Friday, September 20, 2024

archiveVivekananda college puttur

ಸುದ್ದಿ

ಪುತ್ತೂರು ವಿವೇಕಾನಂದ ಸಂಸ್ಥೆಯಿಂದ ಸಂತ್ರಸ್ತರಿಗೆ ಉಚಿತ ಶಿಕ್ಷಣ ; ಡಾ ಕಲ್ಲಡ್ಕ ಪ್ರಭಾಕರ್ ಭಟ್ ರಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್

ಪುತ್ತೂರು : ಕೊಡಗು ಸಂತ್ರಸ್ತ ಮಕ್ಕಳ ನೆರವಿಗೆ ಧಾವಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಮಾದರಿ ಕೆಲಸವೊಂದಕ್ಕೆ ಮುಂದಾಗಿದೆ.  ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನ ಮಾಡಿದೆ. . ಕೊಡಗು ಸಂತ್ರಸ್ತರಿಗೆ ಆರ್ಥಿಕ ಸಹಾಯ, ದೈನಂದಿನ ಆಹಾರ ಪೂರೈಕೆ ಮಾಡಲು ಸಂಸ್ಥೆ ಹೆಜ್ಜೆ ಇಟ್ಟಿದೆ.  ಸಂಸ್ಥೆ ಪ್ರಾಥಮಿಕ ಶಾಲೆಗಳಿಂದ ತೊಡಗಿ ಪಿಯುಸಿ, ಪದವಿ, ಇಂಜಿನಿಯರಿಂಗ್, ಕಾನೂನು, ಬಿ.ಎಡ್, ಎಂಬಿಎ, ಪಾಲಿಟಿಕ್ನಿಕ್  ಸೇರಿದಂತೆ ಎಲ್ಲ ರೀತಿಯ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಪ್ರವಾಹ...
ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಅದ್ದೂರಿ ಸ್ವಾತಂತ್ರ್ಯೋತ್ಸವ ; ಸ್ವಾತಂತ್ರ್ಯ ದಿನ ರಜಾದಿನವಲ್ಲ, ಅದು ಪ್ರಜಾದಿನ ಎಂದ ಡಾ.ಕೆ.ಎಂ.ಕೃಷ್ಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಸ್ವಾತಂತ್ರಯೋತ್ಸವ ಎಂದರೆ ರಜಾದಿನವಲ್ಲ. ಅದು ನಿಜಾರ್ಥದಲ್ಲಿ ಪ್ರಜಾದಿನ. ಈ ವಿಚಾರವನ್ನು ಅರಿಯದೆ ಸ್ವಾತಂತ್ರ್ಯ ದಿನದಂದು ವಿಹಾರ ಹೋಗುವುದಕ್ಕಾಗಿ ಮೀಸಲಿರಿಸುವವರಿದ್ದಾರೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆಯಲ್ಲ. ಅದು ಅನೇಕ ವಿಚಾರಗಳನ್ನು ಮನನ ಮಾಡಲಿರುವ, ನೆನಪಿಸಿಕೊಳ್ಳಲು ನಿಗದಿಪಡಿಸಲಾಗಿರುವ ದಿನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆಹರುನಗರದ ವಿವೇಕ ಕ್ರೀಡಾಂಗಣದಲ್ಲಿ 72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದ್ವಜಾರೋಹಣಗೈದು ಬುಧವಾರ ಮಾತನಾಡಿದರು....
ಸುದ್ದಿ

ವಿವೇಕಾನಂದದಲ್ಲಿ 39ನೇ ಮಾನ್ಸೂನ್ ಚೆಸ್ ಪಂದ್ಯಾಟಕ್ಕೆ ಚಾಲನೆ ಮೆದುಳಿನ ಶಕ್ತಿ ಹೆಚ್ಚಿಸಲು ಚೆಸ್ ಸಹಕಾರಿ : ಪ್ರೊ.ಜೀವನ್ ದಾಸ್

ಪುತ್ತೂರು: ಚೆಸ್ ಆಡುವುದರಿಂದ ಮನಸ್ಸಿಗೆ ಸಂತೋಷ, ಬುದ್ಧಿಗೆ ಆಹಾರ ಎರಡೂ ದೊರೆಯುತ್ತದೆ. ಇದೊಂದು ಸವಾಲಿನ ಆಟ. ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಭಾರತ ದೇಶದಲ್ಲಿ ಇದರ ಉಗಮವಾಯಿತು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಜೀವನ್ ದಾಸ್ ಹೇಳಿದರು. ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ 39ನೇ ವರ್ಷದ ಮಾನ್ಸೂನ್ ಚೆಸ್ ಪದ್ಯಾಂಟವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಜೀವನದಲ್ಲಿ...
ಸುದ್ದಿ

ಜುಲೈ 19 ರಂದು ಗ್ರಾಮೀಣ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ “ವಿವೇಕ ಉದ್ಯೋಗ ಮೇಳ” – ಕಹಳೆ ನ್ಯೂಸ್

ಪುತ್ತೂರು:ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿರುವ “ವಿವೇಕ ಉದ್ಯೋಗ ಮೇಳ”. ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತನೆಯಲ್ಲಿ ಜು. 19ರಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿರುವ ವಿವೇಕ ಉದ್ಯೋಗ ಮೇಳವನ್ನು ಸ್ಥಳೀಯ ಉದ್ಯೋಗಾಕಾಂಕ್ಷಿಗಳ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಆಸುಪಾಸಿನ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಉದ್ಯೋಗ ಮೇಳವನ್ನು ಸ್ಥಳೀಯ ಆದ್ಯತೆಯೊಂದಿಗೆ ಆಯೋಜಿಸಲಾಗಿದೆ....