Wednesday, January 22, 2025

archiveಕಹಳೆ ನ್ಯೂಸ್

ಸುದ್ದಿ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ ; ಶಾಸಕ ಡಾ. ಭರತ್ ಶೆಟ್ಟಿ ಭೇಟಿ – ಕಹಳೆ ನ್ಯೂಸ್

ಮಂಗಳೂರು: ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಹಾಗೂ ಬೊಂದೇಲ್ - ಮಂಗಳ ಜ್ಯೋತಿ ಸಂಪರ್ಕಿಸುವ ಪಚ್ಚನಾಡಿ ಮುಖ್ಯ ರಸ್ತೆ, ಎರಡೂ ಬದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವೇಗ ಪಡೆದು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸುವ ಮುನ್ನ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಲು ಪಚ್ಚನಾಡಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ರವರು ಭೇಟಿ...
ಸುದ್ದಿ

ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ `ಮಾಮ್ ಇನ್‍ಸ್ಪೈರ್ ಅವಾರ್ಡ್’ ಪ್ರಶಸ್ತಿ ಪ್ರದಾನ – ಕಹಳೆ ನ್ಯೂಸ್

ಮಂಗಳೂರು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ `ಮಾಮ್ ಇನ್‍ಸ್ಪೈರ್ ಅವಾರ್ಡ್' ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ, ಅಕ್ಷರಸಂತ ಹರೇಕಳ ಹಾಜಬ್ಬ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸದತ್ತ ಗಮನ ಹರಿಸಬೇಕು. ಹರೇಕಳದ ಮೂಲೆಯಲ್ಲಿದ್ದ ನನ್ನನ್ನು ಮಾಧ್ಯಮ ಗುರುತಿಸಿ...
ಪುತ್ತೂರು

ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕ- ರಕ್ಷಕ ಸಂಘದ ಸಭೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾಗಿ ಪೋಷಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರಿನ ಖ್ಯಾತ ಹೃದಯ ತಜ್ಞ ಡಾ. ಜೆ.ಸಿ.ಅಡಿಗ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸಂಸ್ಕಾರ ಭರಿತ ಶಿಕ್ಷಣ, ಯೋಗ, ಭಗವದ್ಗೀತಾ ಪಠಣ ಮುಂತಾದವುಗಳ ಜೊತೆಗೆ ನೀಟ್, ಸಿಇಟಿ, ಎನ್‍ಡಿಎ, ಎನ್‍ಎಟಿಎ ಕೋಚಿಂಗ್ ತರಗತಿಗಳೂ ಚೆನ್ನಾಗಿ ನಡೆಯುತ್ತಾ ಇದೆ. ಪೋಷಕರೆಲ್ಲಾ ತಮ್ಮ ಮಕ್ಕಳ ಜೊತೆಗಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ...
ಕಡಬ

ಯುವವಾಹಿನಿ(ರಿ.) ಕಡಬ ಘಟಕದ ಪದಗ್ರಹಣ ಸಮಾರಂಭ-2021, ನೂತನ ಅಧ್ಯಕ್ಷರಾಗಿ ಪ್ರವೀಣ್ ಓಂಕಲ್ ಆಯ್ಕೆ- ಕಹಳೆ ನ್ಯೂಸ್

ಕಡಬ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಕಡಬ ಘಟಕದ 2021ನೇ ಸಾಲಿನ ಪದಗ್ರಹಣ ಸಮಾರಂಭ ನಿನ್ನೆ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಸಭಾಂಗಣದಲ್ಲಿ ನೆರವೇರಿದೆ. ಕಾರ್ಯಕ್ರಮವನ್ನು ಕಡಬ ಮೆಸ್ಕಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಜಿ ಕುಮಾರ್ ಉದ್ಘಾಟಿಸಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಕಡೆಂಜೆಯವರನ್ನು ಸನ್ಮಾನಿಸಲಾಯಿತು. ಶಿವಪ್ರಸಾದ್ ನೂಚಿಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ, ಡಾ ರಾಜಾರಾಮ್...
ಸುದ್ದಿ

ಮಂಗಳೂರು : ಅನಾರೋಗ್ಯದಿಂದ ಕೊನೆ ಉಸಿರೆಳೆದ ಬಾಂಬ್ ಪತ್ತೆ ದಳದ ಶ್ವಾನ ಲೀನಾ ‘ಡೋಲಿ’- ಕಹಳೆ ನ್ಯೂಸ್

