ಆಡಿಯೋ ಪ್ರಕರಣ; ಶಂಕರಗೌಡ ನನ್ನ ಬಳಿ ಬಂದಿದ್ದು ನಿಜ; ಬಿ.ಎಸ್.ವೈ –ಕಹಳೆ ನ್ಯೂಸ್
ಹುಬ್ಬಳ್ಳಿ : ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರ ಪುತ್ರ ಶಂಕರಗೌಡ ನನ್ನ ಬಳಿ ಬಂದಿದ್ದು ಸತ್ಯ. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕುಮಾರಸ್ವಾಮಿ ತಮಗೆ ಬೇಕಾದನ್ನು ಇಟ್ಟುಕೊಂಡು ಉಳಿದಿದ್ದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಮಗ ಶಂಕರಗೌಡನನ್ನು ಕುಮಾರಸ್ವಾಮಿಯವರೇ ರಾತ್ರಿ 12.30ಕ್ಕೆ ಗೆಸ್ಟ್ ಹೌಸ್ ಬಳಿಗೆ ಕಳುಹಿಸಿಕೊಟ್ಟಿದ್ದಾರೆ. ನನ್ನ ಬಳಿ ಮಾತನಾಡುವಂತೆ...