Monday, January 20, 2025

archiveVivekanda Collage

ಸುದ್ದಿ

ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ದೊರಕುತ್ತದೆ: ಪ್ರೊ.ಸುಬ್ಬಪ್ಪ ಕೈಕಂಬ

ಪುತ್ತೂರು: ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾದದ್ದು ವಿದ್ಯಾರ್ಥಿಗಳ ಧರ್ಮ. ಮಾಡುವ ಕಾಯಕದಲ್ಲಿ ಪ್ರೀತಿಯನ್ನಿಟ್ಟರೆ ಮಾತ್ರ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ಖಂಡಿತವಾಗಿಯೂ ದೊರಕುತ್ತದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಬ್ಬಪ್ಪ ಕೈಕಂಬ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ಆಯೋಜಿಸಿದ ಕಳೆದ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ...