ಪುತ್ರನ ಸಾವಿನಿಂದ ಮಹಿಳೆ ಆತ್ಮಹತ್ಯೆ – ಕಹಳೆ ನ್ಯೂಸ್
ಮಂಗಳೂರು: ಪುತ್ರನ ಸಾವಿನಿಂದ ತೀವ್ರವಾಗಿ ನೊಂದಿದ್ದ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮೇಶ್ವರ ಕೊಲ್ಯ ನಿವಾಸಿ ನರಸಿಂಹ ಆಳ್ವ ಎಂಬವರ ಪತ್ನಿ ನೀತಾ ಆಳ್ವ ಆತ್ಮಹತ್ಯೆ ಮಾಡಿಕೊಂಡವರು. ಇವರ ಪುತ್ರ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ನಮನ್ ಆಳ್ವ ಐದು ತಿಂಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದ. ಏಕೈಕ ಪುತ್ರನನ್ನು ಕಳೆದುಕೊಂಡು ಖಿನ್ನತೆ ಅನುಭವಿಸುತ್ತಿದ್ದ ನೀತಾ ಅವರು ಸೋಮವಾರ ಪತಿ ಮನೆಯಿಂದ ಹೊರ ಹೋಗಿದ್ದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳ್ಳಾಲ ಠಾಣೆಯಲ್ಲಿ...