Saturday, November 23, 2024

archiveSri Sri Raghaveshwara Swamiji

ಸುದ್ದಿ

ಹುಟ್ಟುವುದಕ್ಕೂ – ಅವತರಿಸುವುದಕ್ಕೂ ವ್ಯತ್ಯಾಸವಿದೆ ; ಕೃಷ್ಣಕಥಾದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

ಭೂಮಿಯಲ್ಲಿ ಹುಟ್ಟುವುದಕ್ಕೂ , ಅವತರಿಸುವುದಕ್ಕೂ ವ್ಯತ್ಯಾಸವಿದೆ. ಭಗವಂತ  ಉದ್ದೇಶವನ್ನಿಟ್ಟುಕೊಂಡು ಭೂಮಿಗೆ ಮನುಷ್ಯರೂಪದಲ್ಲಿ ಇಳಿದು ಬರುವುದು ಅವತಾರವಾಗಿದೆ. ಕೃಷ್ಣಪರಮಾತ್ಮ ಧರ್ಮಗ್ಲಾನಿಯನ್ನು ತಡೆಗಟ್ಟಲು ಅವತರಿಸಿದ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ 'ಕೃಷ್ಣಾಕಥಾ' ವಿಶಿಷ್ಟ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಕೃಷ್ಣನ ಜನನ ಸಂಧರ್ಭದ ಕಥಾಪ್ರವಚನವನ್ನು ಮಾಡಿದ ಶ್ರೀಗಳು, ತ್ರೇತಾಯುಗದಲ್ಲಿ ಶ್ರೀರಾಮ 12 ನೇ ತಿಂಗಳಲ್ಲಿ  ಕೌಸಲ್ಯೆಯ ಉದರದಿಂದ ಜನಿಸಿದರೆ, ದ್ವಾಪರದಲ್ಲಿ ಶ್ರೀಕೃಷ್ಣ 8 ನೇ ತಿಂಗಳಲ್ಲಿ ಧರೆಗವತರಿಸಿದ....
ಸುದ್ದಿ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಗೋಸ್ವರ್ಗ ಚಾತುರ್ಮಾಸ್ಯ ; ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ – ಕಹಳೆ ನ್ಯೂಸ್

ರಾಮಪಟ್ಟಾಭಿಷೇಕದ ಮೂಲಕ ತ್ರೇತಾಯುಗವನ್ನು ಮರಳಿ ನೆನಪಿಸುವ ಕಾರ್ಯ ಮಾಡಲಾಗುತ್ತದೆ. ಶ್ರೀರಾಮಪಟ್ಟಾಭಿಷೇಕದ ನೈಜ ಸ್ವಾಧ, ಆನಂದ ಸಿಗಬೇಕಾದರೆ ಹಿಂದಿನ ರಾಮಾಯಣದ ಅಧ್ಯಯನ ಮಾಡಬೇಕು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಮನ ರಾಜತ್ವವನ್ನು ಪ್ರತಿಯೊಬ್ಬರೂ ಅಂಗೀಕರಿಸಿದ್ದೀರಿ ಎಂದು ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಅವರು ಬುಧವಾರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಶುಭಸಂದರ್ಭದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಸೇವೆಯ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ...
ಸುದ್ದಿ

ಸಂಸ್ಕೃತ ಮರಣವಿಲ್ಲದ ಭಾಷೆ ಸಂಸ್ಕೃತೋತ್ಸವದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

