಳು ಸಾಗಾಟಗಾರರು ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಸ್ಕ್ವಾಡ್, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು, ಉಪ್ಪಿನಂಗಡಿ ಉಪ ನಿರೀಕ್ಷಕರು ಮತ್ತು ನೆಲ್ಯಾಡಿ...