ವೈಯಕ್ತಿಕ ದ್ವೇಷವಿಲ್ಲ, ಸಂಧಾನಕ್ಕೆ ಒಪ್ಪುವುದಿಲ್ಲ: ಪಾನಿಪುರಿ ಕಿಟ್ಟಿ – ಕಹಳೆ ನ್ಯೂಸ್
ಬೆಂಗಳೂರು: ವೈಯಕ್ತಿಕವಾಗಿ ನನಗೂ, ವಿಜಯ್ಗೂ ದ್ವೇಷವಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡ ಮೇಲೆ ಹಲ್ಲೆ ನಡೆದಿದ್ದು, ಇಂತಹ ಘಟನೆಯಿಂದ ಎಂಥವರಿಗೂ ಸಿಟ್ಟು ಬರುತ್ತದೆ. ಪ್ರಕರಣದಲ್ಲಿ ನಾನು ಕಾನೂನು ಮೊರೆ ಹೋಗಿದ್ದೇನೆ. ಅಲ್ಲದೆ, ಫಿಲಂ ಛೇಂಬರ್ಗೂ ದೂರು ನೀಡಿದ್ದು, ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಪಾನಿಪುರಿ ಕಿಟ್ಟಿ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ನಟನಾಗಲಿ ಇನ್ನೊಬ್ಬರಿಗೆ ಮಾದರಿ ಆಗಬೇಕು. ಹಾಗಂತ ವಿಜಿ ವಿರುದ್ಧ ರೌಡಿ ಶೀಟರ್ ತೆರೆಯಲಿ ಎಂದು ನಾನು...