Sunday, January 19, 2025

archiveyakshagana

ದಕ್ಷಿಣ ಕನ್ನಡಯಕ್ಷಗಾನ / ಕಲೆರಾಜ್ಯಸುದ್ದಿ

ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಸಂತಾಪ – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಹಲವು ದಶಕಗಳ ಕಾಲ ಯಕ್ಷ ಸೇವೆ ಮಾಡಿದ್ದ ಶ್ರೀ ಸಂಪಾಜೆ ಶೀನಪ್ಪ ರೈ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಶ್ರೀ ಶೀನಪ್ಪ ರೈ ಅವರಿಗೆ ಯಕ್ಷಗಾನ ಬಯಲಾಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದವು....
ಸುದ್ದಿ

ಯಕ್ಷಗಾನಕ್ಕೆ ಮನಸೋತ ಜಯಮಾಲ; ಕಾರಿನಿಂದ ಇಳಿದು ಗದ್ದೆಯತ್ತ ಹೆಜ್ಜೆ – ಕಹಳೆ ನ್ಯೂಸ್

ಉಡುಪಿ: ಯಕ್ಷಗಾನ -ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ಇದರಲ್ಲಿ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ಇಂತಹ ಯಕ್ಷಗಾನಕ್ಕೆ ಮಾರು ಹೋಗದವರು ಯಾರು ಇಲ್ಲ , ಅಂತೇಯೇ ಬಾರ್ಕೂರಿನಲ್ಲಿ ಅಳುಪೋತ್ಸವವನ್ನು ಉದ್ಘಾಟಿಸಲು ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲ ಅವರು ಮಾರ್ಗ...
ಸುದ್ದಿ

ಆಂಜನೇಯ ಯಕ್ಷಗಾನ ತಂಡಕ್ಕೆ ಸುವರ್ಣ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು: ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಸುವರ್ಣ ಮಹೋತ್ಸವ ಸಂಭ್ರಮವು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.ಈ ವೇಳೆ ಯಕ್ಷಗಾನದಲ್ಲಿ ಸಮಾಜಿಕ ಜಾಲತಾಣಗಳ ಮಾರಕ ಪೂರಕ ವಿಚಾರದ ಬಗ್ಗೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕವಳ್ಳಿ ಮಾತನಾಡಿದರು. ಈ ವೇಳೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯೆ ಗೌರಿ ಸಾಸ್ತನ, ಯಕ್ಷಗಾನ ವಿದ್ವಾಂಸ,...
ಸುದ್ದಿ

Supper Exclusive : ಅಮೇರಿಕಾದಲ್ಲಿ ಇತಿಹಾಸ ನಿರ್ಮಿಸಿದ ಯಕ್ಷಗಾನ ; ಪಟ್ಲ ಸತೀಶ್ ಶೆಟ್ಟಿಯವರ ಗಾಯನಕ್ಕೆ ಮನಸೋತ ದೊಡ್ಡಣ್ಣ – ಕಹಳೆ ನ್ಯೂಸ್

ಕರಾವಳಿ : ಯಕ್ಷಗಾನ ಕರಾವಳಿಯ ಗಂಡು ಕಲೆ. ಇದೊಂದು ಆರಾಧನಾ ಕಲೆ ಆದರೆ, ಈಗ ಈ ಕಲೆಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಲಭಿಸಿರುವುದು ಯಕ್ಷಗಾನ ಪ್ರೇಮಿಗಳಿಗೆ ಅತೀವ ಸಂತಸ ತಂದಿದೆ. ಜಿಲ್ಲೆ, ರಾಜ್ಯ, ದೇಶೀಯ ಮಟ್ಟದಲ್ಲಲ್ಲದೆ, ದುಬಾಯಿ ಕತ್ತರ್ ಸೇರಿದಂತೆ ಅನೇಕ ವಿದೇಶಿ ರಾಷ್ಟಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ , ಪ್ರದರ್ಶನ ನಡೆದಿದೆ. ಆದರೆ, ಇದೀಗ ಅಮೇರಿಕಾದ ಇತಿಹಾಸದಲ್ಲೇ ಮೊದಲಬಾರಿಗೆ ಹ್ಯೂಸ್ಟನ್ ಕೃಷ್ಣವೃಂದವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ...
ಸುದ್ದಿ

ರಿಯಾಲಿಟಿ ಶೋನಲ್ಲಿ ಗಂಡುಕಲೆ ಯಕ್ಷಗಾನಕ್ಕೆ ಅಪಮಾನ ; ವಾಹಿನಿಯ ವಿರುದ್ಧ ಸಿಡಿದೆದ್ದ ಯಕ್ಷ ಪ್ರೀಯರು – ಕಹಳೆ ನ್ಯೂಸ್

ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ವೊಂದರಲ್ಲಿ ಯಕ್ಷಗಾನಕ್ಕೆ ಮಾಡಿರುವ ಅಪಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಾಲಿವುಡ್ ಹಾಡೊಂದಕ್ಕೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡಿರುವ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಿಂದೊಮ್ಮೆ ಬ್ರಾಹ್ಮಣರನ್ನು ಕೆಟ್ಟದ್ದಾಗಿ ಚಿತ್ರಿಸಿದ್ದ ವಾಹಿನಿ ನಂತರ ಕ್ಷಮೆಯಾಚಿಸಿತ್ತು. ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಯಕ್ಷಗಾನ ಅಭಿಮಾನಿಗಳು ವಾಹಿನಿಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ನಿಮಗೆ ಯಕ್ಷಗಾನದಲ್ಲಿ ಯಾವ ರಾಗದ ಹಾಡು ಸಿಗಲಿಲ್ಲವೇ?...
ಸುದ್ದಿ

73ರಲ್ಲಿ ಗೆಜ್ಜೆಕಟ್ಟಿದ ಸಾವಿತ್ರಿ ; ವಿವಾಹದ 50ನೇ ವಾರ್ಷಿಕೋತ್ಸವದಂದು 100ನೇ ಯಕ್ಷಗಾನ ಪ್ರದರ್ಶನ – ಕಹಳೆ ನ್ಯೂಸ್

ಸಾವಿತ್ರಿ ಎಸ್‌ . ರಾವ್‌ ಇವರು ಸುರತ್ಕಲ್‌ನಲ್ಲಿ ಜನಿಸಿ, ಕೂಡು ಕುಟುಂಬದಲ್ಲಿ ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನಾಡಿ ಬೆಳೆದು, ಮಂಗಳೂರಿನ ಉರ್ವದ ಕಲ್ಲಾವು ಕುಟುಂಬಕ್ಕೆ ಸೊಸೆಯಾಗಿ, ಶ್ರೀನಿವಾಸ ರಾವ್‌ ಅವರ ಮಡದಿಯಾಗಿ ಬಂದು ಮೇ 13ಕ್ಕೆ 50 ವರ್ಷ ತುಂಬಿತು. ಈ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ದುಡಿದು, ಮಕ್ಕಳ ಅಪಾರ ಪ್ರೀತಿಯನ್ನು ಗಳಿಸಿದ ಅವರು ರಾಜ್ಯ ಪ್ರಶಸ್ತಿಯನ್ನು ಪಡೆದರು. ಮಕ್ಕಳ ಸಾಹಿತಿಯಾಗಿ ಹಲವಾರು ಕಥೆ ಕವನಗಳನ್ನು ಬರೆದರು. ತೋಟದ ಆರೈಕೆ, ಮಕ್ಕಳಿಗೆ...
ಯಕ್ಷಗಾನ / ಕಲೆ

ಜೂನ್ 16ರಂದು ಉಪ್ಪಿನಂಗಡಿಯಲ್ಲಿ ಯಕ್ಷ ಸಂಭ್ರಮ – 2018 ; ಕಟೀಲು, ಉಪ್ಪಿನಂಗಡಿ ದೇವಸ್ಥಾನಗಳಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಯಕ್ಷ ಸಂಗಮ ಉಪ್ಪಿನಂಗಡಿಯ ಯಕ್ಷ ಸಂಭ್ರಮ 2018 ರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ; ಆಮಂತ್ರಣ ಬಿಡುಗಡೆ ಯಕ್ಷಗಾನದ ಅದಿ ದೇವತೆ ಕಟೀಲು ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಅತ್ರಿಜಾಲು ಕೃಷ್ಣಕುಮಾರ್ ಭಟ್, ವಿನೀತ್ ಶಗ್ರಿತ್ತಾಯ, ಪ್ರವೀಣ ಆಳ್ವ, ಶಶಿಧರ ನೆಕ್ಕಿಲಾಡಿ, ರವೀಶ.ಎಚ್.ಟಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ದೇವಸ್ಥಾನದ...
ಸುದ್ದಿ

ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು! – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನದಲ್ಲಿ ರಾಜಕೀಯ ಪ್ರೇರಿತ ಪದವನ್ನು ಬಳಕೆ ಮಾಡಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದರು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕ ಎಂಬಲ್ಲಿ ನಡೆದಿದೆ ಎನ್ನಲಾದ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ ಪ್ರಸಂಗದ ಒಂದು ಸನ್ನಿವೇಶದಲ್ಲಿ “ಇವನರ್ವ, ಇವನರ್ವ” ಎಂದು ಡೈಲಾಗ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣಾ ಆಯೋಗದ ಕಚೇರಿಯಿಂದ...
1 2
Page 1 of 2