ಮಂಗಳೂರು: ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್)ಯ ಶ್ವಾನದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಂಬ್ ಪತ್ತೆ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ. ಲೀನಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ನ.16ರಿಂದ ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ಆಕೆಗೆ ಗ್ಲುಕೋಸ್ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನ.21ರಂದು ಸಾವಿಗೀಡಾಗಿದೆ. ಲೀನಾಳನ್ನು ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. 2020...
ಸಂತಾಪ

ಗದಗ : ಹಾಲಕೇರಿ ಮಠದ ಪೀಠಾಧಿಪತಿ ಡಾ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯ – ಕಹಳೆ ನ್ಯೂಸ್

ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ, ಶ್ರೀ ಡಾ.ಸಂಗನಬಸವ (ಅಭಿನವ ಅನ್ನದಾನೇಶ್ವರ) ಮಹಾ ಸ್ವಾಮಿಜಿ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿಯನ್ನು ಬೆಂಗಳೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗದಗ ಜಿಲ್ಲೆಯ ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಅನ್ನದಾನೇಶ್ವರ ಪರಮಪೂಜ್ಯ ಶ್ರೀ ಡಾ.ಸಂಗನಬಸವ ಸ್ವಾಮೀಜಿಗಳು 128 ಶಾಖಾ ಮಠ, 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವರು ಸಮಾಜಕ್ಕೆ ಅವಿರತ ಸೇವೆ ಸಲ್ಲಿಸಿದ್ದರು. ಇಂದು ಮುಖ್ಯಮಂತ್ರಿಗಳಾದ...
ಪುತ್ತೂರು

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ನೀಟ್, ಜೆಇಇ, ಕೆಸಿಇಟಿ ಪರೀಕ್ಷಾ ತಯಾರಿ ಕಾರ್ಯಗಾರ- ಕಹಳೆ ನ್ಯೂಸ್

ಪುತ್ತೂರು: ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ABSOLUTE LEARNING ACADEMY ಇದರ ಸಹಯೋಗದೊಂದಿಗೆ ನೀಟ್, ಜೆಇಇ, ಕೆಸಿಇಟಿ ಇದರ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಗೋಕುಲನಾಥ್ ಮಾತನಾಡುತ್ತಾ ಪ್ರಗತಿ ಸ್ಟಡಿ ಸೆಂಟರ್ ಬೆಳೆದುಬಂದ ರೀತಿಯ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರಮೋದ್ ಹೆಚ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಪ್ರೌಢ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ...
ಸುದ್ದಿ

ಮಂಗಳೂರು: ಅಪ್ರಾಪ್ತ ಬಾಲಕಿಯ ಮೃತದೇಹ ಚರಂಡಿಯಲ್ಲಿ ಪತ್ತೆ-ಅತ್ಯಾಚಾರ ಶಂಕೆ..!! – ಕಹಳೆ ನ್ಯೂಸ್

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಹತ್ಯೆ ಮಾಡಿ ಪಾಪಿಗಳು ಚರಂಡಿಯಲ್ಲಿ ಮೃತದೇಹ ಎಸೆದ ಅಮಾನವೀಯ ಘಟನೆ ಉಳಾಯಿಬೆಟ್ಟು ಪರಾರಿ ಎಂಬಲ್ಲಿ ನಡೆದಿದೆ.   ಪರಾರಿ ಸಮೀಪದ ಕಾರ್ಖಾನೆಯ ಕಾರ್ಮಿಕರೊಬ್ಬರ ಮಗಳು ನ.21ರ ಸಂಜೆ ನಾಲ್ಕು ಗಂಟೆಯಿಂದ ನಾಪತ್ತೆಯಾಗಿದ್ದಳು. ಬಾಲಕಿಗಾಗಿ ಕಾರ್ಖಾನೆ ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆಸಲಾಗಿದ್ದು, ಬಳಿಕ ಕಾರ್ಖಾನೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರು ಅದಾಗಲೇ ಬಾಲಕಿ ಸಾವನ್ನಪ್ಪಿದ್ದಳು. ಬಾಲಕಿಯನ್ನು ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದವರೇ...
1 43 44 45 46 47 126
Page 45 of 126