Recent Posts

Sunday, January 19, 2025

archiveshiradi ghat

ಸುದ್ದಿ

ಶಿರಾಡಿ ಘಾಟಿ ರಸ್ತೆಯಲ್ಲಿ ಇಂದಿನಿಂದ ಎಲ್ಲ ವಾಹನಗಳಿಗೆ ಮುಕ್ತ ಸಂಚಾರ: ಶಶಿಕಾಂತ ಸೆಂಥಿಲ್‌ – ಕಹಳೆ ನ್ಯೂಸ್

ಮಂಗಳೂರು: ಅಧಿಕ ಮಳೆ, ಭೂ ಕುಸಿತ ಉಂಟಾದ ಕಾರಣದಿಂದಾಗಿ ಶಿರಾಡಿ ಘಾಟಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಗುರುವಾರ ಬೆಳಗ್ಗಿನಿಂದ ಘನ ವಾಹನ ಸಹಿತ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ. ಈಗ ಸುರಕ್ಷತಾ ಕ್ರಮಗಳಾದ ಬ್ಯಾರಿಯರ್‌ ಗೋಡೆ ನಿರ್ಮಾಣ, ಟ್ರಾಫಿಕ್‌ ಸೇಫ್ಟಿ ಟೇಪ್‌ ಅಳ ವಡಿಕೆ, ಸೂಚನಾ ಫಲಕ, ಕ್ಯಾಟ್‌ ಐ ಅಳ ವಡಿಸುವಿಕೆ, ಅಗತ್ಯವಿರುವ...
ಸುದ್ದಿ

ಶಿರಾಡಿಘಾಟಲ್ಲಿ ಬಸ್ ಸಂಚಾರ: ವಾರದ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ – ಕಹಳೆ ನ್ಯೂಸ್

ಭಾರೀ ಮಳೆ, ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದ ಶಿರಾಡಿ ರಸ್ತೆಯಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದಿನಿಂದ ಬಸ್ ಸಂಚಾರ ಶುರುವಾಗಲಿದ್ದು, ಬಸ್ಸುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶಗಳನ್ನು ನೀಡಲಾಗಿದೆ. ಶಿರಾಡಿ ಘಾಟ್ ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೂ ಲಾರಿ, ಗೂಡ್ಸ್ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಒಂದು ವಾರದ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ....
ಸುದ್ದಿ

ನಾಳೆಯಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ: ಶಶಿಕಾಂತ್ ಸೆಂಥಿಲ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಅ. 3ರ ಬೆಳಗ್ಗಿನಿಂದ ಎಲ್ಲ ಪ್ರಯಾಣಿಕ ವಾಹನಗಳೂ ಸಂಚರಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದೇನೆ. ಅಲ್ಲದೆ ನಮ್ಮ ಪೊಲೀಸ್ ತಂಡ ಶಿರಾಡಿಯಲ್ಲಿ ಪರಿಶೀಲನೆ ನಡೆಸಿದೆ. ಅದರಂತೆ ವೋಲ್ವೊ, ರಾಜಹಂಸ ಸಹಿತ ಎಲ್ಲ ಬಸ್‌ಗಳೂ ಶಿರಾಡಿ ಘಾಟಿಯಲ್ಲಿ ಸಂಚರಿಸಬಹುದು. ಮುನ್ನೆಚ್ಚರಿಕೆ ಕ್ರಮವಾಗಿ...
ಸುದ್ದಿ

ಚಾರ್ಮಾಡಿ ಘಾಟ್‌ನ ತಿರುವಿನಲ್ಲಿ ಲಾರಿ ಪಲ್ಟಿ: ಪ್ರಯಾಣಿಕರ ಪರದಾಟ – ಕಹಳೆ ನ್ಯೂಸ್

ಚಾರ್ಮಾಡಿ ಘಾಟ್‌ನ 6ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ನಡೆದಿದೆ. ಈ ವೇಳೆ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎದುರಾಯಿತು. ಶಿರಾಡಿ ಘಾಟ್‌ನ ಬಂದ್ ಹಿನ್ನೆಲೆ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಚಾರ್ಮಾಡಿ ಘಾಟ್ ಆಗಿದ್ದು, ಲಾರಿಯನ್ನು ತೆರವುಗೊಳಿಸಲು ಪೊಲೀಸರು ಹಾಗೂ ಸ್ಥಳೀಯರು ಪರದಾಡುವಂತಹ...
ಸುದ್ದಿ

