Recent Posts

Sunday, January 19, 2025

archiveಕಹಳೆ ನ್ಯೂಸ್

ಸುದ್ದಿ

ಪುತ್ತೂರು: ಆಗಸ್ಟ್ 31ರಂದು ವಿದ್ಯುತ್ ನಿಲುಗಡೆ- ಕಹಳೆ ನ್ಯೂಸ್

ಪುತ್ತೂರು: ಆಗಸ್ಟ್ 31ರಂದು ವಿದ್ಯುತ್ ನಿಲುಗಡೆ- ಕಹಳೆ ನ್ಯೂಸ್ ಪುತ್ತೂರು: 33ಕೆವಿ ಕಡಬ-ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ದಿ.31-08-2019ನೇ ಶನಿವಾರದಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಮತ್ತು ಆಗಸ್ಟ್29ನೇ ಗುರುವಾರದಂದು ನಿರ್ಧರಿಸಲಾಗಿದ್ದ ವಿದ್ಯುತ್ ನಿಲುಗಡೆಯನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ ಎಂದು ವಿದ್ಯುತ್ ಸರಬರಾಜು ಕಂಪನಿ ಮಂಗಳೂರು ನಿಯಮಿತ ತಿಳಿಸುರುತ್ತದೆ. 33/11ಕೆ.ವಿ. ಸವಣೂರು, ನೆಲ್ಯಾಡಿ, ಕಡಬ, ಬಿಂದು ಫ್ಯಾಕ್ಟರಿ ಮತ್ತು ಸುಬ್ರಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ...
ಸುದ್ದಿ

ಪುತ್ತೂರು: ಇಬ್ಬರು ಹೆಂಡಿರ ಮುದ್ದಿನ ಗಂಡನಿಂದ ಹಲ್ಲೆ; ಪತ್ನಿಯರಿಂದ ಕೇಸು ದಾಖಲು,ಠಾಣೆಯಲ್ಲಿ ರಾಜಿ- ಕಹಳೆ ನ್ಯೂಸ್

ಪುತ್ತೂರು: ಸರ್ವೆಯ ನರಿಮೊಗರು ಗ್ರಾಮದ ವಿಶ್ವನಾಥ ಗೌಡ(45) ಎಂಬಾತ ಒಂದೇ ಮನೆಯ ಇಬ್ಬರು ಹೆಂಗಸರನ್ನು ಮದುವೆಯಾಗಿ ಇದೀಗ ಅವರಿಗೆ ಕಿರುಕುಳ ನೀಡಿದ್ದಾಗಿ ಪ್ರಕರಣ ದಾಖಲಾಗಿತ್ತು. ವಿಶ್ವನಾಥ ಗೌಡ ಎಂಬಾತನು ಸುಮಾರು 10ವರ್ಷದ ಹಿಂದೆಯೇ ಯಶೋದಾ ಎಂಬಾಕೆಯನ್ನು ಮದುವೆಯಾಗಿದ್ದು ನಂತರ ಮೊದಲನೇ ಹೆಂಡತಿಯ ಸಹೋದರಿಯಾದ ಅಮಿತಾ ಎಂಬಾಕೆಯನ್ನು ಎರಡನೇ ವಿವಾಹವಾಗಿರುತ್ತಾನೆ. ಈ ಹಿಂದೆಯಿಂದಲೇ ತನ್ನ ಎರಡೂ ಹೆಂಡತಿಯರಿಗೂ ಕಿರುಕುಳ ನೀಡುತ್ತಿದ್ದು ನಿನ್ನೆ ರಾತ್ರೆ 9ಗಂಟೆ ಸುಮಾರಿಗೆ ವಿಶ್ವನಾಥ ಗೌಡನು ತನ್ನ ತಾಯಿ...
ಸುದ್ದಿ

ಉಪ್ಪಿನಂಗಡಿ: ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದ 38ನೇ ವರ್ಷದ ಅದ್ಧುರಿ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ; ವಿವಿಧ ಆಟೋಟ ಸ್ಪರ್ಧೆಗಳು- ಕಹಳೆ ನ್ಯೂಸ್

