Recent Posts

Monday, January 20, 2025

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಎಕ್ಸಿಲ್ ತುಂಡಾಗಿ ರಸ್ತೆ ಬದಿಗೆ ಸರಿದ ಕೆಎಸ್ಆರ್ ಟಿಸಿ ಬಸ್ : ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಪ್ರಯಾಣಿಕರು- ಕಹಳೆ ನ್ಯೂಸ್

ಬಂಟ್ವಾಳ: ಚಲಿಸುತ್ತಿದ್ದ ವೇಳೆಯೇ ಸರ್ಕಾರಿ ಬಸ್ ನ ಎಕ್ಸಿಲ್ ತುಂಡರಿಸಿದ್ದು, ಚಾಲಕನ ಜಾಣ್ಮೆಯಿಂದಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಕಲ್ಲಡ್ಕ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ಸು ಕಲ್ಲಡ್ಕದಿಂದ ಮುಂದೆ ಬೋಳಂಗಡಿ ತಲುಪುತ್ತಿದ್ದಂತೆಯೇ ಈ ಅವಘಡ ನಡೆದಿದ್ದು, ಬಸ್ಸು ರಸ್ತೆಯ ತೀರಾ ಬಲಭಾಗಕ್ಕೆ ಚಲಿಸಿದೆ. ಚಾಲಕ ಜಾಣ್ಮೆಯಿಂದ ಬಸ್ಸನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲು ಪ್ರಯತ್ನಸಿದ್ದು, ಸುಮಾರು 200. ಮೀಟರ್ ದೂರ ಹೆದ್ದಾರಿ ಎಡಭಾಗದಲ್ಲಿ ಚಲಿಸಿ ಬೋಳಂಗಡಿ...
ಮೂಡಬಿದಿರೆಸುದ್ದಿ

ರಸ್ತೆ ಪಕ್ಕದಲ್ಲಿ ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆ- ಕಹಳೆ ನ್ಯೂಸ್

ಮೂಡುಬಿದಿರೆ: ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆಯಾದ ಘಟನೆ ಮಹಾವೀರ ಕಾಲೇಜು ಸಮೀಪದ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ಬಳಿ ನಡೆದಿದೆ. ಮುಂಡದಿಂದ ಬೇರ್ಪಟ್ಟಿದ್ದ ಹಸುವಿನ ತಲೆಬುರುಡೆಯನ್ನು ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿದ್ದು, ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೆÇಲೀಸರು ತಲೆಬುರುಡೆಯನ್ನು ಹೊರತೆಗೆಯುವ ವ್ಯವಸ್ಥೆ ಮಾಡಿದರು. ಈ ಘಟನೆಗೆ ಪ್ರತಿಕ್ರಿಯಿಸಿದ ಮೂಡುಬಿದಿರೆಯ ಹಿಂದೂ ಜಾಗರಣ ವೇದಿಕೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ನೈತಿಕ ಶಿಕ್ಷಣದ ಉಪನ್ಯಾಸ ಕಾರ್ಯಕ್ರಮ – ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಬೆಳೆಸಬೇಕು – ಆಶಾ ಬೆಳ್ಳಾರೆ- ಕಹಳೆ ನ್ಯೂಸ್

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ನೈತಿಕ ಶಿಕ್ಷಣದ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಅವರು, “ಶಿಕ್ಷಣ ವ್ಯವಸ್ಥೆ ಆಧುನೀಕರಣಗೊಂಡಿದೆ. ಈ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಿ ಅವರಲ್ಲಿ ಅಭೂತಪೂರ್ವ ಬದಲಾವಣೆಯನ್ನು ತರಲು ಅವರಿಗೆ ನೈತಿಕ ಶಿಕ್ಷಣದ ಅಗತ್ಯವಿದೆ.ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣವನ್ನು ಕೇವಲ ಔಪಚಾರಿಕವಾಗಿ ಇಡದೇ ಅದನ್ನು ಸುವ್ಯವಸ್ಥಿತ ರೂಪದಲ್ಲಿ ಅಭಿವೃದ್ಧಿಪಡಿಸುವ ಕಾರ‍್ಯವನ್ನು ಕೈಗೊಳ್ಳಬೇಕು....
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಜಮೀನು ವಿವಾದ ಕೊಲೆಯಲ್ಲಿ ಅಂತ್ಯ ; ರೆಖ್ಯಾ ಗ್ರಾಮದ ಎಲ್ಐಸಿ ಏಜೆಂಟ್, ಕೃಷಿಕ ಸಾಂತಪ್ಪ ಗೌಡ ಕೊಲೆಯಾದ ದುರ್ದೈವಿ, ಆರೋಪಿ ಪರಾರಿ‌..! – ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಸಮೀಪದ ದೇವಸ ಎಂಬಲ್ಲಿ ಜಮೀನಿನ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕೃಷಿಕ ಹಾಗೂ ಎಲ್ಐಸಿ ಏಜೆಂಟ್ ಆಗಿದ್ದ ಸಾಂತಪ್ಪ ಗೌಡ ದೇವಸ (40) ಎಂದು‌ ಗುರುತಿಸಲಾಗಿದೆ. ಕೊಲೆಯಾದ ಸಾಂತಪ್ಪ ಗೌಡ ಹಾಗೂ ಜಯಚಂದ್ರ ಎಂಬವರಿಗೆ ಜಮೀನು ವಿಚಾರವಾಗಿ ಮನಸ್ತಾಪವಿದ್ದು ಆದರೆ ಇಂದು ಅದೇ ವಿಚಾರವಾಗಿ ಜಗಳವಾಗಿದ್ದು ಜಗಳ ತಾರಕಕ್ಕೆ ಹೇರಿದೆ. ಈ ವೇಳೆ ಕೋಪಗೊಂಡ ‌ಆರೋಪಿ ಜಯಚಂದ್ರ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಾರ್ಷಿಕ ಸಂಭ್ರಮ ಆಚರಣೆಗೆ ಸಜ್ಜಾದ ಪುತ್ತೂರಿನ ಶ್ರೀವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋ- ಕಹಳೆ ನ್ಯೂಸ್

