Sunday, January 19, 2025

archiveಕಹಳೆ ನ್ಯೂಸ್

ಪುತ್ತೂರು

ಕೃಷ್ಣನಗರ: ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಟೋ ರಿಕ್ಷಾ: ಚಾಲಕನಿಗೆ ಗಾಯ- ಕಹಳೆ ನ್ಯೂಸ್

ಪುತ್ತೂರು: ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರದಲ್ಲಿ ನಡೆದಿದೆ. ಸೇಡಿಯಾಪು ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಕೃಷ್ಣನಗರದಲ್ಲಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ ಅಪಘಾತದಿಂದಾಗಿ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಚಾಲಕ ಸೇಡಿಯಾಪು ನಿವಾಸಿ ಶಿವಪ್ಪ ಎಂಬವರು ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ....
ಸುದ್ದಿ

ಪುತ್ತೂರು: ನಾಳೆ (23ಜೂನ್) ಮುಂಗಾರು ಪೂರ್ವ ನಿರ್ವಹಣೆ ನಿಮಿತ್ತ ವಿದ್ಯುತ್ ನಿಲುಗಡೆ -ಕಹಳೆ ನ್ಯೂಸ್

ಪುತ್ತೂರು: ಮುಂಗಾರು ಪೂರ್ವ ನಿರ್ವಹಣೆ ನಿಮಿತ್ತ ನಾಳೆ ದಿನಾಂಕ 23ಜೂನ್ 2022ರಂದು ಬೆಳಿಗ್ಗೆ ಗಂಟೆ 9ರಿಂದ ಸಾಯಂಕಾಲ ಗಂಟೆ 6ರ ತನಕ ಉಪ್ಪಿನಂಗಡಿ ಎಕ್ಸ್ಪ್ರೆಸ್ ಮತ್ತು ಕಾಂಚನ ಫೀಡರ್ ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದಾಗಿ ಮೆಸ್ಕಾಂ ತಿಳಿಸಿದೆ. ಈ ಮೇಲೆ ತಿಳಿಸಿದ ವಿದ್ಯುತ್ ಫೀಡರ್ ಗಳಿಂದ ವಿದ್ಯುತ್ ಸರಬರಾಜುಆಗುವ ಬೋಳಾಜೆ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಪ್ರದೇಶಗಳ ವಿದ್ಯುತ್ ಬಳಕೆದಾರರು ಗಮನಿಸಬೇಕಾಗಿ ತಿಳಿಸಲಾಗಿದೆ.  ...
ಪುತ್ತೂರು

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಎನ್‌ಸಿಸಿ ಘಟಕ, ಎನ್‌ಎಸ್‌ಎಸ್ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆ-ಕಹಳೆ ನ್ಯೂಸ್

ಪುತ್ತೂರು ಜೂ.೨೧: ಸುದೀರ್ಘ ಇತಿಹಾಸವನ್ನು ಹೊಂದಿರುವ ದೇಶ ಭಾರತ. ಸಾವಿರಾರು ವರ್ಷಗಳ ಹಿಂದಿನ ವಿದೇಶೀ ಆಕ್ರಮಣದ ಹೊರತಾಗಿಯೂ ದೇಶ ತನ್ನ ಸಂಸ್ಕೃತಿ ಸಂಪ್ರದಾಯವನ್ನು ಕಳೆದುಕೊಳ್ಳದೆ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ಅನೇಕ ಶ್ರೇಷ್ಠತೆಗಳಲ್ಲಿ ಯೋಗವೂ ಒಂದು. ಪ್ರಪಂಚವೇ ಯೋಗದೆಡೆಗೆ ನಡೆದದಕ್ಕಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ಯೋಗದ ಮೂಲ ಭಾರತ ಎನ್ನುವುದು ಹೆಮ್ಮೆಯ ವಿಚಾರ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ...
ದಕ್ಷಿಣ ಕನ್ನಡಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ- ಕಹಳೆ ನ್ಯೂಸ್

