Monday, November 25, 2024

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ –ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ವಿಟ್ಲದ ಮೈತ್ರೇಯಿ ಗುರುಕುಲದ ಆಚಾರ್ಯ ರಾಹುಲ್ ಭಟ್ ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ 159ನೇ ಜಯಂತಿ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ 159ನೇ ಜನ್ಮದಿನವನ್ನು ಆಚರಿಸಲಾಯಿತು. “ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರೂ. ಧರ್ಮ, ತತ್ವಶಾಸ್ರ್ತ, ಇತಿಹಾಸ, ಕಲೆ, ಸಮಾಜ, ವಿಜ್ಞಾನ, ಸಾಹಿತ್ಯ ಬಲ್ಲವರಾಗಿದ್ದರು. ಶಿಕ್ಷಣದ ಜೊತೆಗೆ ಭಾರತೀಯ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಹೊಂದಿದ್ದರು. ನಿಜವಾದ ಭಾರತೀಯತೆಯ ಹುಡುಕಾಟದಲ್ಲಿರುವಾಗ ಇಲ್ಲಿನ ಶ್ರೇಷ್ಟತೆಯನ್ನು ಜಗತ್ತಿನಾದ್ಯಂತ ಎತ್ತಿಹಿಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು. ನಿರ್ಭಯ, ಆಶಾವಾದ ಮತ್ತು ಸಾಮಾಜಿಕ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಲೆತ್ತೂರುನಲ್ಲಿ ನಡೆದ ಸ್ವಾಮೀ ಕೊರಗಜ್ಜ ದೈವದ ಅವಹೇಳನ ಪ್ರಕರಣದ ಪ್ರಮುಖ ಆರೋಪಿ ಹಾಗೂ ಇನ್ನಿತರ ಅರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ- ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಿಟ್ಲ ಕೊಳ್ನಾಡು ಸಾಲೆತ್ತೂರುನಲ್ಲಿ ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮದಲ್ಲಿ ನಡೆದ ತುಳುನಾಡಿನ ಕಾರಣಿಕ ದೈವ ಸ್ವಾಮೀ ಕೊರಗಜ್ಜ ದೈವದ ಅವಹೇಳನ ಖಂಡಿಸಿ ಪ್ರಕರಣದ ಪ್ರಮುಖ ಆರೋಪಿಯಾದ ಮದುಮಗ ಕೇರಳದ ಮಂಜೇಶ್ವರ ತಾಲೂಕಿನ ಉಪ್ಪಳದ ನಿವಾಸಿ ಉಮರುಲ್ ಬಾಶಿತ್ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದೆಲ್ಲ ಆರೋಪಿಗಳನ್ನು ಶ್ರೀಘ್ರದಲ್ಲಿ ಬಂಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗಲ್ಲಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ...
ಉಡುಪಿಸುದ್ದಿ

ಉಡುಪಿ – ಕೊಲ್ಲೂರು ಯಾತ್ರಾರ್ಥಿಗಳಿದ್ದ ಬಸ್ ಪಲ್ಟಿ ಹಲವರಿಗೆ ಗಾಯ – ಕಹಳೆ ನ್ಯೂಸ್

ಉಡುಪಿ : ಕೊಲ್ಲೂರು ಯಾತಾರ್ಥಿಗಳಿಂದ ಬಸ್ ಪಲ್ಟಿಯಾಗಿ ಹಲವರಿಗೆ ಗಾಯಗಳಾಗಿರುವ ಘಟನೆ ಕೊಲ್ಲೂರು ಸಮೀಪದ ದಳಿ ತಿರುವಿನ ಬಳಿ ನಡೆದಿದೆ.   ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದ ಪರಿಣಾಮ ಹಲವರು ಗಾಯಗೊಂಡಿದ್ದು, ಕುಂದಾಪುರ ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪೋಲಿಸರು ಭೇಟಿ ನೀಡಿದ್ದು, ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಲ್ಯಾಡಿಯಲ್ಲಿ ಮುಳಿಯ ಜ್ಯುವೆಲ್ಸ್ “ಸಿಲ್ವರಿಯಾ” ಫ್ರಾಂಚೈಸಿ ಶಾಪ್‍ನ ನೂತನ ಮಳಿಗೆಯ ಕೆಲಸ ಆರಂಭ- ಕಹಳೆ ನ್ಯೂಸ್