ಉಪ್ಪಿನಂಗಡಿ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ ಇದರ 38ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವು ಅದ್ಧುರಿಯಾಗು ನೆರವೇರಿತು. ಇಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನೆರವೇರಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನೆರವೇರಿತು. ಶ್ರೀದುರ್ಗಾ ಗೆಳೆಯರ ಬಳಗ ಇದರ ವತಿಯಿಂದ ಅನ್ನದಾನವು ನಡೆದು ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು....
ಸುದ್ದಿ

ಬಂಟ್ವಾಳ: ವಸಂತಿ ಆಚಾರ್ಯರವರಿಗೆ ಮುಖ್ಯಮಂತ್ರಿಯಿಂದ ಚಿಕಿತ್ಸೆಗೆ ರೂ. 5 ಲಕ್ಷ ಪರಿಹಾರ; ಈ ಹಿಂದೆ ಕಹಳೆ ನ್ಯೂಸ್ ನಡೆಸಿದ ಅಭಿಯಾನಕ್ಕೆ ಫಲಶ್ರುತಿ- ಕಹಳೆ ನ್ಯೂಸ್

ಬಂಟ್ವಾಳ: ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಈ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಬೇಟಿಯಾದರು. ಬಾಳ್ತಿಲ ಗ್ರಾಮದ ರಾಜೇಶ್ ಆಚಾರ್ಯ ಎಂಬವರ ಪತ್ನಿ ವಸಂತಿ ಎಂಬವರು ಬೆನ್ನುಹುರಿ ಮುರಿತದಿಂದ ಹಾಸಿಗೆ ಹಿಡಿದಿದ್ದು ಚಿಕಿತ್ಸೆಗಾಗಿ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಮಾನ್ಯ ಮುಖ್ಯಮಂತ್ರಿ ಯವರಲ್ಲಿ ವಿನಂತಿಸಿದಾಗ ವಿಶೇಷ ಪ್ರಕರಣವೆಂದು ಪರಿಗಣಿಸಿ ರೂ. 5 ಲಕ್ಷ ಚಿಕಿತ್ಸಾ ವೆಚ್ಚ ನೀಡಲು ಸಮ್ಮತಿಸಿದರು. ಈ ಹಿಂದೆ ಕಹಳೆ...
ಸುದ್ದಿ

ಸಂತ್ರಸ್ತರಿಗೆ ಶೀಘ್ರ ಪರಿಹಾರದ ಭರವಸೆ ; ಮಳೆಯಿಂದ ಹಾನಿಗೊಳಗಾದವರಿಗೆ ಬಜರಂಗದಳ ಸಾಥ್- ಕಹಳೆ ನ್ಯೂಸ್

ಪುತ್ತೂರು: ನಿರಂತರ ಸುರಿದ ಮಳೆಗೆ ಕಡುಬಡತನದಲ್ಲಿ ವಾಸಿಸುತ್ತಿದ್ದ ಸಂಪ್ಯ ಉದಯಗಿರಿ ಐತ್ಯಿ ಎಂಬವರ ಮನೆ ಮಳೆಗೆ ಹಾನಿಗೀಡಾದ ವಿಷಯ ತಿಳಿದ ಪುತ್ತೂರಿನ ಬಜರಂಗದಳದ ಯುವ ಮುಂದಳು ಹರೀಶ್ ಕುಮಾರ್ ದೋಳ್ಪಾಡಿ ಸ್ಥಳಕ್ಕೆ ಧಾವಿಸಿ ಮನೆಯನ್ನು ಪರಿಶೀಲಿಸಿ ಅಲ್ಲಿಯ ನಗರಸಭೆ ಸದಸ್ಯರಾದ ಶೀನಪ್ಪ ನಾಯ್ಕರನ್ನ ಸ್ಥಳಕ್ಕೆ ಕರೆಸಿ ಮಳೆಗೆ ಹಾನಿಯಾದ ಮನೆಯನ್ನು ಅತೀ ಶೀಘ್ರದಲ್ಲಿ ಕೆಲಸ ಮಾಡಿಸಬೇಕಾಗಿ ದೋಳ್ಪಾಡಿಯವರ ಮಾನವಿ ಮೇರೆಗೆ ನಗರಸಭೆ ಸದಸ್ಯರಾದ ಶೀನಪ್ಪ ನಾಯ್ಕರು ಹಾನಿಗೀಡಾದ ಮನೆಯವರಿಗೆ ಅತೀ...
ಸುದ್ದಿ