ಪುತ್ತೂರು: 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.   ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೀಪ್ನಾ ಜೆ (ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿ ಪುತ್ರಿ), ವಿಜ್ಞಾನ...
ಪುತ್ತೂರು

ಕೋಳಿಫಾರಂ ಬಾತ್ ರೂಮ್ ನಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ;ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್; ಆರೋಪಿ ಉಮ್ಮರ್ ವಿರುದ್ಧ ಪ್ರಕರಣ ದಾಖಲು-ಕಹಳೆ ನ್ಯೂಸ್

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿರುವ ಮಹಿಳೆಯ ಮೇಲೆ ಆ ಫಾರ್ಮ್‌ ನ ರೈಟರ್‌ ಅತ್ಯಾಚಾರ ನಡೆಸಿ , ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿ ಪುತ್ತೂರಿನ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ರೈಟರ್ ಆಗಿರುವ ಉಮ್ಮರ್ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೇ.5 ರಂದು ಸಂತ್ರಸ್ತೆಯು ಕೋಳಿ ಫಾರ್ಮಿನ ಬಾತ್‌ರೂಮ್‌ನಲ್ಲಿದ್ದ ವೇಳೆ ಆಲ್ಲಿಗೆ...
ದಕ್ಷಿಣ ಕನ್ನಡಪುತ್ತೂರು

ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು : ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಸನ್ಮಾನ – ಕಹಳೆ ನ್ಯೂಸ್

ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು : ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಸನ್ಮಾನ ಕಾರ್ಯಕ್ರಮ ಇಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ೮ ವರುಷದ ಸಾರ್ಥಕ ಆಡಳಿತದ ಅಂಗವಾಗಿ ಇಂದು ಬಂಟ್ವಾಳ ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ, ವಿಕಾಸ್ ತೀರ್ಥ ಬೈಕ್ ಜಾಥಾ ಕಾರ್ಯಕ್ರಮ ನಡೆದು ಬಳಿಕ, ಸಭಾ ಕಾರ್ಯಕ್ರಮ ನಡೆದಿದೆ. ಈ ವೇಳೆ ಬಿಜೆಪಿ ಯುವಮೋರ್ಚಾ ದಕ್ಷಿಣ...
ಪುತ್ತೂರುಸುದ್ದಿ

ಪುತ್ತೂರು: ರೈಲು ಬಡಿದು ಕಡಬ ಮೂಲದ ಕಾರ್ತಿಕ್ ಮೃತ್ಯು-ಕಹಳೆ ನ್ಯೂಸ್ 

ಪುತ್ತೂರು: ರೈಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಕಬಕ ಸಮೀಪದ ಮಿತ್ತೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್ (24) ಎನ್ನಲಾಗಿದೆ. ಕಾರ್ತಿಕ್ ಮಿತ್ತೂರಿನ ಕಿರುಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೂರು ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆ ಬಂದಿದ್ದ ಅವರು ಮೇ.15 ರಂದು...
ಬೆಂಗಳೂರುಸಿನಿಮಾಸುದ್ದಿ

ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿ ಮೇಲೆ ಹಲ್ಲೆ ಆರೋಪ : ನಟ ಧನ್ವೀರ್ ವಿರುದ್ಧ ಎಫ್ ಐ ಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿಗೆ ನಟ ಧನ್ವೀರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಸ್. ಸಿ .ರಸ್ತೆಯಲ್ಲಿನ ಅನುಪಮಾ ಥಿಯೇಟರ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಟನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ಧನ್ವೀರ್ ಅನುಪಮಾ ಥಿಯೇಟರ್‍ಗೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರಶೇಖರ್ ಎಂಬವರು ಧನ್ವೀರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಆದರೆ ಧನ್ವೀರ್ ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ....
1 2 3 4 126
Page 2 of 126