Recent Posts

Monday, January 20, 2025

archiveಕಹಳೆ ನ್ಯೂಸ್

ಬಂಟ್ವಾಳ

ಬಂಟ್ವಾಳ ಸೋರ್ಣಾಡು ಡೀಸೆಲ್ ಕಳವು: ಆರು ಆರೋಪಿಗಳ ಬಂಧನ- ಕಹಳೆ ನ್ಯೂಸ್

ಬಂಟ್ವಾಳ: ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬ ನಿವಾಸಿ ಐವನ್ ಪಿಂಟೊ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ನಡುವಿನ ತೈಲ ಸರಬರಾಜು ಸಂಸ್ಥೆಗೆ ಸೇರಿದ ಡೀಸೆಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುವ ದಂಧೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇವರಿಂದ ಲಕ್ಷಾಂತರ ಮೌಲ್ಯದ ಡೀಸೆಲ್ ಕ್ಯಾನ್ ವಶಪಡಿಸಿಕೊಂಡಿದ್ದಾರೆ. ಇನ್‍ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್‍ಐ ಪ್ರಸನ್ನ ಎಂ....
ಬೆಳ್ತಂಗಡಿ

ನಾಪತ್ತೆಯಾದ ಎರಡು ವರ್ಷದ ಹೆಣ್ಣು ಮಗು ನದಿಯಲ್ಲಿ ಶವವಾಗಿ ಪತ್ತೆ- ಕಹಳೆ ನ್ಯೂಸ್

ವೇಣೂರು: ಸುಲ್ಕೇರಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಸುಲ್ಕೇರಿಯ ಜಂತೀಗೋಳಿಯ ಪರಾರಿ ನಿವಾಸಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗು ಧೃತ್ವಿಯೊಂದಿಗೆ ಸುಲ್ಕೇರಿಯ ತವರು ಮನೆಯಲ್ಲಿ ವಾಸವಿದ್ದರು. ನಿನ್ನೆ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಸನಿಹದ ತೋಟಕ್ಕೆ ಹೋಗಿದ್ದರು. ಹಿಂತಿರುಗಿ...
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಬಿ.ಎಸ್ ಭಾರ್ಗವಿ ರವರಿಗೆ ಅಭಿನಂದನೆ- ಕಹಳೆ ನ್ಯೂಸ್

ಪುತ್ತೂರು; 2020-21 ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಗಳಿಸಿ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಬಿ.ಎಸ್ ಭಾರ್ಗವಿ ಅವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿನಿ ಬಿ.ಎಸ್ ಭಾರ್ಗವಿ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಬಿ.ಎಸ್  ಭಾರ್ಗವಿ ,ತಮ್ಮ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮುಂದುವರಿಸಿ...
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೊರೊನಾ ನಿಯಮಗಳಿಗೆ ಗಡಿನಾಡ ಕೇರಳಿಗರು ವಿರೋಧ- ಕಹಳೆ ನ್ಯೂಸ್

ಮಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದು, ಕೇರಳದಿಂದ ಬರುವವರಿಗೆ ಲಸಿಕೆ ಪಡೆದರೂ ಸಹ 72 ಗಂಟೆಗಳ ನೆಗಟಿವ್ ವರದಿ ಕಡ್ಡಾಯವಾಗಿದ್ದು, ಬಸ್ ಸಂಚಾರಕ್ಕೂ ನಿಬರ್ಂಧ ಹೇರಲಾಗಿದೆ. ಜಿಲ್ಲಾಡಳಿತದ ಈ ನಿಯಮಗಳನ್ನು ವಿರೋಧಿಸಿರುವ ಗಡಿನಾಡ ಕೇರಳಿಗರು ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಾಕ್ಸಿನೇಷನ್ ಸರ್ಟಿಫಿಕೇಟ್‍ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ...
ಸುದ್ದಿ

ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಘೋಷಣೆ : ಶೇ.99.9ರಷ್ಟು ವಿದ್ಯಾರ್ಥಿಗಳು ಪಾಸ್ – ಫಲಿತಾಂಶ ಘೋಷಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್- ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಡುವೆಯೂ ನಡೆದಂತಹ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದ್ದು, ಈ ಮೂಲಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ನಾಗೇಶ್ ಅವರು, ಕೊರೋನಾ ಸೋಂಕಿನ ಸಂದರ್ಭದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನ 8,76,581 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಒಂದು ಮಗು ಮಾತ್ರ...
ಸುದ್ದಿ

ಗಂಬೀರ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ನರಿಮೊಗರು ಗ್ರಾಮದ ನಡುಗುಡ್ಡೆ ನಿವಾಸಿ – ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಮದ ಆರ್ಥಿಕ ನೆರವು – ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ನಡುಗುಡ್ಡೆ ನಿವಾಸಿ ಮೋನಪ್ಪ ಎಂಬವರ ಮಗ ಗಂಬೀರ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಆರ್ಥಿಕ ನೆರವಿನ ಚೆಕ್ಕನ್ನ ನೀಡಿದ್ದಾರೆ. ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಮೋನಪ್ಪ ಅವರಿಗೆ ಆರ್ಥಿಕ ನೆರವಿನ ಚೆಕ್ಕನ್ನ ಹಸ್ತಾಂತರಿಸಿದರು....
ಬೆಳ್ತಂಗಡಿ

ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡಕ್ಕದಲ್ಲಿ ಪೋಷಕರ ಸಭೆ-ಕಹಳೆ ನ್ಯೂಸ್

ಮೈರೋಳ್ತಡಕ್ಕ: ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡಕ್ಕದಲ್ಲಿ ಪೋಷಕರ ಸಭೆ ಕೋವಿಡ್ ನಿಯಮಕ್ಕೆ ಅನುಸಾರವಾಗಿ ನಡೆಯಿತು. ಸಭೆಯಲ್ಲಿ ಮಕ್ಕಳ ಪಠ್ಯ ಮತ್ತು ಪಠ್ಯಯೇತರ ಚಟುವಟಿಕೆಯ ಕುರಿತು ಚರ್ಚೆ ಹಾಗೂ ಶಾಲೆಯಲ್ಲಿ ಶ್ರಮದಾನ ನಡೆಸುವ ಬಗ್ಗೆ ಮತ್ತು ಕೈ ತೋಟದ ಏಲಂ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಾಯ್ಯ ಆಚಾರ್ಯ, ಪಂಚಾಯತ್ ಸದಸ್ಯರಾದ ಸುಚಿತ್ರ, ಮುಖ್ಯೋಪಾಧ್ಯಾಯರಾದ ಚಂದ್ರಾವತಿ ಕಾರ್ಯಕ್ರಮಕ್ಕೆ...
ಬೆಳ್ತಂಗಡಿ

ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣವನ್ನು ವಿರೋಧಿಸಿ ನಾಳೆ ಬೆಳ್ತಂಗಡಿ ಮೆಸ್ಕಾಂ ಕಚೇರಿಯಲ್ಲಿ ರಾಷ್ಟ್ರ ವ್ಯಾಪ್ತಿ ಮುಷ್ಕರ-ಕಹಳೆ ನ್ಯೂಸ್

ಮೆಸ್ಕಾಂ ಮತ್ತು ಇತರ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಪುಯತ್ನ ಪಡುತ್ತಿದ್ದು ಇದರ ವಿರುದ್ಧ ಮತ್ತು 2003 ನೇ ಇಸವಿಯ ಕಾಯಿದೆಗೆ ತಿದ್ದುಪಡಿ ತರುವುದರ ವಿರುದ್ಧ ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ ನಾಳೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಳ್ತಂಗಡಿ ಮತ್ತು ಉಜಿರೆ ಮೆಸ್ಕಾಂ ಕಚೇರಿಯಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಹಾಗೂ ಅಧಿಕಾರಿಗಳ ಒಕ್ಕೂಟ ಮಂಗಳೂರು ವತಿಯಿಂದ ನಾಳೆ ಬೆಳಿಗ್ಗೆ 8.30 ರಿಂದ...
1 115 116 117 118 119 126
Page 117 of 126