* ಸಂಸ್ಕೃತದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು * ಸಂಸ್ಕೃತ ಭವನ" ನಿರ್ಮಾಣಕ್ಕೆ ಶ್ರೀಮಠದಿಂದ ಆಶೀರ್ವಾದ ಪೂರ್ವಕ ಮೂಲಧನ. * ಶಾಸಕ ರವಿ ಸುಬ್ರಹ್ಮಣ್ಯ ಅವರಿಂದ ಕಾರ್ಯಕ್ರಮವನ್ನು ಉದ್ಘಾಟನೆ. ಸಂಸ್ಕೃತ ಭಾಷೆ ಅಮರ ಭಾಷೆಯಾಗಿದ್ದು, ಅಮರವಾದ ಈ ಭಾಷೆಗೆ ಮರಣವಿರಲು ಸಾಧ್ಯವೇ ಇಲ್ಲ. ಸಂಸ್ಕೃತದ ಅಭಿವೃದ್ಧಿಗೆ ತೊಡಗಿಸಿಕೊಂಡಿರುವ ಈ ಸಂಘಟನೆಯನ್ನು ನೋಡಿದಾಗ ಅದು ಮತ್ತಷ್ಟು ದೃಢವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.   ಬೆಂಗಳೂರಿನ ಎನ್...
ಸುದ್ದಿ

Breaking News : ರಾಘವೇಶ್ವರ ಭಾರತೀ ಶ್ರೀಗಳ ಆರೋಗ್ಯದಲ್ಲಿ ವೈಪರೀತ್ಯ ; ” ಗೋಸ್ವರ್ಗ ” ಚಾತುರ್ಮಾಸ್ಯ ಬೆಂಗಳೂರಿಗೆ ಶಿಫ್ಟ್ – ಕಹಳೆ ನ್ಯೂಸ್

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಬೇಕೆಂದು, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಯೋಚಿಸಿದ್ದರು. ಆದರೆ, ಶ್ರೀಗಳು ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯು ಉದ್ದೇಶದಿಂದ ನಿರ್ಧರಿಸಲಾಗಿದೆ ಎಂದು ಮಠ ಪತ್ರಿಕಾ...
ಸುದ್ದಿ

ಶ್ರೀರಾಮಚಂದ್ರಾಪುರ ಮಠದ ಗೋ ಸೇವಾ ಕಾರ್ಯಕ್ಕೆ 40 ಎಕರೆ ಜಾಗ ನೀಡಿದ ದಕ್ಷಿಣ ಕನ್ನಡದ ನೂಜಿಬೈಲು ವೆಂಕಟರಾಮಯ್ಯ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು ಸಾದಾ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಸಧ್ಯ ಗೋ ಸರ್ಗ ಎಂಬ ಅಪೂರ್ವ ಕಲ್ಪನೆ ಗೋಶಾಲೆಯನ್ನು ನಿರ್ಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಬೆಂಬಲವಾಗಿ ನೂಜಿಬೈಲು ವೆಂಕಟರಾಮಯ್ಯನವರು ದ.ಕ ಮತ್ತು ಕೊಡಗಿನ ಗಡಿಯಲ್ಲಿರುವ, 40 ಎಕರೆ ವಿಸ್ತೀರ್ಣದ, ತನ್ನ ಸ್ವರ್ಗಸದೃಶವಾದ ಭೂಮಿಯೆಲ್ಲವನ್ನೂ ಗೋಸೇವೆಗಾಗಿ ಶ್ರೀಮಠಕ್ಕೆ ಸಮರ್ಪಿಸಿದ್ದಾರೆ....
ಸುದ್ದಿ

‘ ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗ ‘ ; ಮಂಗಳೂರಿನ ಪುರಭವದಲ್ಲಿ ನಡೆದ ‘ ಸ್ವರ್ಗ ಸಂವಾದ ‘ ದಲ್ಲಿ ರಾಘವೇಶ್ವರಭಾರತೀ ಶ್ರೀ – ಕಹಳೆ ನ್ಯೂಸ್