ಕಲಾಸುರಭಿ ಯಕ್ಷಗಾನ ಬಳಗದ ಉದ್ಘಾಟನೆ ಮತ್ತು ಪ್ರಥಮ ಯಕ್ಷ ಪ್ರದರ್ಶನ- ಕಹಳೆ ನ್ಯೂಸ್

ಪುತ್ತೂರು: ಕಲಾಸುರಭಿ ಯಕ್ಷಕಲಾ ಬಳಗ ಪುತ್ತೂರು ಇದರ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಯಕ್ಷ ಪ್ರದರ್ಶನವು ಆಗಸ್ಟ್ 23ನೇ ಶುಕ್ರವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಇಲ್ಲಿನ ಶಾಲಾ ಕ್ರೀಡಾಂಗಣದಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ನಡೆಯಲಿದೆ. ಸಂಜೆ 4ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕಲಾಸುರಭಿ ಯಕ್ಷಗಾನ ಬಳಗದ ಗೌರವಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಇವರು ಉದ್ಘಾಟಿಸಲಿದ್ದಾರೆ. ರಾತ್ರಿ 8ರಿಂದ 'ಶ್ರೀ ಕೃಷ್ಣ ಕಾರುಣ್ಯ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಕಥಾಭಾಗದಲ್ಲಿ ಭಾಗವತರಾಗಿ ಶ್ರೀ ಸತೀಶ್...
ಸುದ್ದಿ

ಸುಬ್ರಹ್ಮಣ್ಯ ;ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ ;ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ. ಅಗೋಸ್ಟ್ 17 ರಂದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀ ಗಳು ಶ್ರೀ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಿದರು.ಶ್ರೀ ರಾಘವೇಂದ್ರ ಸ್ವಾಮಿಜೀ ಗಳ ಮೂರ್ತಿಗೆ ಮಠದ ಶಿಷ್ಯ ರಾದ ರವೀಂದ್ರ ಭಟ್ ಅವರು ಹೂವುಗಳಿಂದ ಅಲಂಕಾರ ಹಾಗು ಕಡಲೆಬೇಳೆ ಯಿಂದ ಪ್ರಸಾದ ತಯಾರಿ ಮಾಡಿಕೊಟ್ಟರು. ಪೂಜೆ ಸಂದರ್ಭದಲ್ಲಿ ಮಠದ ಸಿಬ್ಬಂದಿಗಳು ಉಪಸ್ಥರಿದ್ದರು....
ಸುದ್ದಿ

ಪುತ್ತೂರು: ಮಠಂತಬೆಟ್ಟು 10ನೇ ವರ್ಷದ ವರಮಹಾಲಕ್ಷ್ಮಿ ಪೂಜೆ- ಕಹಳೆ ನ್ಯೂಸ್

ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ವೃತ ಪೂಜಾ ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು-ಸ್ವಸಹಾಯ ಸಂಘಗಳ ಕೊಡಿಮ್ಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಮತ್ತು ಶಾಂತಿನಗರ ಒಕ್ಕೂಟಗಳ ಸಹಯೋಗದೊಂದಿಗೆ 10ನೇ ವರ್ಷದ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಿನ್ನೆ ಆ.16ರಂದು ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ನಡೆಯಿತು. ಬೆಳಿಗ್ಗೆ ಕಲಶ ಪ್ರತಿಷ್ಠೆ, ಮಂಗಳಾರತಿ ಹಾಗೂ ಲಲಿತಾ ಸಹಸ್ತ್ರನಾಮ ಪಾರಾಯಣ ನಡೆಯಿತು ಬಳಿಕ ಪ್ರಸಾದ ವಿತರಣೆ...
1 121 122 123 124 125 126
Page 123 of 126