Breaking News : ಮಂಗಳೂರು ಬೆಂಗಳೂರು ಪ್ರಯಾಣಿಕರಿಗೊಂದು ಶಾಕ್ ; ಮತ್ತೆ ಐದು ತಿಂಗಳು ಶಿರಾಡಿ ಘಾಟ್ ಬಂದ್ – ಕಹಳೆ ನ್ಯೂಸ್

ಹಾಸನ,19 : ಇನ್ನು ಐದು ತಿಂಗಳು ಶಿರಾಡಿ ಘಾಟ್‌ ಬಂದ್‌ ಆಗಿರಲಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ಹೇಳಿದ್ದಾರೆ.   ಈ ಬಗ್ಗೆ ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಚಿವರು, ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಕಾಮಗಾರಿಯೇ ಕೊಚ್ಚಿ ಹೋಗುವ ಭೀತಿ ನಿರ್ಮಾಣವಾಗಿದೆ. ಅಲ್ಲದೆ ರಸ್ತೆಯ ಎರಡು ಕಡೆ ಕೆಲಸಗಳೂ ಕೂಡ ಪೂರ್ಣಗೊಂಡಿಲ್ಲ. ಈಗಾಗಲೇ...
ಸುದ್ದಿ

ಶಿರಾಡಿ ಹೆದ್ದಾರಿ ಬಳಕೆಗೆ ಸಿದ್ಧ ; ಕೇಂದ್ರ ಸಚಿವ ಗಡ್ಕರಿ ಡೈನಾಮಿಕ್ ಮಿನಿಸ್ಟರ್ ಎಂದ ರೇವಣ್ಣ – ಕಹಳೆ ನ್ಯೂಸ್

ಬೆಂಗಳೂರು-ಮಂಗಳೂರು ಸಂಪರ್ಕ ಪ್ರಮುಖ ಕೊಂಡಿಯಾಗಿದ್ದ ಶಿರಾಡಿಯಲ್ಲಿ ಕಾಂಕ್ರೀಟ್ ಪೂಣರ್ಗೊಂಡ 13 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75 ಭಾನುವಾರ ಸಾರ್ವಜನಿಕರ ಬಳಕೆಗೆ ಸಿದ್ಧಗೊಂಡಿದೆ. ಗುಂಡ್ಯ ಕೆಂಪುಹೊಳೆ ಸೇತುವೆ ಸಮೀಪ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜತೆಯಾಗಿ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಉದ್ಘಾಟನೆ ನೆರವೇರಿಸಿದರು. ಹೆದ್ದಾರಿ ಇಕ್ಕೆಲಗಳ ರಕ್ಷಣಾ ತಡೆಗೋಡೆ, ಇಕ್ಕೆಲಗಳನ್ನು ಸಮತಟ್ಟು ಪಡಿಸುವ ಕಾಮಗಾರಿ ಮತ್ತಿತರ ಸುರಕ್ಷಣಾ ದೃಷ್ಟಿಯ...
ಸುದ್ದಿ

Exclusive : ಇಂದು ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ; ಘಾಟ್ ಮೂಲಕ ಪ್ರಯಾಣಿಸುವರ ಪ್ರಾಣಗಳಿಗೆ ಪ್ರಯಾಣಿಕರೇ ಹೊಣೆ. ಯಾಕೆ ಅಂತ್ತೀರಾ ? ಈ ವರದಿ ಒಮ್ಮೆ ನೋಡಿ – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯನ್ನು ಕಳೆದ 6 ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶದಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಇಂದು ಮತ್ತೆ ವಾಹನ ಸಂಚಾರ ಆರಂಭವಾಗಲಿದೆ. 7 ತಿಂಗಳ ಈ ಸಂಚಾರ ವ್ಯತ್ಯಯಕ್ಕೆ ಇಂದು ಕೊನೆಯಾಗಲಿದೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಡಳಿವು ಮಾಹಿತಿಯನ್ನು ನೀಡಿದೆ. ಸುಮಾರು ಏಳು ತಿಂಗಳ ಬಳಿಕ ಪುನಾರಂಭಗೊಳ್ಳುತ್ತಿರುವ ಈ ರಸ್ತೆ ನಿರ್ಮಾಣ ಕಾರ್ಯ  ಹಲವಾರು ಲೋಪದೋಷಗಳನ್ನು ಹೊಂದಿದೆ. ಹಲವು...