ಮಂಗಳೂರು: ಗೋ ಸಂರಕ್ಷಣೆಯ ಸಂಕಲ್ಪ ನಮ್ಮಲ್ಲಿ ಜಾಗೃತವಾಗಿರಬೇಕು. ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗವಾಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿಸಿದರು. ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್‌ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಬುಧವಾರ ಆಯೋಜಿಸಲಾದ "ಸ್ವರ್ಗ ಸಂವಾದ-ಗೋಸಂಪದ ಸಮರ್ಪಣೆ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶ್ರೀರಾಮ ದೇವ ಭಾನುRಳಿ ಮಠದ ಪರಿಸರದಲ್ಲಿ ಗೋವುಗಳ ಬೃಹತ್‌ ಆಲಯ ನಿರ್ಮಿಸಲಾಗಿದೆ....
ಸುದ್ದಿ

ರಾಘವೇಶ್ವರಭಾರತೀ ಶ್ರೀಗಳನ್ನು ಭೇಟಿ ಮಾಡಿ ಗೋ ಸಂರಕ್ಷಣೆಯ ಕುರಿತು ಮಹತ್ವದ ಚರ್ಚೆ ನಡೆಸಿದ ಹಿಂದೂ ಫಯರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಬಾನ್ಕುಳಿ : ರಾಮದೇವ ಬಾನ್ಕುಳಿ ಮಠಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ತಮ್ಮ ಕುಲಗುರುಗಳಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ ಮಾಡಿ ಮಾತುಕತೆ ನಡೆಸಿದರು. ಗೋ ಹತ್ಯೆ ನಿಷೇಧ ವಿಚಾರದಲ್ಲಿ ಮಹತ್ವದ ಮಾತುಕತೆ : ರಾಘವೇಶ್ವರ ಭಾರತೀ ಶ್ರೀಗಳು ಮೊದಲಿನಿಂದಲೂ ಗೋ ಸಂರಕ್ಷಣೆಗಾಗಿಯೇ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟವರು ಇನ್ನು ಅವರ ಶಿಷ್ಯ ಅನಂತ ಕುಮಾರ ಹೆಗಡೆ ಹಿಂದುತ್ವದ ಫಯರ್ ಬ್ರಾಂಡ್ ರಾಜಕಾರಣಿ...
ಸುದ್ದಿ

Breaking News : ಗೋಕರ್ಣ 33 ಉಪಾದಿವಂತ ಕುಟುಂಬದವರಿಂದ ಪುಂಡಾಟಿಕೆ ; ಗೋಕರ್ಣ ಕ್ಷೇತ್ರದ ನಿಯಮ ಉಲ್ಲಂಘಿಸಿ, ಶಾಂತಿ ಬಂಗಕ್ಕೆ ಯತ್ನ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ಇದೀಗ ದೇವಸ್ಥಾನದ ಪೂಜಾ ಕಾರ್ಯಕ್ಕೆ ವಿವಾದ ಸೃಷ್ಟಿಯಾಗಿದೆ. ದೇವಸ್ಥಾನದಲ್ಲಿ ಅನುವಂಶೀಯವಾಗಿ ಪೂಜಾ ಕಾರ್ಯ ಮಾಡಿಕೊಂಡು ಬಂದಿರುವ 33 ಅರ್ಚಕರಿಗೆ ಪೂಜೆಗೆ ಅವಕಾಶ ಕೊಡಬೇಕೆಂದು ನ್ಯಾಯಾಲಯ ಆದೇಶವನ್ನ ನೀಡಿತ್ತು. ಆದರೆ, ದೇವಾಲಯದ ನಿಯಮಾವಳಿಗಳ ಅನುಸಾರ ಯಾವ ಅರ್ಚಕರು ದೇವಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸುತ್ತಾರೋ ಅವರಿಗೆ ಮಾತ್ರ ಹೊಗಿನಿಂದ ಭಕ್ತರನ್ನು ಕರೆತಂದು ಪೂಜೆ ನಡೆಸಬಹುದು ಎಂದು ಕೋರ್ಟ್ ಹೇಳಿತ್ತು. ಆದರೇ, ಈ ನಿಯಮವನ್ನು ಗಾಳಿಗೆ ತೂರಿ...
1 2 3
Page 1 of 3