ಆಟಿ ಅಮಾವಾಸ್ಯೆಗೆ ಪಾಲೆ ಮರದ ಕಷಾಯ ಕುಡಿದ್ರಾ? – ಕಹಳೆ ನ್ಯೂಸ್
ಆಷಾಢ ಮಾಸ ಕಳೆದಿದೆ, ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸಿದ್ದಾರೆ. ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಮಂಗಳೂರಿನಲ್ಲಿ ಎರಡು ಕಡೆ ಉಚಿತವಾಗಿ ಜನರಿಗೆ ಕಷಾಯವನ್ನು ವಿತರಣೆ ಮಾಡಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವೆಯನ್ನು ಮಾಡಲಾಗುತ್ತಿದೆ. ಆಷಾಢ ಅಮಾವಾಸ್ಯೆಯ ದಿನವನ್ನು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯೇ ಘಟ್ಟದ ಮೇಲಿನ ಪ್ರದೇಶದಲ್ಲಿ...