ಶಿಕ್ಷಕರ ವಾರ್ಷಿಕ ವೇತನ ಬಡ್ತಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು: ಶಿಕ್ಷಕರ ಸಂಘಟನೆಗಳಿಂದ ಒತ್ತಾಯ – ಕಹಳೆ ನ್ಯೂಸ್
ಬೆಂಗಳೂರು: ಪ್ರೌಢಶಾಲೆಯ ಸುಮಾರು 10 ಸಾವಿರ ಹಾಗೂ ಪಿಯು ಕಾಲೇಜಿನ ಅಂದಾಜು 2 ಸಾವಿರ ಉಪನ್ಯಾಸಕರು ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆ ಸರಿದೂಗಿಸುವಂತೆ ಶಿಕ್ಷಕ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ನೀಡಿದ ನಂತರ ಈ ಖಾತೆ ಮುಖ್ಯಮಂತ್ರಿ ಬಳಿಯೇ ಇದ್ದು ಸಮಸ್ಯೆ ಸರಿಪಡಿಸಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಅನ್ಯಾಯಕ್ಕೆ ಒಳಗಾದ ಶಿಕ್ಷಕರಿಗೆ ಒಂದು...