ಪುತ್ತೂರು: ವೆಡ್ಡಿಂಗ್, ಪ್ರೀ ವೆಡ್ಡಿಂಗ್ ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಫೆಮಸ್, ಫೋಟೋ ಕ್ಲಿಕ್ಕಿಸೋದ್ರಲ್ಲಿ ಎತ್ತಿದ ಕೈ, ಪುತ್ತೂರಿನಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರೋ ಶ್ರೀವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನಲೆ ಜ.14 ಮಕರ ಸಂಕ್ರಮಣದ0ದು ವಿಶ್ವಕರ್ಮ ಸಭಾಭವನ ಬೊಳ್ವಾರ್‌ನಲ್ಲಿ ಸಂಭ್ರಮಾಚಣೆ ನಡೆಯಲಿದೆ.   ಬೆಳಿಗ್ಗೆ 10.00 ಗಂಟೆಗೆ ಸಂಭ್ರಮಾಚರಣೆ ನಡೆಯಲಿದ್ದು, ಜೊತೆಗೆ ನಟನಾ ತರಬೇತಿಯ ಮೊದಲ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ನರೇಂದ್ರ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಆಶಾ ಬೆಳ್ಳಾರೆ ಯುವ ಜನತೆಗೆ ಸ್ಪೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಯುವಜನತೆಯ ಆದರ್ಶವಾಗಿರುವ ಈ ವೀರ ಸನ್ಯಾಸಿಯ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತಿದೆ.ಸ್ವಾಮಿ ವಿವೇಕಾನಂದರು ಬೆಳಗಿದ ಜ್ಞಾನದ ದೀವಿಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಜತ್ತೂರು ಗ್ರಾಮದ ವಿವಿಧ ರಸ್ತೆ ಅಭಿವೃಧ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೇರವೇರಿಸಿದ ಶಾಸಕ ಸಂಜೀವ ಮಠಂದೂರು- ಕಹಳೆ ನ್ಯೂಸ್

ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಜತ್ತೂರು ಗ್ರಾಮದ ವಿವಿಧ ರಸ್ತೆ ಅಭಿವೃಧ್ಧಿ ಕಾಮಗಾರಿಗಳಿಗೆ 165 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಈ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕರಾದ ಸಂಜೀವ ಮಠಂದೂರುರವರು ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಮಾನ್ಯ ಮುಖ್ಯ ಮಂತ್ರಿಗಳು ಪ್ರತೀ ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಶೇಷ ಅನುದಾನವನ್ನು ಬಿಡುಗಡೆಮಾಡಿದ್ದು ಪ್ರತೀ ಗ್ರಾಮದ ರಸ್ತೆಗಳು ಕಾಂಕ್ರಿಟೀಕರಣಗೊಂಡು ಸಾರ್ವಕಾಲಿಕ ರಸ್ತೆಗಳಾಗಿ ಅಭಿವೃಧ್ಧಿ ಹೊಂದುತ್ತಿದೆ. ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಿ ನಡೆಸುವ ರಸ್ತೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೊಳ್ವಾರು- ಮಂಜಲ್ಪಡ್ಪು ರಸ್ತೆ ತಿರುವಿನ ಸೇತುವೆ ಅಗಲೀಕರಣ ಕಾಮಗಾರಿ ಶಿಲಾನ್ಯಾಸ ನೇರವೇರಿಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಬೊಳ್ವಾರು-ಮಂಜಲ್ಪಡ್ಪು ರಸ್ತೆ ತಿರುವಿನ ಸೇತುವೆಯ ಅಗಲೀಕರಣ ಕಾಮಗಾರಿ ಶಿಲಾನ್ಯಾಸವನ್ನು ಮಾನ್ಯ ಶಾಸಕರಾದ ಸಂಜೀವ ಮಠಂದೂರು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ನಗರಸಭೆಯ ಅಧ್ಯಕ್ಷರಾದ ಶ್ರೀ ಜೀವಂಧರ ಜೈನ್, ನಗರ ಸಭೆಯ ಸದಸ್ಯರು, ಭಾ.ಜ.ಪಾ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಪಿ.ಜಿ.ಜಗನ್ನೀವಾಸ ರಾವ್,ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಶ್ರೀಮತಿ ಗೌರಿ ಬನ್ನೂರು, ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಗೌರಿ ನಗರಸಭೆಯ ಸದಸ್ಯರಾದ ಸಂತೋಷ್, ಭಾ.ಜ.ಫಾ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,...
1 12 13 14 15 16 126
Page 14 of 126