ಪುತ್ತೂರಿನ ಪ್ರತಿಷ್ಠಿತ 75 ವರ್ಷಗಳ ಪರಂಪರೆಯ ಮುಳಿಯ ಜ್ಯುವೆಲ್ಸ್ ಉಪ್ಪಿನಂಗಡಿಯ ನೆಲ್ಯಾಡಿಯಲ್ಲಿ ತನ್ನ ಬೆಳ್ಳಿ ಆಭರಣಗಳ “ಸಿಲ್ವರಿಯಾ” ಶೋರೂಂನ್ನ ಆರಂಭಿಸಲಿದೆ. ಆರ್ಕಿಟೆಕ್ ಹಾಗೂ ಇಂಟೀರಿಯರ್ ಡಿಸೈನರ್ ರವೀಶ್ ಅವರಿಗೆ ಮುಳಿಯ ಸಹೋದರರಾದ ಕೇಶವ ಪ್ರಸಾದ್ ಮುಳಿಯ ಕೃಷ್ಣ ನಾರಾಯಣ ಮುಳಿಯ ನಕ್ಷೆಯನ್ನು ನೀಡುವ ಮೂಲಕ ಕೆಲಸವನ್ನು ಆರಂಭಿಸಲಾಯಿತು. ಈ ಸಿಲ್ವರಿಯಾ ಫ್ರಾಂಚೈಸಿ ಶಾಪ್‍ನಲ್ಲಿ ಮಾಸಿಕ ಕಂತುಗಳನ್ನು ಸ್ವೀಕರಿಸಲಾಗಿದ್ದು, ಮುಂದೆ 2-3 ತಿಂಗಳಲ್ಲಿ ಈ ಶೋರೂಂ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜ.12 ರಂದು AU ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅಚಲ್ ಉಬರಡ್ಕ ನಿರ್ದೇಶಿಸಿರುವ ‘ಸಂಘಧ್ಯೇಯ’ ಕಿರುಚಿತ್ರ ಬಿಡುಗಡೆ- ಕಹಳೆ ನ್ಯೂಸ್

ಪುತ್ತೂರು: ಎಯು ಕ್ರಿಯೇಷನ್ಸ್ ಅರ್ಪಿಸುವ, ಅಚಲ್ ಉಬರಡ್ಕ ನಿರ್ದೇಶಿಸಿರುವ 'ಸಂಘಧ್ಯೇಯ' ಕಿರುಚಿತ್ರವು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಜ.12ರಂದು AU Creationsನ ಯೂಟ್ಯೂಬ್ ಚಾನೆಲ್ ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಬಿಡುಗಡೆಗೊಳ್ಳಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯೊಂದಿಗೆ ರಕ್ತದಾನದ ಮಹತ್ವವನ್ನು ತಿಳಿಸುವ ಕಥಾಹಂದರವನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ನವನೀತ ಕೃಷ್ಣ ಜೋಗಿಯಡ್ಕ, ಶ್ರೀವತ್ಸ ಭಾರದ್ವಾಜ್, ಕಿರಣ್ ಕುಮಾರ್ ಶಾಂತಿನಗರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ರಾಸಾಯನಿಕ ಸೋರಿಕೆ : 20 ಮಂದಿ ಅಸ್ವಸ್ಥ – ಕಹಳೆ ನ್ಯೂಸ್

ಮಂಗಳೂರು: ಮೀನು ಸಂಸ್ಕರಣಾ ಘಟಕವೊಂದರಲ್ಲಿ ರಾಸಾಯನಿಕ ಸೋರಿಕೆಯಾಗಿ 20 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು ನಗರದ ಬೈಕಂಪಾಡಿಯಲ್ಲಿರುವ ಎವರೆಸ್ಟ್ ಮೀನು ಸಂಸ್ಕರಣಾ ಘಟಕದಲ್ಲಿ ನಡೆದಿದೆ. ಈ ಘಟಕದಲ್ಲಿ 80 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಲ್ಲಿ 20 ಮಂದಿಗೆ ಉಸಿರಾಟದ ತೊಂದರೆಯುಂಟಾಗಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ನಗರದ ಸುರತ್ಕಲ್‍ನಲ್ಲಿರುವ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಪಣಂಬೂರು...
ದಕ್ಷಿಣ ಕನ್ನಡಸುದ್ದಿ

ದೈವಗಳ ನೇಮೋತ್ಸವ ಸಂದರ್ಭದಲ್ಲಿ ಚಿತ್ರೀಕರಣ ನಿಷೇಧಿಸುವಂತೆ ವಿಹಿಂಪ ಬಜರಂಗದಳ ಭಾರತ್ ಮಾತಾ ಶಾಖೆ ಪಾವೂರು ಹರೇಕಳ ಘಟಕದಿಂದ ಬ್ಯಾನರ್ ಅಳವಡಿಕೆ- ಕಹಳೆ ನ್ಯೂಸ್

ಪಾವೂರು ಹರೇಕಳ ಅಂಬ್ಲಮೊಗರು ಗ್ರಾಮದ ಕಾರಣಿಕದ ಕುತ್ತಿಮುಗೇರು ಜಾತ್ರೆಯ ಸ್ಥಳದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಭಾರತ್ ಮಾತಾ ಶಾಖೆ ಪಾವೂರು ಹರೇಕಳ ಘಟಕದ ವತಿಯಿಂದ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಚಿತ್ರೀಕರಣ ನಿಷೇಧಿಸುವಂತೆ ಮನವಿ ಕೋರುವ ಬ್ಯಾನರ್ ಹಾಕಲಾಗಿದೆ. ‘ನಮ್ಮ ಸತ್ಯಗಳ ವಿಚಾರದಲ್ಲಿ ಶ್ರದ್ಧೆಯನ್ನು ಕಾಪಾಡಬೇಕಾಗಿ ಸರ್ವರಲ್ಲಿ ವಿನಂತಿ’ ಎಂದು ಬ್ಯಾನರ್ ಬರೆಯಲಾಗಿದ್ದು ಈ ಮನವಿಗೆ ಹಿಂದೂ ಭಕ್ತಾಧಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ....
1 13 14 15 16 17 126
Page 15 of 126