ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಅ.22ರಿಂದ ಅನಿರ್ದಿಷ್ಟ ಧರಣಿ – ಕಹಳೆ ನ್ಯೂಸ್
ಆಗಸ್ಟ್ ಮೂವತ್ತರ ನಂತರ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹಿಸಬಾರದು, ಕೂಳೂರು ಸೇತುವೆಯನ್ನು ತಕ್ಷಣ ದುರಸ್ತಿಗೊಳಿಸಿ ಹೊಸ ಸೇತುವೆ ನಿರ್ಮಾಣಗೊಳ್ಳುವವರೆಗೆ ಸಂಚಾರಕ್ಕೆ ಯೋಗ ಗೊಳಿಸಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 22ರಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಮುನೀರ್ ಕಾಟಿಪಳ್ಳ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಮುನೀರ್ ಸಂಸದರ ಜನ ವಿರೋಧಿ ನಡೆ ಹೆದ್ದಾರಿ ಗುತ್ತಿಗೆದಾರರ ಪರವಾದ ನಿಲುವನ್ನು ಹೋರಾಟ...