ಅಯೋ ಕೃಷ್ಣ ಕಷ್ಣ !!! ಇದು ಉಡುಪಿ ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣವೋ ? ಕುಡುಕ ಕಾಮುಕರ ತಾಣವೋ ? – ಕಹಳೆ ನ್ಯೂಸ್
ಉಡುಪಿ: ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ KSRTC ಬಸ್ ನಿಲುಗಡೆ ತಾಣ ಇಲ್ಲಿನದು. ದಿನಕ್ಕೆ 250ಕ್ಕೂ ಅಧಿಕ ಬಸ್ ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ನಗರದ ಕೇಂದ್ರ ಭಾಗದಲ್ಲೇ ಈ ಬಸ್ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಸ್ವಚ್ಛತೆಯೂ ಇಲ್ಲದೆ ಸ್ಥಳ ಸೊರಗಿದೆ. ಬಸ್ ಗಳಿಗೂ, ಪ್ರಯಾಣಿಕರಿಗೂ ಕಷ್ಟ ಈ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೂ ನಿಲ್ಲುವುದಕ್ಕೆ ಸೂಕ್ತ ಸ್ಥಳವಿಲ್ಲ. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ, ಕೊನೆಪಕ್ಷ...